ETV Bharat / state

ಒಂದೇ ದಿನ ಮೂರು ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ ; ಸಿಸಿಟಿವಿ ಕ್ಯಾಮರಾ ಮರೆಮಾಚಿದ ಮುಸುಕುಧಾರಿ - money stolen - MONEY STOLEN

ಉತ್ತರ ಕನ್ನಡದ ಕೋಡಿಭಾಗದ ಖಾಫ್ರಿ ದೇವಸ್ಥಾನದ ಹಾಲ್​ ಹಾಗೂ ಗರ್ಭಗುಡಿ ಹತ್ತಿರ ಇರುವ ಎರಡು ಹುಂಡಿ ಒಡೆದು ನಾಣ್ಯ ಹಾಗೂ ಹಣ ಕಳ್ಳತನ ಮಾಡಲಾಗಿದೆ. ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Temple
ದೇವಸ್ಥಾನ (ETV Bharat)
author img

By ETV Bharat Karnataka Team

Published : Sep 7, 2024, 10:08 AM IST

ಖಾಫ್ರಿ ದೇವಸ್ಥಾನದ ಹುಂಡಿ ಒಡೆದು ಹಣ ಕಳ್ಳತನ (ETV Bharat)

ಕಾರವಾರ (ಉತ್ತರ ಕನ್ನಡ) : ತಾಲೂಕಿನಲ್ಲಿ ಒಂದೇ ರಾತ್ರಿಯಲ್ಲಿ ಸರಣಿ ಕಳ್ಳತನ ಮಾಡಿರುವ ಪ್ರಕರಣ ಶುಕ್ರವಾರ ಬೆಳಕಿಗೆ ಬಂದಿದೆ. ಈ ಕೃತ್ಯದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನಗರದ ಕೋಡಿಭಾಗದ ಖಾಫ್ರಿ ದೇವಸ್ಥಾನದ ಹಾಲ್ ಹಾಗೂ ಗರ್ಭಗುಡಿ ಹತ್ತಿರ ಇರುವ ಎರಡು ಹುಂಡಿ ಒಡೆದು ನಾಣ್ಯ ಹಾಗೂ ಹಣ ಕಳ್ಳತನ ಮಾಡಲಾಗಿದೆ. ಆದರೆ ಖದೀಮರು ದೇವರ ಮೇಲಿರುವ ಬಂಗಾರದ ಆಭರಣವನ್ನು ಮುಟ್ಟಿಲ್ಲ. ಇದಲ್ಲದೆ ಚಿತ್ತಾಕುಲ ಪೊಲೀಸ್ ಠಾಣೆ ವ್ಯಾಪ್ತಿಯ ದುರ್ಗಾದೇವಿ ದೇವಸ್ಥಾನ ಹಾಗೂ ಬೆಳ್ತುಳ ಭಾಗದ ಮಾರುತಿ ದೇವಸ್ಥಾನದಲ್ಲಿಯೂ ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಸದಾಶಿವಗಡದ ದುರ್ಗಾದೇವಿ ದೇವಸ್ಥಾನದ ಕಳ್ಳತನದ ಸಂದರ್ಭದಲ್ಲಿ ಮುಸುಕುಧಾರಿ ಕಳ್ಳ ಒಳ ಹೊಕ್ಕಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಖದೀಮರು ಸಿಸಿ ಕ್ಯಾಮರಾಗೆ ಬಟ್ಟೆ ಅಡ್ಡಇಟ್ಟು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಕಾರವಾರ ನಗರ ಠಾಣೆ ಹಾಗೂ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾಫ್ರಿ ದೇವಸ್ಥಾನವನ್ನ ಆಫ್ರಿಕಾ ಪ್ರಸಿದ್ಧ ಸಂತನ ನೆನಪಿಗಾಗಿ ಕಟ್ಟಲಾಗಿದೆ. ಪೊಲೀಸರು ಶ್ವಾನದಳ ಬಳಸಿ ಕಳ್ಳರ ಜಾಡು ಹಿಡಿಯಲು ತನಿಖೆ ಆರಂಭಿಸಿದ್ದಾರೆ. ದೇವಸ್ಥಾನ ಸಮೀಪದ ಲಾಡ್ಜ್ ಹಾಗೂ ಹೋಟೆಲ್ ಸಿಬ್ಬಂದಿ ಬಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ದೇವಸ್ಥಾನದ ಮೊಕ್ತೆಸರ ಬಳಿ ಮಾಹಿತಿ ಸಂಗ್ರಹಿಸಿದರು.

ಇದನ್ನೂ ಓದಿ : ಹುಂಡಿ ಹಣ ಕಳವು: ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.