ಮೈಸೂರು : ಕೆಆರ್‌ಎಸ್ ಅಣೆಕಟ್ಟೆಯ ಬಳಿ ಟ್ರಯಲ್ ಬ್ಲಾಸ್ಟ್ ನಡೆಸಿದರೆ ಅಪಾಯ. ಇದನ್ನ ರೈತ ಸಂಘ ವಿರೋಧಿಸುತ್ತದೆ ಎಂದು ರಾಜ್ಯ ರೈತ ಸಂಘದ ಹಸಿರು ಸೇನೆಯ ರಾಜಾಧ್ಯಕ್ಷ ಬಡಗಲಪುರ ನಾಗೇಂದ್ರ ಈಟಿವಿ ಭಾರತ್ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಈಟಿವಿ ಭಾರತ ಜತೆ ಮಾತನಾಡಿದ ಅವರು, ಕೆಆರ್ಎಸ್ನ ಬಳಿ ಟ್ರಯಲ್ ಬ್ಲಾಸ್ಟ್ ನಡೆಸುವುದು ಅಪಾಯವಿದೆ ಅನ್ನೋದರ ಬಗ್ಗೆ ಕಳೆದ 20 ವರ್ಷಗಳ ಹಿಂದೆ ದಿವಂಗತ ಪುಟ್ಟಣ್ಣಯ್ಯನವರು ಅಧಿವೇಶದಲ್ಲಿ ಈ ವಿಚಾರ ಚರ್ಚೆ ಮಾಡಿದ್ದರು. ಸರ್ಕಾರ ಕೆಆರ್‌ಎಸ್ ಸುತ್ತಮುತ್ತ 20 ಕಿ. ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುವುದನ್ನ ಕೆಆರ್‌ಎಸ್ ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ನಿಷೇಧ ಮಾಡಿತ್ತು ಎಂದರು.
ಆದರೆ, ಗಣಿಗಾರಿಕೆಗೆ ಲೈಸನ್ಸ್ ಪಡೆದಿರುವ ವ್ಯಕ್ತಿಗಳು ಕೋರ್ಟ್ಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಕೋರ್ಟ್ಗೆ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ ನಡೆಸುವ ಬಗ್ಗೆ ಹೇಳಿತು. ಆದರೆ, ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಯಾವುದೇ ಸೂಚನೆ ನೀಡಿಲ್ಲ. ಆದರೂ ಜಿಲ್ಲಾಡಳಿತ ಗಣಿಗಾರಿಕೆ ನಡೆಸುವರರ ಪರವಾಗಿ ಡ್ಯಾಂ ಬಳಿ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿದೆ ಎಂದು ಹೇಳಿದರು.
ಇದನ್ನ ರಾಜ್ಯ ರೈತ ಸಂಘ ವಿರೋಧಿಸುತ್ತದೆ. ಜನರಿಗೆ ಜೀವ ನದಿಯಾದ ಕೆಆರ್‌ಎಸ್ ಡ್ಯಾಂ ಮುಖ್ಯ. ಆದ್ದರಿಂದ ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್ ನಡೆಸಲು ರೈತ ಸಂಘ ವಿರೋಧ ವ್ಯಕ್ತಪಡಿಸುತ್ತದೆ ಎಂದು ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ಟ್ರಯಲ್ ಬ್ಲಾಸ್ಟ್ಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
''ಗಣಿಗಾರಿಕೆಯವರ ಪರವಾಗಿರುವ ಸರ್ಕಾರಗಳು ಹಠಕ್ಕೆ ಬಿದ್ದು ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿದ್ದಾರೆ. ಆದರೆ ಇದನ್ನ ವಿರೋಧಿಸಿ ನಾಳೆ ಮಂಡ್ಯದಲ್ಲಿ ರೈತ ಸಂಘದ ಸಭೆ ಕರೆಯಲಾಗಿದೆ. ನನಗೆ ಡ್ಯಾಂ ಸುರಕ್ಷತೆ ಮುಖ್ಯ. ಈಗ ಕೆಆರ್ಎಸ್ಗೆ 92 ವರ್ಷಗಳಾಗಿದ್ದು, ಈ ಡ್ಯಾಂನ ಸುರಕ್ಷತೆ ದೃಷ್ಟಿಯಿಂದ ಡ್ಯಾಂ ಬಳಿ ಟ್ರಯಲ್ ಬ್ಲಾಸ್ಟ್ ನಡೆಸುವುದನ್ನ ರೈತ ಸಂಘ ವಿರೋಧಿಸುತ್ತದೆ'' ಎಂದು ಮಂಡ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೇಗೌಡ ಹೇಳಿದರು.
ಇದನ್ನೂ ಓದಿ : ತಜ್ಞರ ತಂಡದ ವಿರುದ್ಧ ಸಿಡಿದೆದ್ದ ರೈತರು; ಕೆಆರ್‌ಎಸ್ ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಸ್ಫೋಟ ತಾತ್ಕಾಲಿಕ ಸ್ಥಗಿತ