ETV Bharat / state

ಡಿಯರ್ ಅಂತ ಮೆಸೇಜ್ ಮಾಡಬೇಡ ಎಂದಿದ್ದಕ್ಕೆ ಮನೆ ಬಿಟ್ಟೋದ ಪತ್ನಿ: ಪೊಲೀಸರ ಮೊರೆ ಹೋದ ಪತಿ! - wife left the house - WIFE LEFT THE HOUSE

ಪತಿ ವಾಟ್ಸ್​ಆ್ಯಪ್​ನಲ್ಲಿ ಡಿಯರ್ ಅಂತ ಮೆಸೇಜ್ ಹಾಕಬೇಡ ಎಂದಿದ್ದಕ್ಕೆ ಪತ್ನಿ ಮನೆ ಬಿಟ್ಟು ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು
ಬೆಂಗಳೂರು (ETV Bharat)
author img

By ETV Bharat Karnataka Team

Published : Jun 8, 2024, 8:06 PM IST

ಬೆಂಗಳೂರು: ಪತಿ ವಾಟ್ಸ್​ಆ್ಯಪ್​ನಲ್ಲಿ ಡಿಯರ್ ಅಂತ ಮೆಸೇಜ್ ಹಾಕಬೇಡ ಎಂದಿದ್ದಕ್ಕೆ ಪತ್ನಿ ಮನೆ ಬಿಟ್ಟು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.

ಮಹಾಲಕ್ಷ್ಮೀ ಲೇಔಟ್ ಠಾಣಾ ವ್ಯಾಪ್ತಿಯ ಮೈಕೋ ಲೇಔಟ್​ನಲ್ಲಿ ದಿಲೀಪ್ ಕುಮಾರ್ ಮತ್ತು ರಶ್ಮಿ ದಂಪತಿ ಮಕ್ಕಳೊಂದಿಗೆ ವಾಸವಾಗಿದ್ದರು. ಜೂ. 4 ರಂದು ಮನೆಯಲ್ಲಿರುವಾಗ ಪತ್ನಿ ಮೊಬೈಲ್​ನಲ್ಲಿ ಗುಡ್​ ಮಾರ್ನಿಂಗ್​ ಡಿಯರ್​ ಎಂಬ ಮೆಸೇಜ್ ಇತ್ತು. ಇದನ್ನು ನೋಡಿದ ಪತಿ ದಿಲೀಪ್ ಕುಮಾರ್, ಡಿಯರ್ ಅಂತ ಮೆಸೇಜ್ ಹಾಕಬೇಡ. ಸರ್ ಅಥವಾ ಅಣ್ಣ ಅಂತ ಮೆಸೇಜ್​ ಕಳಿಸು ಎಂದು ಪತ್ನಿಗೆ ಸೂಚಿಸಿದ್ದರು.

ಇದರಿಂದ ಕೆರಳಿದ ಪತ್ನಿ ವಾಗ್ವಾದ ನಡೆಸಿದ್ದರು. ಬಳಿಕ ಪತಿ, ಪತ್ನಿಯನ್ನು ಸಮಾಧಾನಪಡಿಸಿದ್ದರು. ಆದರೆ ಪತ್ನಿ ಅದೇ ದಿನ ಮಧ್ಯಾಹ್ನ ಫೋನ್​ ಸ್ವಿಚ್ಢ್​ ಆಫ್​ ಮಾಡಿಕೊಂಡು ಮನೆ ಬಿಟ್ಟು ತೆರಳಿದ್ದರು. ಪತ್ನಿಯ ಪತ್ತೆಗೆ ಪತಿ ಎಷ್ಟೇ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ದಿಲೀಪ್ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದಾರೆ. ಪತ್ನಿ ಹುಡುಕಿಕೊಡಿ ಎಂದು ಪೊಲೀಸರಿಗೆ ಮೊರೆಯಿಟ್ಟಿದ್ದಾರೆ.

ಇದನ್ನೂ ಓದಿ: ವ್ಯಕ್ತಿ ಹತ್ಯೆಮಾಡಿ ಮೃತದೇಹ ತುಂಡು ತುಂಡಾಗಿ ಕತ್ತರಿಸಿದ್ದ ಹಂತಕ: 3 ಚೀಲಗಳಲ್ಲಿ ತುಂಬಿ ಮೋರಿಗೆ ಎಸೆದಿದ್ದ ಆರೋಪಿ ಬಂಧನ - murder case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.