ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಈಗ ಶಬ್ಧ ಮಾಲಿನ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಬೈಕ್ ಮೂಲಕ ಕರ್ಕಶ ಶಬ್ಧ ಮಾಡಿ ಅವಳಿ ನಗರದಲ್ಲಿ ಶಬ್ಧ ಮಾಲಿನ್ಯ ಉಂಟು ಮಾಡುವ ಬೈಕ್ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
![bikes silencer silencer destroyed Hubli Dharwad Police](https://etvbharatimages.akamaized.net/etvbharat/prod-images/31-03-2024/kn-hbl-02-sailencer-roller-av-7208089_31032024132605_3103f_1711871765_764.jpg)
ಡಿಸಿಪಿ ಟ್ರಾಫಿಕ್ ಆ್ಯಂಡ್ ಕ್ರೈಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕರ್ಕಶ ಶಬ್ಧ ಮಾಡುವ ಬೈಕ್ ಸವಾರರ ಬೈಕ್ನ ಸೈಲೆನ್ಸರ್ಗಳನ್ನು ವಶಕ್ಕೆ ಪಡೆದು ರೋಡ್ ರೋಲರ್ ಮೂಲಕ ಪುಡಿ ಪುಡಿ ಮಾಡಿದ್ದಾರೆ. ಬೈಕ್ ಮೂಲಕ ಶಬ್ಧ ಮಾಲಿನ್ಯ ಮಾಡಿದವರಿಗೆ ಬಿಸಿ ಮುಟ್ಟಿಸಿದ್ದಾರೆ.
![bikes silencer silencer destroyed Hubli Dharwad Police](https://etvbharatimages.akamaized.net/etvbharat/prod-images/31-03-2024/kn-hbl-02-sailencer-roller-av-7208089_31032024132605_3103f_1711871765_515.jpg)
ಈಗಾಗಲೇ ಬೇಕಾಬಿಟ್ಟಿಯಾಗಿ ಶಬ್ಧ ಮಾಡಿ ಬೈಕ್ ಚಾಲನೆ ಮಾಡುವ ಮೂಲಕ ಜನರಿಗೆ ತೊಂದರೆ ಕೊಡುವವರನ್ನು ಪತ್ತೆ ಹಚ್ಚಲು ಪೊಲೀಸರು ಬೈಕ್ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಬೈಕ್ನ ಸೈಲೆನ್ಸರ್ಗಳನ್ನು ವಶಕ್ಕೆ ಪಡೆದು ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದರು. ಇದೀಗ ಅವೆಲ್ಲಾ ಬೈಕ್ನ ಸೈಲೆನ್ಸರ್ಗಳನ್ನು ನಾಶ ಪಡಿಸಲಾಗಿದೆ.
![bikes silencer silencer destroyed Hubli Dharwad Police](https://etvbharatimages.akamaized.net/etvbharat/prod-images/31-03-2024/kn-hbl-02-sailencer-roller-av-7208089_31032024132605_3103f_1711871765_331.jpg)
ಇದನ್ನೂ ಓದಿ: ಹಿಂಡಲಗಾ ಜೈಲಿನ ಮೇಲೆ ಪೊಲೀಸರ ದಿಢೀರ್ ದಾಳಿ: ಮೊಬೈಲ್ ಚಾರ್ಜರ್, ಬ್ಲೂಟೂತ್ ಡಿವೈಸ್ ವಶಕ್ಕೆ - Hindalaga Jail