ETV Bharat / state

ದ್ವಿತೀಯ ಪಿಯುಸಿಯಲ್ಲಿ ಈ ಬಾರಿ ಇವರೇ ನೋಡಿ ಟಾಪರ್ಸ್​​​; ಹೀಗಿದೆ ಡಿಟೇಲ್ಸ್​​​ - 2nd PUC toppers - 2ND PUC TOPPERS

2023-24 ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕಲಾ, ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳ ಮಾಹಿತಿ ಇಲ್ಲಿದೆ.

ದ್ವಿತೀಯ ಪಿಯುಸಿ ಟಾಪರ್
ದ್ವಿತೀಯ ಪಿಯುಸಿ ಟಾಪರ್
author img

By ETV Bharat Karnataka Team

Published : Apr 10, 2024, 12:30 PM IST

Updated : Apr 10, 2024, 12:46 PM IST

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಸಲ 81.15 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದು 2023 ಕ್ಕಿಂತ ಶೇ 6.48ರಷ್ಟು ಹೆಚ್ಚು. ಕಳೆದ ಬಾರಿ 74.67ರಷ್ಟು ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದಿದ್ದರು. ಈ ಬಾರಿ ಮೂರೂ ವಿಭಾಗಗಳಲ್ಲಿನ ಟಾಪರ್​ಗಳ ಕುರಿತಾದ ಮಾಹಿತಿ ಇಲ್ಲಿದೆ.

ಕಲಾ ವಿಭಾಗ: ಮೂವರು ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಜಯನಗರದ ಎನ್.ಎಂ.ಕೆ.ಆರ್​.ವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಮೇಧಾ ಡಿ., ವಿಜಯಪುರದ ಎಸ್​.ಎಸ್. ಪಿಯು ಕಾಲೇಜಿನ ವಿದ್ಯಾರ್ಥಿ ವೇದಾಂತ್​ ನಾವಿ ಹಾಗೂ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಇಂದು INDP ಪಿಯು ಕಾಲೇಜು ವಿದ್ಯಾರ್ಥಿನಿ ಕವಿತಾ ಬಿ.ವಿ. ಅವರು ಜಂಟಿಯಾಗಿ ಟಾಪರ್​ ಆಗಿದ್ದಾರೆ.

ಈ ಮೂವರೂ ವಿದ್ಯಾರ್ಥಿಗಳು 600ಕ್ಕೆ ತಲಾ 596 ಅಂಕ ಪಡೆದಿದ್ದಾರೆ. ಧಾರವಾಡದ ಕೆಇಬಿ ಪಿಯು ಕಾಲೇಜಿನ ವಿದ್ಯಾರ್ಥಿನಿ ರವಿನಾ ಸೋಮಪ್ಪ ಲಮಾಣಿ 595 ಅಂಕಗಳೊಂದಿಗೆ ದ್ವಿತೀಯ ಹಾಗೂ ದಕ್ಷಿಣ ಕನ್ನಡದ ಪುತ್ತೂರಿನ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿನಿ ಪುರೋಹಿತ ಖುಷಿಬೆನ್​​ ರಾಜೇಂದ್ರಕುಮಾರ್​ ಅವರು 594 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.​

ವಿಜ್ಞಾನ ವಿಭಾಗ: ಧಾರವಾಡದ ವಿದ್ಯಾನಿಕೇತನ ಎಸ್.ಸಿ ಪಿಯು ಕಾಲೇಜಿನ ವಿದ್ಯಾರ್ಥಿನಿ ವಿದ್ಯಾಲಕ್ಷ್ಮೀ ಪ್ರಥಮ ಸ್ಥಾನ ಪಡೆದಿದ್ದು, 598 ಅಂಕಗಳನ್ನು ಗಳಿಸಿದ್ದಾರೆ. ಮೈಸೂರಿನ ಆದಿಚುಂಚನಗಿರಿ ಪಿಯು ಕಾಲೇಜಿನ ವಿದ್ಯಾರ್ಥಿ ಕೆ.ಹೆಚ್​. ಉರ್ವೀಶ್​ ಪ್ರಶಾಂತ್​ 597 ಅಂಕ ಪಡೆದು ದ್ವೀತಿಯ ಸ್ಥಾನದಲ್ಲಿದ್ದಾರೆ. ಉಡುಪಿಯ ವಿದ್ಯೋದಯ ಪಿಯು ಕಾಲೇಜಿನ ವೈಭವಿ ಆಚಾರ್ಯ, ಮೈಸೂರಿನ ಆರ್​ವಿಪಿಬಿ ಪಿಯು ಕಾಲೇಜಿನ ಜಾನ್ಹವಿ ತುಮಕೂರ್​ ಗುರುರಾಜ್​ ಹಾಗೂ ಮೂಡುಬಿದಿರೆಯ ಎಕ್ಸಲೆಂಟ್​ ಪಿಯು ಕಾಲೇಜಿನ ವಿದ್ಯಾರ್ಥಿ ಗುಣಸಾಗರ್​ ಡಿ. ಕೂಡ 597 ಅಂಕ ಪಡೆದು ದ್ವೀತಿಯ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಜಯನಗರದಲ್ಲಿನ ಆರ್​ವಿ ಪಿಯು ಕಾಲೇಜು ಎನ್​ಎಂಕೆಆರ್​ವಿ ಕ್ಯಾಂಪಸ್​ ವಿದ್ಯಾರ್ಥಿನಿ ಫಾತಿಮಾ ಇಮ್ರಾನ್​ 596 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.

ವಾಣಿಜ್ಯ ವಿಭಾಗ: ತುಮಕೂರಿನ ವಿದ್ಯಾನಿಧಿ ಇಂಡ್​ ಪಿಯು ಕಾಲೇಜಿನ ಜ್ನಾನವಿ ಎಂ. 597 ಅಂಕ ಪಡೆದು ಪ್ರಥಮ ರ‍್ಯಾಂಕ್​​ ಪಡೆದಿದ್ದಾರೆ. ಶಿವಮೊಗ್ಗದ ಕುಮದ್ವತಿ ವಿಜ್ಞಾನ ಹಾಗೂ ವಾಣಿಜ್ಯ​ ಪಿಯು ಕಾಲೇಜಿನ ವಿದ್ಯಾರ್ಥಿ ಪವನ್​ ಎಂ.ಎಸ್​. 596 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾಗೆಯೇ ಉಡುಪಿಯ ಪೂರ್ಣಪ್ರಜ್ಞ ಪಿಯು ಕಾಲೇಜಿನ ವಿದ್ಯಾರ್ಥಿ ಹರ್ಷಿತ್​ ಎಸ್​.ಹೆಚ್​., ದಕ್ಷಿಣ ಕನ್ನಡ ಜಿಲ್ಲೆಯ ಕೊಡಿಯಾಲಬೈಲ್​ನ ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಬಿ. ತುಳಸಿ ಪೈ, ಬೆಂಗಳೂರಿನ ಮಲ್ಲೇಶ್ವರಂನ ಎಂಇಎಸ್​ ಪಿಯು ಕಾಲೇಜಿನ ವಿದ್ಯಾರ್ಥಿನಿ ತೇಜಸ್ವಿನಿ ಕೆ. ಕಾಲೆ ಅವರು ತಲಾ 596 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಎಸ್​ಬಿ ಮಹವೀರ್​​ ಜೈನ್​ ಪಿಯು ಕಾಲೇಜಿನ ವೈಷ್ಣವಿ .ಪಿ.ಎಂ. 595 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಪಿಯುಸಿ ಫಲಿತಾಂಶ; ಎಂದಿನಂತೆ ದಕ್ಷಿಣ ಕನ್ನಡವೇ ಫಸ್ಟ್​ - ಈ ಬಾರಿ ಗದಗ ಲಾಸ್ಟ್​​​: ಶೇ. 81.15ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ - 2nd Puc Results

Last Updated : Apr 10, 2024, 12:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.