ETV Bharat / state

ಹುಟ್ಟುಹಬ್ಬಕ್ಕೆ ಬಟ್ಟೆ ತಂದಿಟ್ಟಿದ್ದೆ, ನಮ್ಮ ಮನೆ ದೇವರಾಗಿದ್ದ ಮಗಳ ಪ್ರಾಣವೇ ಹೋಯ್ತು; ತಂದೆಯ ಕಣ್ಣೀರು - BIKE SHOWROOM FIRE ACCIDENT

ಎಲೆಕ್ಟ್ರಿಕಲ್​​ ಬೈಕ್​​ ಶೋರೂಂನಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿರುವ ಯುವತಿಯ ತಂದೆ 'ತನ್ನ ಮಗಳು ಮನೆ ದೇವರು. ಇಂದು ಅವಳ ಹುಟ್ಟುಹಬ್ಬ. ಇಷ್ಟಾದರೂ ಕಂಪನಿ ಕಡೆಯಿಂದ ಒಂದು ಕರೆಯೂ ಬರಲಿಲ್ಲಾ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೈಕ್​​ ಶೋರೂಂನಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿರುವ ಯುವತಿಯ ತಂದೆ ಕಣ್ಣೀರು
ಬೈಕ್​​ ಶೋರೂಂನಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿರುವ ಯುವತಿಯ ತಂದೆ ಕಣ್ಣೀರು (ETV Bharat)
author img

By ETV Bharat Karnataka Team

Published : Nov 20, 2024, 1:17 PM IST

ಬೆಂಗಳೂರು: "ಇವತ್ತು ಅವಳ ಹುಟ್ಟುಹಬ್ಬವಿತ್ತು. ಇದಕ್ಕಾಗಿ ಹೊಸ ಬಟ್ಟೆ ಖರೀದಿಸಿದ್ದೆ. ಕೇಕ್​ ಕಟ್ ಮಾಡಿ ಸಂಭ್ರಮಿಸಲು ತಯಾರಿ ನಡೆಸಿದ್ದೆ. ಏಕಾಏಕಿ ಮಗಳು ಅಗ್ನಿ ದುರಂತದಲ್ಲಿ ಸಾವನ್ನಪ್ಪುತ್ತಾಳೆಂದು ನಿರೀಕ್ಷೆ ಮಾಡಿರಲಿಲ್ಲ ಸರ್​".. ಇದು ರಾಜಾಜಿನಗರದ ಎಲೆಕ್ಟ್ರಿಕಲ್​​ ಬೈಕ್​​ ಶೋ ರೂಂನಲ್ಲಿ ನಿನ್ನೆ ನಡೆದಿದ್ದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ ಯುವತಿ ತಂದೆ ಆರ್ಮುಗಂ ನುಡಿದ ನೋವಿನ ನುಡಿಗಳಿವು.

ಮಗಳ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಬೇಕಾದ ಮನೆಯಲ್ಲೀಗ ಸೂತಕ ಆವರಿಸಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು 27ನೇ ವರ್ಷಕ್ಕೆ ಮಗಳು ಪ್ರಿಯಾ ಕಾಲಿಡುತ್ತಿದ್ದಳು. ಯಾರದ್ದೋ ನಿರ್ಲಕ್ಷ್ಯಕ್ಕೆ ಬದುಕಿ ಬಾಳಬೇಕಾದ ಯುವತಿ ಇನ್ನಿಲ್ಲವಾಗಿದ್ದಾಳೆ. ಓಕಳಿಪುರಂನಲ್ಲಿರುವ ಯುವತಿ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಮಗಳನ್ನು ಕಳೆದುಕೊಂಡೆವು ಎಂಬ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಮಗಳನ್ನು ಕಳೆದುಕೊಂಡ ತಂದೆಯ ಕಣ್ಣೀರು (ETV Bharat)

ಎಲ್ಲಾ ತಯಾರಿ ಮಾಡಿಕೊಂಡಿದ್ದ ಕುಟುಂಬ: ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಳ ತಂದೆ ಆರ್ಮುಗಂ "ಇಂದು ಮಗಳ ಹುಟ್ಟುಹಬ್ಬವಿತ್ತು‌‌. ಹುಟ್ಟು ಹಬ್ಬವಿದ್ದಿದ್ದರಿಂದ ಬಟ್ಟೆ ತಂದಿಟ್ಟಿದ್ದೆ. ಕೇಕ್ ತರೋದಕ್ಕೆ ಎಲ್ಲಾ ರೆಡಿ ಮಾಡಿಕೊಂಡಿದ್ದೆವು. ಆದರೆ ಮಗಳು ದುರಂತದಲ್ಲಿ ಸಾವನ್ನಪ್ಪುತ್ತಾಳೆ ಅಂತಾ ನಿರೀಕ್ಷಿಸಿದ್ದಿರಲಿಲ್ಲ. ನನ್ನ ಮಗಳು ನಮ್ಮ ಮನೆ ಮಹಾಲಕ್ಷ್ಮಿ, ನಮಗೆ ಅವಳೇ ದೇವರು ಸಾರ್​. ಏನೇನೋ ಕನಸು ಕಂಡಿದ್ದಳು. ಸಿಎ ಓದುವ ಕನಸು ಕಟ್ಟಿಕೊಂಡಿದ್ದಳು, ಮನೆ ಜವಾಬ್ದಾರಿ ಹೊತ್ತಿದ್ದಳು" ಎಂದು ಕಣ್ಣೀರು ಹಾಕಿದರು.

20 ಜನರಲ್ಲಿ ನನ್ನ ಮಗಳು ಮಾತ್ರ ಸಾವು: "ಕಂಪನಿ ಕಷ್ಟ ಅಂದಾಗ ಕಂಪನಿಗಾಗಿ ದುಡಿದಿದ್ದಳು. 20 ಜನ ಇರುವ ಕಂಪನಿಗೆ ಹೆಡ್ ಆಗಿದ್ದಳು. 20 ಜನರಲ್ಲಿ ನನ್ನ ಮಗಳು ಮಾತ್ರ ಸತ್ತೋಗಿದ್ದಾಳೆ ಅಂತಿದ್ದಾರೆ. ಇದು ಹೇಗೆ ಆಗುತ್ತೆ?" ಎಂದು ಪ್ರಶ್ನಿಸಿದ ಆರ್ಮುಗಂ ಅವರು "ಇಷ್ಟೊತ್ತಾದರು ನನ್ನ ಮಗಳನ್ನು ನೋಡಿಲ್ಲ. ಕಂಪನಿಯವರಿಂದ ಒಂದು ಫೋನ್ ಇಲ್ಲ. ನನ್ನ ಸ್ನೇಹಿತ ಕರೆ ಮಾಡಿ ಪ್ರಿಯಾ ಶೋ ರೂಂನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿಸಿದ್ದ. ಆಗ ನಾನು ತಕ್ಷಣಕ್ಕೆ ಆಟೋದಲ್ಲಿ ಸ್ಥಳಕ್ಕೆ ತೆರಳಿದೆ. ನಮಗೆ ನ್ಯಾಯ ಬೇಕು ಸಾರ್​. ತಪ್ಪಿತಸ್ಥ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಎಲೆಕ್ಟ್ರಿಕಲ್ ಬೈಕ್‌​ ಶೋ ರೂಂನಲ್ಲಿ ಅಗ್ನಿ ಅನಾಹುತ ಪ್ರಕರಣ: ಮಾಲೀಕ ನಾಪತ್ತೆ, ಎಫ್ಐಆರ್ ದಾಖಲು

ಇದನ್ನೂ ಓದಿ: ಎಲೆಕ್ಟ್ರಿಕಲ್ ಶೋ ರೂಂನಲ್ಲಿ ಬೆಂಕಿ ಅವಘಡ: ಯುವತಿ ಸಜೀವ ದಹನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.