ETV Bharat / state

ಬರಪೀಡಿತ ಹಳ್ಳಿಯ ಕೆರೆಗಳಿಗೆ ತಲುಪಿದ ತುಂಗಭದ್ರೆ: ಜೀವಜಲ ಕಂಡು ಸಂಭ್ರಮಿಸಿದ ಜನ - FARMERS CELEBRATION

ಜಗಳೂರು ತಾಲೂಕು ಕೆರೆಗಳಿಗೆ ತುಂಗಭದ್ರಾ ನದಿನೀರು ಹರಿದು ಬಂದಿದ್ದು ರೈತರು ಸಂತಸಗೊಂಡಿದ್ದಾರೆ.

FARMERS CELEBRATION
ಬರಪೀಡಿತ ಹಳ್ಳಿಯ ಕೆರೆಗಳಿಗೆ ತಲುಪಿದ ತುಂಗಭದ್ರೆ (ETV Bharat)
author img

By ETV Bharat Karnataka Team

Published : Oct 11, 2024, 5:32 PM IST

ದಾವಣಗೆರೆ: ಬರಪೀಡಿತ ಜಗಳೂರು ತಾಲೂಕಿಗೆ ನೀರು ಹರಿಸಿ ರೈತರ ಬಾಳು ಹಸನಾಗಿಸುವ ಮಹತ್ವದ '57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ' ಭಾಗಶಃ ಪೂರ್ಣಗೊಂಡಿದೆ. 660 ಕೋಟಿ ರೂ ವೆಚ್ಚದ ಯೋಜನೆ ಇದಾಗಿದ್ದು, ಈಗಾಗಲೇ ಜಗಳೂರಿನ ಬಹುತೇಕ ಹಳ್ಳಿಗಳ ಕೆರೆಗಳಿಗೆ ತುಂಗಭದ್ರೆ ಹರಿದಿದ್ದಾಳೆ.

ಜಗಳೂರು ತಾಲೂಕಿನ ಕೆರೆಗಳಿಗೆ ನೀರು ತಲುಪಿದ ಬೆನ್ನಲ್ಲೇ ಹಳ್ಳಿ-ಹಳ್ಳಿಗಳಲ್ಲಿ ಜನರು ಸಂಭ್ರಮಿಸುತ್ತಿದ್ದಾರೆ. ಬರಪೀಡಿತ ಭೂಮಿಯಲ್ಲಿ ನೀರು ಕಂಡು ದೇವರನ್ನು ಸ್ಮರಿಸಿ, ನೀರು ಹಿಡಿದು ಕುಣಿದು ಕುಪ್ಪಳಿಸಿದ್ದಾರೆ.

ಬರಪೀಡಿತ ಹಳ್ಳಿಯ ಕೆರೆಗಳಿಗೆ ತಲುಪಿದ ತುಂಗಭದ್ರೆ (ETV Bharat)

ಹರಿಹರದ ತಟದಲ್ಲಿ ಹರಿಯುವ ತುಂಗಭದ್ರಾ ನದಿಯಿಂದ ಪೈಪ್​ಲೈನ್​ ಮೂಲಕ ನೀರನ್ನು ಕೆರೆಗಳಿಗೆ ಹರಿಸಲಾಗುತ್ತಿದೆ.

ಜಗಳೂರಿನ ಗೊಲ್ಲರಹಟ್ಟಿ ಕೆರೆ, ಭರಮಸಮುದ್ರ ಕೆರೆ, ಸಿದ್ದಮ್ಮನಹಳ್ಳಿ ಕೆರೆ ಹಾಗೂ ಕಸವನಹಳ್ಳಿ ಗೋಕಟ್ಟಿ ಕೆರೆಗಳಿಗೆ ಈಗಾಗಲೇ ನೀರು ಹರಿದು ಬಂದಿದೆ. ತುಂಗಭದ್ರಾ ನದಿಯಿಂದಾಗಿ ಜಗಳೂರು ವಿಧಾನಸಭಾ ಕ್ಷೇತ್ರದ 57 ಕೆರೆಗಳು ಭರ್ತಿಯಾಗುತ್ತಿವೆ.

ಇದನ್ನೂ ಓದಿ: ಬರದ ನಾಡು ಜಗಳೂರು ಕೆರೆಗೆ ಹರಿದ ತುಂಗಭದ್ರಾ ‌ನದಿ ನೀರು; ಕುಣಿದು ಕುಪ್ಪಳಿಸಿದ ಜನ - Jagalur lake filled

ETV Bharat Logo

Copyright © 2025 Ushodaya Enterprises Pvt. Ltd., All Rights Reserved.