ETV Bharat / state

ಹುಬ್ಬಳ್ಳಿ: ಹೆಗ್ಗಣಗಳ ವಿರುದ್ಧ ಪೊಲೀಸ್‌ ಠಾಣೆಗೆ ದೂರು ನೀಡಿದ ವ್ಯಕ್ತಿ! - Case Against Bandicoot - CASE AGAINST BANDICOOT

ಗ್ಯಾಸ್​ ಪೈಪ್​ ಕಟ್​ ಮಾಡ್ತವೆ, ನೆಲ ಅಗೆದು ಮಣ್ಣು ಹೊರ ಹಾಕುತ್ತವೆ, ಇದರಿಂದ ನೆಮ್ಮದಿಯೇ ಇಲ್ಲ ಎಂದು ವ್ಯಕ್ತಿಯೊಬ್ಬರು ಹೆಗ್ಗಣಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

CASE AGAINST BANDICOOT OLD HUBLI POLICE STATION  PERSON FILED CASE AGAINST BANDICOOT  DHARWAD
ಹೆಗ್ಗಣಗಳ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ (ಕೃಪೆ: ETV Bharat Karnataka)
author img

By ETV Bharat Karnataka Team

Published : May 29, 2024, 2:50 PM IST

ಹೆಗ್ಗಣಗಳ ವಿರುದ್ದವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ (ETV Bharat)

ಹುಬ್ಬಳ್ಳಿ: ಹೆಗ್ಗಣಗಳ ವಿರುದ್ಧ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಪ್ರಕರಣ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹುಬ್ಬಳ್ಳಿಯ ಆನಂದ ನಗರದ ಅನಿಲ್ ಮುಂಡರಗಿ ಎಂಬುವರು ಹೆಗ್ಗಣಗಳ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಆನಂದ ನಗರ ನಿವಾಸಿಯಾಗಿರುವ ಅನಿಲ್ ಮುಂಡರಗಿ ಅವರಿಗೆ ಪಕ್ಕದ ಮನೆಯ ಹಗ್ಗೆಣಗಳಿಂದ ನೆಮ್ಮದಿ ಹಾಳಾಗಿದೆ. ಪಕ್ಕದ ಮನೆಯ ಹೆಗ್ಗಣಗಳು ಗ್ಯಾಸ್ ಪೈಪ್ ಲೈನ್ ಕಟ್ ಮಾಡಿವೆ. ಅಲ್ಲದೆ ಸಿಂಕ್ ಪೈಪ್ ಲೈನ್ ಕತ್ತರಿಸಿವೆ. ಎಲ್ಲೆಂದರಲ್ಲಿ ನೆಲ ಅಗೆದು ಮಣ್ಣು ಹೊರಹಾಕ್ತಿವೆ. ಮನೆಯಲ್ಲಿ ಎಲ್ಲೆಂದರಲ್ಲಿ ರಂಧ್ರಗಳು ಬಿದ್ದಿವೆ. 15 ರಿಂದ 20 ಹೆಗ್ಗಣಗಳಿಂದ ಈ ಕೃತ್ಯ ನಡೆದಿದೆ. ಪಕ್ಕದ ಮನೆಯವರಿಗೆ ಸಾಕಷ್ಟು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನೀವೇ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು‌ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಿಲಿಂಡರ್ ಸೋರಿಕೆಯಾಗಿ ಅನಾಹುತವಾದ್ರೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದಾರೆ. ಅನಿಲ್​ ಅವರ ದೂರು ಆಧರಿಸಿ ಪಕ್ಕದ ಮನೆಯವರಾದ ಸಿದ್ದು ಅಂಗಡಿ ಅವರನ್ನು ಪೊಲೀಸ್​ ಠಾಣೆಗೆ ಕರೆಯಿಸಿ ಮುಚ್ಚಳಿಕೆ ಬರೆಯಿಸಿಕೊಂಡು ಪೊಲೀಸರು ಕಳುಹಿಸಿದ್ದಾರೆ. ನಾಲ್ಕೈದು ದಿನಗಳಲ್ಲಿ ಹೆಗ್ಗಣಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ‌. ಪಕ್ಕದ ಮನೆಯಲ್ಲಿ ಯಾರೂ ವಾಸವಿಲ್ಲದಿರುವುದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಹೆಗ್ಗಣಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಆಗದೇ ಇದ್ದಲ್ಲಿ ಮತ್ತೆ ಪೊಲೀಸರ ಮೊರೆ ಹೋಗೋದಾಗಿ ಅನಿಲ್ ಮುಂಡರಗಿ ಹೇಳಿದ್ದಾರೆ‌. ಈ ದೂರು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ‌‌.

ಓದಿ: ಭಾರತೀಯರು ತಾವು ಸೇವಿಸುವ ಆಹಾರದ ಗುಣಮಟ್ಟದ ಕುರಿತು ಪ್ರಶ್ನಿಸಬೇಕು: ಝೆರೋಧಾ ಸಿಇಒ ನಿತಿನ್​ ಕಾಮತ್​​ - Nithin Kamath

ETV Bharat Logo

Copyright © 2024 Ushodaya Enterprises Pvt. Ltd., All Rights Reserved.