ETV Bharat / state

ಅಧಿಕ ದರ ವಸೂಲಿ ಮಾಡಿದ ಆಸ್ಪತ್ರೆಗೆ 5 ಲಕ್ಷ ದಂಡ ವಿಧಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ

ಅಧಿಕ ದರ ವಸೂಲಿ ಮಾಡಿದ ಆಸ್ಪತ್ರೆಗೆ ಮಂಗಳೂರು ಜಿಲ್ಲಾ ಗ್ರಾಹಕ ನ್ಯಾಯಾಲಯವು 5 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

district consumer court  fine imposed  Mangaluru  ಜಿಲ್ಲಾ ಗ್ರಾಹಕ ನ್ಯಾಯಾಲಯ  ಅಧಿಕ ದರ ವಸೂಲಿ
ದಂಡ ವಿಧಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ
author img

By ETV Bharat Karnataka Team

Published : Feb 23, 2024, 6:23 PM IST

ಮಂಗಳೂರು: ನಗರದ ನರ್ಸಿಂಗ್ ಹೋಮ್​ನಲ್ಲಿ ಗರ್ಭಿಣಿಯೊಬ್ಬರ ಹೆರಿಗೆಗೆ ನಿಗದಿಗಿಂತ ಅಧಿಕ ದರ ವಸೂಲಿ ಮಾಡಿರುವ ಆರೋಪ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆಸ್ಪತ್ರೆಯ ಆಡಳಿತ ಮಂಡಳಿಗೆ 5 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದೆ.

ಗರ್ಭಿಣಿಯೊಬ್ಬರು ಹೆರಿಗೆಗಾಗಿ 2019ರ ಮೇ 29ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಅವರಿಗೆ ಸಹಜ ಹೆರಿಗೆಯಲ್ಲಿ ಅವಳಿ ಮಕ್ಕಳು ಜನಿಸಿದ್ದವು. ಅವಳಿ ಮಕ್ಕಳ ತೂಕ ಕಡಿಮೆಯಾಗಿರುವುದರಿಂದ ಎನ್‌ಐಸಿಯುಗೆ ದಾಖಲಿಸುವಂತೆ ಹೆರಿಗೆ ವೈದ್ಯರಾದ ನಳಿನಿ ಪೈ ಹಾಗೂ ಮಕ್ಕಳ ವೈದ್ಯ ಮಾರಿಯೋ ಜೆ. ಬುಕೆಲೋ ಸಲಹೆ ನೀಡಿದ್ದರು. ಅದರಂತೆ ಮೇ 29ರಿಂದ ಜೂ.15ರವರೆಗೆ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿತ್ತು.

ಈ ಚಿಕಿತ್ಸೆಗೆ 2019, ಜೂ.15ರಂದು ಮಹಿಳೆ 5,34,791 ರೂ. ಪಾವತಿ ಮಾಡಿದ್ದರು. ಹಾಗೆಯೇ 1.80 ಲಕ್ಷ ರೂ. ವೈದ್ಯ ಮಾರಿಯೊ ಜೆ. ಬುಕೆಲೊ, 25 ಸಾವಿರ ರೂ. ನಳಿನಿ ಪೈಗೆ ಸಂದಾಯ ಮಾಡಲಾಗಿತ್ತು. ಈ ಬಗ್ಗೆ ಮಹಿಳೆಯ ಪತಿ ನ್ಯಾಯವಾದಿ ರೋಶನ್ ರಾಜ್, ಆಸ್ಪತ್ರೆಯಲ್ಲಿ ಅಧಿಕ ವೆಚ್ಚ ವಸೂಲಿ ಮಾಡಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದರು.

ಆರೋಗ್ಯಾಧಿಕಾರಿ ತಾಲೂಕು ವೈದ್ಯಾಧಿಕಾರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು. ಅದರಂತೆ ವರದಿಯನ್ನು ಡಿಹೆಚ್‌ಒಗೆ ನೀಡಿದ್ದರು. ಆದರೆ ಇದರಿಂದ ಸಮಾಧಾನವಾಗದ ರೋಶನ್‌ರಾಜ್, ಪ್ರಧಾನಿ ಮೋದಿ ಹಾಗೂ ಆಗಿನ ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೂ ದೂರು ನೀಡಿದ್ದರು. ಕೇಂದ್ರ ಸರ್ಕಾರವು ಜಿಲ್ಲಾ ಆರೋಗ್ಯ ಅಧಿಕಾರಿಗೆ ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ ಕಾಯ್ದೆ 2017 ಕಲಂ 10ರ ಪ್ರಕಾರ ದೂರನ್ನು ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿತ್ತು. ಇದರಿಂದ ನ್ಯಾಯ ಸಿಗದ ಹಿನ್ನೆಲೆಯಲ್ಲಿ ರೋಶನ್‌ರಾಜ್ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದರು.

ಜಿಲ್ಲಾ ಗ್ರಾಹಕರ ನ್ಯಾಯಾಲಯವು ಮಹಿಳೆ ಮತ್ತು ರೋಶನ್‌ರಾಜ್ ಹಾಗೂ ವೈದ್ಯರ ಅರ್ಜಿಯನ್ನು ಪರಿಶೀಲಿಸಿ ದೂರುದಾರರ ಮತ್ತು ಪ್ರತಿವಾದಿಗಳ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಧೀಶ ಪ್ರಕಾಶ್ ಕೆ ಅವರು 5 ಲಕ್ಷ ರೂ ಹಣವನ್ನು 6 ವಾರದೊಳಗೆ ಆಸ್ಪತ್ರೆ ನೀಡಬೇಕೆಂದು ಆದೇಶ ನೀಡಿದ್ದಾರೆ.

ಓದಿ: 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಭರ್ತಿಗೆ ಕೆಇಎ ಅಧಿಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.