ETV Bharat / state

ಕವಿವಿಯಲ್ಲಿ ಮತ್ತೆ ಕಾಣಿಸಿಕೊಂಡ‌ ಚಿರತೆ: ಸಿಸಿಟಿವಿ ದೃಶ್ಯ ಸೆರೆ - leopard - LEOPARD

ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಚಿರತೆ ಓಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

the-leopard-found-in-karnataka-university
ಕವಿವಿಯಲ್ಲಿ ಚಿರತೆ ಪತ್ತೆ (ETV Bharat)
author img

By ETV Bharat Karnataka Team

Published : Sep 6, 2024, 10:33 PM IST

ಕವಿವಿಯಲ್ಲಿ ಚಿರತೆ ಪತ್ತೆ (ETV Bharat)

ಧಾರವಾಡ : ಕಳೆದ ಆರು ತಿಂಗಳ ಹಿಂದೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಚಿರತೆ ಇಂದು ಸಂಜೆ ಮತ್ತೊಮ್ಮೆ ಕವಿವಿ ಆವರಣದಲ್ಲಿ ಕಾಣಿಸಿಕೊಂಡಿದೆ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಚಿರತೆ ಓಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ‌ ಸೆರೆಯಾಗಿದೆ.

ಕವಿವಿ ಪತ್ರಿಕೋದ್ಯಮ ವಿಭಾಗದ ಬಳಿ ಚಿರತೆ ದಾಟಿರುವುದನ್ನು ಯುವಕ ನೋಡಿ ವಿವಿ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾನೆ. ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಚಿರತೆ ರಸ್ತೆ ಕ್ರಾಸ್ ಮಾಡಿರುವುದು ದೃಢಪಟ್ಟಿದೆ.

ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಕವಿವಿ ಆವರಣದಲ್ಲಿ ಚಿರತೆ ಈ ಹಿಂದಿನಿಂದ ಇದೆ ಎಂದು ಹೇಳಲಾಗಿದೆ. ಕಳೆದ ಕೆಲ ತಿಂಗಳುಗಳ ಹಿಂದೆ ಧಾರವಾಡ ತಾಲೂಕಿ‌ನ ಮನಸೂರ ಗ್ರಾಮದಲ್ಲಿ ಸಹ ಜಾನುವಾರುಗಳ ಮೇಲೆ ದಾಳಿ ಮಾಡಿತ್ತು.

ಇದನ್ನೂ ಓದಿ : ಜಿಗಣಿ ಬಳಿ ಚಿರತೆ ಪ್ರತ್ಯಕ್ಷ ; ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ - Leopard found in jigani

ETV Bharat Logo

Copyright © 2024 Ushodaya Enterprises Pvt. Ltd., All Rights Reserved.