ETV Bharat / state

ರಾಯಚೂರು: ಮನೆಯವರನ್ನು ಕಟ್ಟಿ ಹಾಕಿ ದರೋಡೆ ಮಾಡಿದ ಗ್ಯಾಂಗ್​ - HOUSE ROBBERY - HOUSE ROBBERY

ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ ದರೋಡೆ ಮಾಡಿರುವ ಘಟನೆ ಕಳೆದ ರಾತ್ರಿ ರಾಯಚೂರಲ್ಲಿ ನಡೆದಿದೆ.

Robbery house
ದರೋಡೆಯಾದ ಮನೆ (ETV Bharat)
author img

By ETV Bharat Karnataka Team

Published : Sep 15, 2024, 10:45 AM IST

ರಾಯಚೂರು: ಮನೆಯವರನ್ನು ಕಟ್ಟಿ ಹಾಕಿ ದರೋಡೆ ಮಾಡಿದ ಗ್ಯಾಂಗ್​ (ETV Bharat)

ರಾಯಚೂರು: ಖತರ್ನಾಕ್ ಗ್ಯಾಂಗ್‌ವೊಂದು ಮನೆಯವರನ್ನು ಕಟ್ಟಿಹಾಕಿ ದರೋಡೆ ನಡೆಸಿರುವ ಘಟನೆ ತಡರಾತ್ರಿ ರಾಯಚೂರಲ್ಲಿ ನಡೆದಿದೆ. ಲಕ್ಷ್ಮಿ ನರಸಿಂಹ ಲೇಔಟ್‌ನಲ್ಲಿರುವ ಬಸವನಗೌಡ ಎನ್ನುವರ ಮನೆಯ ಬಾಗಿಲು ಮುರಿದು ಮನೆಯೊಳಗೆ ನುಗ್ಗಿದ ಖದೀಮರು ದರೋಡೆ ನಡೆಸಿದ್ದಾರೆ.

ಮೊದಲೇ ಸಂಚು ರೂಪಿಸಿದ್ದ ಖದೀಮರು, ದರೋಡೆಗೆ ನುಗ್ಗುವ ಮುನ್ನ ಅಕ್ಕಪಕ್ಕದ ಮನೆಗಳಿಗೆ ಹೊರಗಿಂದ ಲಾಕ್ ಮಾಡಿದ್ದಾರೆ. ರಸ್ತೆಯಲ್ಲಿನ, ಮನೆಗಳ ಮುಂದಿನ ಲೈಟ್​ಗಳನ್ನು ಆಫ್ ಮಾಡಿ, ಮನೆ ಬಾಗಿಲು ಮುರಿದು ಒಳ ನುಗ್ಗಿದ್ದಾರೆ. ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಬಳಿಕ ಮನೆಯಲ್ಲಿನ 220 ಗ್ರಾಂ ಬಂಗಾರ, 2 ಕೆಜಿ ಬೆಳ್ಳಿ, 2 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಖದೀಮರ ಚಲನವಲನ ಸೆರೆಯಾಗಿದೆ.

ಘಟನಾ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಇದನ್ನೂ ಓದಿ: ಬೆಂಗಳೂರು: ತಲ್ವಾರ್ ತೋರಿಸಿ ಡೆಲಿವರಿ ಬಾಯ್‌ಗಳನ್ನು ದೋಚುತ್ತಿದ್ದ ಮೂವರ ಬಂಧನ - Robbery Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.