ETV Bharat / state

ಬೆಂಗಳೂರು ಟೆಕ್ ಶೃಂಗಸಭೆ: ನಿಬ್ಬೆರಗುಗೊಳಿಸಿದ ಫ್ಲೈಯಿಂಗ್​ ಮ್ಯಾನ್ ಪ್ರದರ್ಶನ

ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಫ್ಲೈಯಿಂಗ್ ಮ್ಯಾನ್​ ಪ್ರದರ್ಶನ ನೆರೆದಿದ್ದವರನ್ನು ಅಚ್ಚರಿಗೊಳಿಸಿತು.

ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಫ್ಲೈಯಿಂಗ್​ ಮ್ಯಾನ್ ಅದ್ಭುತ ಪ್ರದರ್ಶನ
ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಫ್ಲೈಯಿಂಗ್​ ಮ್ಯಾನ್ ಪ್ರದರ್ಶನ (ETV Bharat)
author img

By ETV Bharat Karnataka Team

Published : 7 hours ago

ಬೆಂಗಳೂರು: ಬೆಂಗಳೂರು ಟೆಕ್ ಶೃಂಗಸಭೆಯಲ್ಲಿನ ಫ್ಲೈಯಿಂಗ್​ ಮ್ಯಾನ್​ ಪ್ರದರ್ಶನ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಟೆಕ್ ಶೃಂಗಸಭೆ ಎಲ್ಲ ಮಿತಿಗಳನ್ನು ಮೀರಿ ಹೊಸ ಸಾಧ್ಯತೆಗಳನ್ನು ಸೃಷ್ಟಿಸುವ ವಿಷಯವಾಗಿದೆ ಹೊರಹೊಮ್ಮಿದೆ.

ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಸಮಾವೇಶವಾದ 27ನೇ ಬೆಂಗಳೂರು ಟೆಕ್ ಶೃಂಗಸಭೆ ಹಲವು ಹೊಸತನದ ರೋಮಾಂಚನದೊಂದಿಗೆ ಮುಕ್ತಾಯ ಕಂಡಿದೆ. ಉದ್ಘಾಟನಾ ಸಮಾರಂಭದಲ್ಲಿನ ಫ್ಲೈಯಿಂಗ್ ಮ್ಯಾನ್​ ಗಮನಾರ್ಹ ಪ್ರದರ್ಶನದ ಜೊತೆಗೆ ಕರ್ನಾಟಕ ಸರ್ಕಾರದ ಸ್ಕಿಲ್ ಡೆವಲಪ್ಮೆಂಟ್ ನೀತಿಗಳು ರಾಜ್ಯದಲ್ಲಿ ಉದ್ಯೋಗಿಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ನಿಗದಿಪಡಿಸಿತು.

ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಫ್ಲೈಯಿಂಗ್​ ಮ್ಯಾನ್ ಅದ್ಭುತ ಪ್ರದರ್ಶನ (ETV Bharat)

ಮೂರು ವರ್ಷಗಳಿಂದ ವೃತ್ತಿಪರವಾಗಿ ಹಾರಾಟ ನಡೆಸುತ್ತಿರುವ ಕಲ್ಫೋನ್​ ಅವರು ಗ್ರಾವಿಟಿ ಇಂಡಸ್ಟ್ರೀಸ್ ಅಭಿವೃದ್ಧಿಪಡಿಸಿದ ಜೆಟ್ ಸೂಟ್ ಬಳಸಿ ಏಕಾಂಗಿಯಾಗಿ ಹಾರಾಟ ನಡೆಸಿ ಅಚ್ಚರಿಗೊಳಿಸಿದರು. ಸಣ್ಣ ಗ್ಯಾಸ್​ ಟರ್ಬೈನ್‌ಗಳಿಂದ ಚಾಲಿತವಾದ ಏಳು ಮಿನಿ-ಜೆಡ್​ ಎಂಜಿನ್‌ಗಳೊಂದಿಗೆ ನೆಲದಿಂದ ಸುಮಾರು 2.5 ಮೀಟರ್ ಎತ್ತರದಲ್ಲಿ ಹಾರಾಡಿ ಪ್ರೇಕ್ಷಕರನ್ನು ಆಕರ್ಷಿಸಿದರು.

ಜೆಟ್​​​​ ಇಂಧನ ಬಳಸುವ ಸೂಟ್​​​ 85 ಮೈಲ್ಸ್​​​​ ಪರ್​ ಹವರ್​ ವೇಗದಲ್ಲಿ ಹಾರಲು ಮತ್ತು 12,000 ಅಡಿ ಎತ್ತರವನ್ನು ತಲುಪಲು ಸಿದ್ಧಪಡಿಸಲಾಗುತ್ತಿದೆ. 1000 ಹೆಚ್.ಪಿ ಪವರ್ ಫುಲ್ ಇಂಜಿನ್‌ಗಳ ಏಳು ಗಂಟೆಗಳವರೆಗೆ ಹಾರಾಟವನ್ನು ನಡೆಸಬಹುದಾಗಿದೆ. ನನ್ನ ತಂಡದೊಂದಿಗೆ ಭಾರತದಲ್ಲಿ ಹಾರಾಟ ನಡೆಸುತ್ತಿರುವುದು ಇದೇ ಮೊದಲಲ್ಲ. ಅದೇ ಆದರೆ ನಾನು ಏಕಾಂಗಿಯಾಗಿ ಹಾರಾಡುತ್ತಿರುವುದು ಇದು ಮೊದಲ ಬಾರಿಯಾಗಿದೆ. 2017ರಲ್ಲಿ ಮೊದಲ ಬಾರಿಗೆ ಅನಾವರಣಗೊಂಡ ನಾನು ಹಾಕುತ್ತಿರುವ ಸೂಟ್​​ ಚಲನೆಯನ್ನು ನಿಖರವಾಗಿ ನ್ಯಾವಿಗೇಟ್​​​ ಮಾಡಲು ರಿಮೋಟ್​​ ಕಂಟ್ರೋಲ್​​ನ್ನು ಹೊಂದಿದ್ದು, ಮನರಂಜನೆಗಾಗಿ ಮಾತ್ರ ವಿನ್ಯಾಸಗೊಳಿಸಲಾಗಿಲ್ಲ ಎಂದು ಕಲ್ಫೋನ್​​ ಹೇಳಿದ್ದಾರೆ.

ಇನ್ನು ತಾಂತ್ರಿಕತೆಯ ಪ್ರಗತಿಗಾಗಿ ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್ ಶ್ರೇಷ್ಠತೆಯ ಕೇಂದ್ರವನ್ನು ರಚಿಸುವುದಾಗಿ ಘೋಷಿಸಿದೆ. ಈ ಹೊಸ ಕೇಂದ್ರವು ಕೃತಕ ಬುದ್ಧಿಮತ್ತೆಯ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಲಿದೆ. ಮೈಕ್ರೋಸಾಫ್ಟ್​​, ಇಂಟೆಲ್​, ಆಕ್ಸೆಂಚರ್ ಮತ್ತು ಐಬಿಎಂ ಸೇರಿದಂತೆ ಪ್ರಮುಖ ಕಂಪನಿಗಳ ಸಹಕಾರವನ್ನು ಬಲಪಡಿಸಲು ಮತ್ತು ಅತ್ಯಾಧುನಿಕ ಬೆಳವಣಿಗೆಗಳನ್ನು ಉತ್ತೇಜಿಸಲು ಒಪ್ಪಂದಗಳಿಗೆ ಸಹಿ ಹಾಕಿದ್ದು ಶೃಂಗಸಭೆಯ ಪ್ರಮುಖ ವಿಚಾರವಾಗಿದೆ.

ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಫ್ಲೈಯಿಂಗ್​ ಮ್ಯಾನ್ ಅದ್ಭುತ ಪ್ರದರ್ಶನ
ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಫ್ಲೈಯಿಂಗ್​ ಮ್ಯಾನ್ ಅದ್ಭುತ ಪ್ರದರ್ಶನ (ETV Bharat)

ಬೆಂಗಳೂರು ಟೆಕ್ ಶೃಂಗಸಭೆ 2024 ಹೊಸ ತಂತ್ರಜ್ಞಾನಗಳ ಸಾಮರ್ಥ್ಯವನ್ನು ಎತ್ತಿ ತೋರಿಸಿದ್ದು, ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯಗಳ ನಿರಂತರ ವಿಸ್ತರಿಸುತ್ತಿರುವ ವ್ಯಾಪ್ತಿಯನ್ನು ಪ್ರದರ್ಶಿಸಿದೆ. ಕಲ್ಫೋನ್‌ನ ಹಾರುವ ಸೂಟ್‌ನಂತಹ ನಂಬಲಾಗದ ಪ್ರದರ್ಶನದೊಂದಿಗೆ ಶೃಂಗಸಭೆ ಟೆಕ್ ಉದ್ಯಮವನ್ನು ಹೊಸ ಎತ್ತರಕ್ಕೆ ಯಶಸ್ವಿಯಾಗಿ ತಲುಪಿಸಿದೆ.

ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಇಸ್ಸಾ ಕಲ್ಫೋನ್ ಅವರ ಅದ್ಭುತ ಪ್ರದರ್ಶನ ನಮ್ಮ ರಾಜ್ಯದ ನಾವೀನ್ಯತೆ ಮತ್ತು ತಾಂತ್ರಿಕ ಪ್ರಗತಿಯ ದೃಷ್ಟಿಯನ್ನು ಸಾಕಾರಗೊಳಿಸಿದೆ. ಈ ಪ್ರದರ್ಶನ 'ಅನ್‌ಬೌಂಡ್​​' ಥೀಮ್ ಪ್ರತಿನಿಧಿಸಿದೆ" ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಟೆಕ್ ಶೃಂಗಸಭೆ: DRDO ವಿಜ್ಞಾನಿಗಳಿಂದ ಅತ್ಯಾಧುನಿಕ ಕಣ್ಗಾವಲು ತಂತ್ರಜ್ಞಾನಗಳ ಅನಾವರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.