ETV Bharat / state

ಜಪಾನ್‌ ಭೇಟಿಯ 2ನೇ ದಿನ: ಟೋಕಿಯೊದಲ್ಲಿ ಮೊದಲ ರೋಡ್‌ ಶೋ ; ಹೂಡಿಕೆ ಅವಕಾಶಗಳ ಪರಿಚಯ - Day 2 of Japan visit

ಕರ್ನಾಟಕ ರಾಜ್ಯ ಸರ್ಕಾರವು ಜಪಾನ್‌ನಲ್ಲಿ ಮಂಗಳವಾರ ಜಾಗತಿಕ ಹೂಡಿಕೆ ಸಂಬಂಧ ರೋಡ್‌ ಶೋ ನಡೆಸಿದೆ.

ಜಪಾನ್‌ ಭೇಟಿಯ 2ನೇ ದಿನ
ಜಪಾನ್‌ ಭೇಟಿಯ 2ನೇ ದಿನ (ETV Bharat)
author img

By ETV Bharat Karnataka Team

Published : Jun 26, 2024, 7:10 AM IST

ಟೋಕಿಯೋ/ಬೆಂಗಳೂರು: ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರವು ಜಪಾನ್‌ನಲ್ಲಿ ಮಂಗಳವಾರ ಆಯೋಜಿಸಿದ್ಧ ರೋಡ್‌ ಶೋದಲ್ಲಿ ಜಪಾನಿನ 150ಕ್ಕೂ ಹೆಚ್ಚು ಕಂಪನಿಗಳಿಗೆ ರಾಜ್ಯದಲ್ಲಿನ ಬಂಡವಾಳ ಹೂಡಿಕೆಯ ಅವಕಾಶಗಳ ಪರಿಚಯ ಮಾಡಿಕೊಟ್ಟಿತು.

ಕರ್ನಾಟಕ ಸರ್ಕಾರದ ಉನ್ನತ ಮಟ್ಟದ ನಿಯೋಗವು ಜಪಾನ್‌ ಭೇಟಿಯ ಎರಡನೇ ದಿನ ಪರಿಸರ ಸಂರಕ್ಷಣೆ ಉಪಕರಣ ತಯಾರಿಸುವ ಬಹುರಾಷ್ಟ್ರೀಯ ಕಂಪನಿ ಡೈಕಿ ಆ್ಯಕ್ಸಿಸ್‌, ಕೈಗಾರಿಕಾ ಯಂತ್ರೋಪಕರಣ ತಯಾರಿಸುವ ಸುಮಿಟೊಮೊ ಹೆವಿ ಇಂಡಸ್ಟ್ರೀಸ್‌ (ಎಸ್‌ಎಚ್‌ಐ), ಸೆಮಿಕಂಡಕ್ಟರ್‌ ಪರಿಕರ ತಯಾರಿಸುವ ರೆನೆಸಸ್‌ ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್‌ ಕಂಪನಿ ಹಾಗೂ ಜಪಾನ್‌ ಸರ್ಕಾರದ ಸಣ್ಣ ಕೈಗಾರಿಕೆಗಳ ಸಂಘಟನೆ ʼಎಸ್‌ಎಂಆರ್‌ಜೆʼ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿತು.

ಈ ಸಭೆಗಳಲ್ಲಿನ ಮಾತುಕತೆಗಳು ರಾಜ್ಯದಲ್ಲಿನ ಬಂಡವಾಳ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಲು ಮತ್ತು ಕರ್ನಾಟಕ ಮತ್ತು ಜಪಾನ್ ನಡುವಣ ಕೈಗಾರಿಕಾ ಸಹಯೋಗ ಬಲಪಡಿಸುವ ಬಗ್ಗೆ ಕೇಂದ್ರೀಕೃತಗೊಂಡಿದ್ದವು. ನಿಯೋಗದ ನೇತೃತ್ವವಹಿಸಿರುವ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್​ ಅವರು, ರಾಜ್ಯದಲ್ಲಿನ ಸದೃಢ ಕೈಗಾರಿಕಾ ಪರಿಸರ ವ್ಯವಸ್ಥೆ, ಉದ್ಯಮಕ್ಕೆ ಅನುಕೂಲಕರ ವಾತಾವರಣ ಮತ್ತು ಸರ್ಕಾರದ ಪ್ರಗತಿಪರ ನೀತಿಗಳನ್ನು ಮನದಟ್ಟು ಮಾಡಿಕೊಟ್ಟರು.

ಡೈಕಿ ಆ್ಯಕ್ಸಿಸ್‌ಇಂಡಿಯಾ ಪ್ರೈವೇಟ್‌ಲಿಮಿಟೆಡ್‌ನ ನಿರ್ದೇಶಕ ರಿಯೊ ರಿಯೊಟಾ ವಾಜಾ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿ ಸುಸ್ಥಿರ ಬೆಳವಣಿಗೆ, ನೀರಿನ ಉಳಿತಾಯ, ಕೊಳಚೆ ನೀರು ನಿರ್ವಹಣಾ ಘಟಕ (ಎಸ್‌ಟಿಪಿ) ಸ್ಥಾಪಿಸುವ ಕುರಿತು ಮಾತುಕತೆ ನಡೆಸಿದರು. ಡೈಕಿ ಆ್ಯಕ್ಸಿಸ್‌ ₹100 ಕೋಟಿ ವೆಚ್ಚದಲ್ಲಿ ಕರ್ನಾಟಕದಲ್ಲಿ ತ್ಯಾಜ್ಯ ನೀರು ನಿರ್ವಹಣಾ ಉಪಕರಣಗಳ ತಯಾರಿಕಾ ಘಟಕ ಸ್ಥಾಪಿಸುವ ಒಪ್ಪಂದಕ್ಕೆ ಈ ಸಭೆಯಲ್ಲಿ ಸಹಿ ಹಾಕಲಾಯಿತು.

ರೆನೆಸಸ್‌ ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್ನಿನ ಸಿಇಒ ಚಾರ್ಲ್ಸ್‌ಕವಾಶಿಮಾ ಅವರನ್ನು ಭೇಟಿ ಮಾಡಿದ ನಿಯೋಗವು ವಿದೇಶಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳು ಮತ್ತು ಸವಾಲುಗಳನ್ನು ಚರ್ಚಿಸಿತು. ಸುಮಿಟೊಮೊ ಹೆವಿ ಇಂಡಸ್ಟ್ರೀಸ್‌ನ (ಎಸ್‌ಎಚ್‌ಐ) ಚೇರ್ಮನ್‌ ಆಫ್‌ ರಿಪ್ರೆಸೆಂಟೇಟಿವ್‌ ಡೈರೆಕ್ಟರ್‌ ತೆತ್ಸುಯ ಒಕಾಮುರ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ತೋಷಿಹರು ತನಾಕಾ ಅವರನ್ನು ರಾಜ್ಯದ ನಿಯೋಗವು ಭೇಟಿಯಾಗಿತ್ತು. ರಾಜ್ಯದಲ್ಲಿ ಕಂಪನಿಯ ವಹಿವಾಟಿನ ವಿಸ್ತರಣೆಗೆ ಅಗತ್ಯ ಬೆಂಬಲ ನೀಡುವುದಾಗಿ ನಿಯೋಗವು ಭರವಸೆ ನೀಡಿತು. 2024 ರ ಅಂತ್ಯದ ವೇಳೆಗೆ ಎಸ್‌ಎಚ್‌ಐ ಬೆಂಗಳೂರಿನಲ್ಲಿ ತನ್ನ ಪ್ರಧಾನ ಕಚೇರಿ ಆರಂಭಿಸಲಿದೆ.

ಜಪಾನ್​ ಸರ್ಕಾರದ ಸಣ್ಣ ಹಾಗೂ ಮಧ್ಯಮ ಉದ್ಯಮಗಳು ಮತ್ತು ಪ್ರಾದೇಶಿಕ ಆವಿಷ್ಕಾರ ಸಂಸ್ಥೆಯ (ಎಸ್‌ಎಂಆರ್‌ಜೆ) ಕಾರ್ಯನಿರ್ವಾಹಕ ಉಪಾಧ್ಯಕ್ಷ ತೊಮೊಹಿರೊ ಕನೆಕೊ ಅವರ ಜೊತೆ ನಿಯೋಗವು ಸಮಾಲೋಚನೆ ನಡೆಸಿತು. ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ವಾಹನ ಬಿಡಿಭಾಗ, ಎಲೆಕ್ಟ್ರಾನಿಕ್ಸ್ , ವೈಮಾಂತರಿಕ್ಷ ಹಾಗೂ ರಕ್ಷಣೆ, ಆಹಾರ ಸಂಸ್ಕರಣೆ, ಭಾರಿ ಯಂತ್ರೋಪಕರಣ ತಯಾರಿಕೆ ಕ್ಷೇತ್ರಗಳಲ್ಲಿ ತಮ್ಮ ವಹಿವಾಟು ವಿಸ್ತರಿಸಲು ʼಎಸ್‌ಎಂಆರ್‌ಜೆʼಗೆ ಅಗತ್ಯ ಸಹಕಾರ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಸಚಿವರು ಭರವಸೆ ನೀಡಿದರು. ಜಪಾನಿನ 26,000 ʼಎಸ್‌ಎಂಇʼಗಳ ಸಹಯೋಗದಲ್ಲಿ ಕರ್ನಾಟಕದ ʼಎಸ್‌ಎಂಇʼಗಳ ಬೆಳವಣಿಗೆ ಉತ್ತೇಜಿಸಲು ನೆರವಾಗುವ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಜಪಾನ್‌ ಮತ್ತು ಭಾರತದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಸ್‌ಎಂಇ) ಮುಖ್ಯಸ್ಥರ ಸಭೆಯನ್ನು ಆಗಸ್ಟ್‌ನಲ್ಲಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಕರ್ನಾಟಕದಲ್ಲಿ ಜಪಾನಿನ ʼಎಸ್‌ಎಂಇʼಗಳು ತಮ್ಮ ವಹಿವಾಟು ವಿಸ್ತರಿಸಲು ನಿಯೋಗವು ಆಹ್ವಾನ ನೀಡಿತು.

ಸೆಮಿಕಂಡಕ್ಟರ್‌ ಪರಿಕರಗಳನ್ನು ತಯಾರಿಸುವ ಬಹುರಾಷ್ಟ್ರೀಯ ಕಂಪನಿ ರೆನೆಸಸ್‌ ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್ನಿನ ಹಿರಿಯ ನಿರ್ದೇಶಕ ಷೊ ಒಜಾಕಿ ಅವರನ್ನು ನಿಯೋಗವು ಭೇಟಿಯಾಗಿತ್ತು. ಎಲೆಕ್ಟ್ರಾನಿಕ್ಸ್‌ ವಲಯಕ್ಕೆ ದೇಶದಲ್ಲಿಯೇ ಗರಿಷ್ಠ ಪ್ರಮಾಣದ ಸಬ್ಸಿಡಿ ನೀಡುತ್ತಿರುವ ಕರ್ನಾಟಕದಲ್ಲಿನ ಎಲೆಕ್ಟ್ರಾನಿಕ್ಸ್‌ ಸಿಸ್ಟಮ್‌ ಡಿಸೈನ್‌ ಮತ್ತು ತಯಾರಿಕಾ (ಇಎಸ್‌ಡಿಎಂ) ಕ್ಷೇತ್ರದಲ್ಲಿನ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಿಯೋಗವು ಮನವಿ ಮಾಡಿಕೊಂಡಿದೆ.

ಇದನ್ನೂ ಓದಿ: ನಿಮಗೆ ಮೈಸೂರಿನಲ್ಲಿರುವ 'ಸಿಪೆಟ್‌' ಗೊತ್ತೇ? ಇಲ್ಲಿ ಕೋರ್ಸ್‌ ಮಾಡಿದವರಿಗೆ ಜಗತ್ತಿನಾದ್ಯಂತ ಉದ್ಯೋಗಾವಕಾಶ - CIPET Diploma Courses

ETV Bharat Logo

Copyright © 2024 Ushodaya Enterprises Pvt. Ltd., All Rights Reserved.