ETV Bharat / state

ಮಾವು, ಹಲಸು ಮೇಳಕ್ಕೆ ಚಾಲನೆ: ಗ್ರಾಹಕರಿಗೆ ನೈಸರ್ಗಿಕ ಮಾಗಿದ ಹಣ್ಣು ಲಭ್ಯವಾಗುವಂತೆ ಮಾಡಲು ವ್ಯವಸ್ಥೆ - Mango Jackfruit Fair

ಮಾವು ಮತ್ತ ಹಲಸು ಮೇಳಕ್ಕೆ ಚಾಲನೆ ದೊರೆತ್ತಿದ್ದು, ಗ್ರಾಹಕರಿಗೆ ರಾಸಾಯನಿಕ ಮುಕ್ತ ನೈಸರ್ಗಿಕ ಮಾಗಿದ ಹಣ್ಣು ಲಭ್ಯವಾಗುವಂತೆ ಮಾಡಲು ವ್ಯವಸ್ಥೆ ಮಾಡಲಾಗಿದೆ.

HORTICULTURE DEPARTMENT  NATURAL RIPE FRUIT  CHEMICAL FREE  BENGALURU
ನೈಸರ್ಗಿಕ ಹಣ್ಣು ಲಭ್ಯವಾಗುವಂತೆ ಮಾಡಲು ವ್ಯವಸ್ಥೆ (ಕೃಪೆ: ETV Bharat Karnataka)
author img

By ETV Bharat Karnataka Team

Published : May 24, 2024, 4:19 PM IST

ಮಾವು, ಹಲಸು ಮೇಳಕ್ಕೆ ಚಾಲನೆ, ಹರಿದು ಬಂದ ಗ್ರಾಹಕರ ಬಳಗ (ಕೃಪೆ: ETV Bharat Karnataka)

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ಜನತೆಗೆ ರಾಸಾಯನಿಕ ರಹಿತ ನೈಸರ್ಗಿಕವಾಗಿ ಮಾವು ಲಭ್ಯವಾಗುವಂತೆ ಮಾಡುವ ಸಲುವಾಗಿ ತೋಟಗಾರಿಕೆ ಇಲಾಖೆಯ ಸಹಭಾಗಿತ್ವದಲ್ಲಿ ಮಾವು ಅಭಿವೃದ್ಧಿ ಮಂಡಳಿಯಿಂದ ಮಾವು ಮತ್ತು ಹಲಸು ಮೇಳ ಹಮ್ಮಿಕೊಳ್ಳಲಾಗಿದೆ.

ಇಂದಿನಿಂದ ಜೂನ್ ೧೦ ರವರೆಗೂ ನಡೆಸುವ ಮೇಳಕ್ಕೆ ತೋಟಗಾರಿಕೆ ಇಲಾಖೆಯ ಅಪರ ನಿರ್ದೇಶಕ ಪ್ರಕಾಶ್ ಸೊಬರದ್ ಚಾಲನೆ ನೀಡಿದರು. ಮಾವು ಮತ್ತು ಹಲಸು ಮೇಳದಲ್ಲಿ ಮಾವು ಬೆಳೆಯುವ ರೈತರೇ ನೇರವಾಗಿ ಬಂದು ಮಳಿಗೆಗಳನ್ನು ಪ್ರಾರಂಭಿಸಿದ್ದು, ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಈ ವೇಳೆ ಮಾತನಾಡಿದ ಸೊಬರದ್, ಗ್ರಾಹಕರಿಗೆ ಉತ್ತಮ ಗುಣಮಟ್ಟದ, ಕಾರ್ಬೈಡ್ ಮುಕ್ತ ಹಾಗೂ ಸಹಜವಾಗಿ ಮಾಗಿದ ಹಣ್ಣುಗಳನ್ನು ರೈತರ ತೋಟದಿಂದ ನೇರವಾಗಿ ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಮಾವು ಮತ್ತು ಹಲಸು ಹಣ್ಣುಗಳ ಬೆಳೆಗಾರರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಲಾಗುತ್ತಿದೆ. ಬೆಳೆಗಾರರಿಗೆ ಯೋಗ್ಯ ಬೆಲೆ ಹಾಗೂ ಗ್ರಾಹಕರಿಗೆ ರುಚಿಯಾದ ಉತ್ಕೃಷ್ಟ ಗುಣಮಟ್ಟದ ತಾಜಾಹಣ್ಣುಗಳನ್ನು ದೊರಕುವಂತೆ ಮಾಡಲಾಗುವುದು. ಮಾವು ಮತ್ತು ಹಲಸಿನಲ್ಲಿರುವ ತಳಿಗಳ ವೈವಿದ್ಯತೆ ಮತ್ತು ವಿಶಿಷ್ಟ್ಯತೆಗಳ ಪರಿಚಯ ತಿಳಿಸಿಕೊಡಲಾಗುವುದು. ಆಸ್ವಾದನೆಗೆ ಅವಕಾಶ ಕಲ್ಪಿಸುವುದು ಮೇಳದ‌ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

74 ಮಳಿಗೆಗಳನ್ನು ಮಾವು ಬೆಳೆಗಾರರಿಗೆ, 9 ಮಳಿಗೆಗಳನ್ನು ಹಲಸು ಬೆಳೆಗಾರರಿಗೆ ಮತ್ತು 14 ಮಳಿಗೆಗಳನ್ನು ಮಾವು ಮತ್ತು ಇತರ ಹಣ್ಣಿನ ಉತ್ಪನ್ನಗಳಿಗೆ ನೀಡಲಾಗಿದೆ. ಒಟ್ಟು 18 ದಿನ ಗ್ರಾಹಕರಿಗೆ ಹಣ್ಣುಗಳನ್ನು ಒದಗಿಸಲಾಗುವುದು. ಮೇಳ ಪ್ರತಿ ದಿನ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಗ್ರಾಹಕರಿಗೆ ಮುಕ್ತವಾಗಿರುತ್ತದೆ. ಮೇಳದ ಅವಧಿಯಲ್ಲಿ ಗ್ರಾಹಕರು ಯೋಗ್ಯವಾದ ಬೆಲೆಗೆ ತಾಜಾ ಹಣ್ಣುಗಳನ್ನು ಖರೀದಿಸಬಹುದಾಗಿದೆ.

ಮಾವುನ ತಳಿಗಳು : ಬಾದಾಮಿ, ಮಲ್ಲಿಕಾ, ಅಮ್ರಪಾಲಿ, ದಶೇರಿ, ಬಂಗನಪಲ್ಲಿ, ರಸಪುರಿ, ಇಮ್ಮಾಮ್ ಪಸಂದ, ಸಕ್ಕರೆಗುತ್ತಿ, ಕಾಲಪಾಡ್, ಕೇಸರ್, ಮಲಗೋವ, ಸೇಂದೂರ, ತೋತಾಪುರಿ, ನೀಲಂ ತಳಿಗಳು ಲಭ್ಯ ಇವೆ. ತನ್ನ ವಿಶಿಷ್ಟ ಪರಿಮಳ, ಸುವಾಸನೆಯ ರುಚಿ ಹೆಚ್ಚಿನ ಪ್ರಮಾಣದ ತಿರುಳು, ಆಕಾರ ಮತ್ತು ಗಾತ್ರದ ಕಾರಣದಿಂದ ಭೌಗೋಳಿಕ ಸೂಚನೆ (GI) ಟ್ಯಾಗ್ ಪಡೆದುಕೊಂಡಿರುವ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ "ಕರಿಇಶಾದ್" ಮಾವು ಮೇಳದಲ್ಲಿ ಲಭ್ಯವಿರಲಿದೆ ಎಂದು ಅಧಿಕಾರಿಗಳು ವಿವರಿಸಿದರು.

ಮಾವು ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ.ನಾಗರಾಜು, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ಸೇರಿದಂತೆ ಮತ್ತಿತರ ಅಧಿಕಾರಿಗಳ ಹಾಜರಿದ್ದರು.

ಓದಿ: ಭಾರತದಲ್ಲಿ ಪ್ರತಿ ವರ್ಷ 7 ಲಕ್ಷ ಮಹಿಳೆಯರಲ್ಲಿ ಕ್ಯಾನ್ಸರ್: ತಜ್ಞ ವೈದ್ಯ ರಾಧೇಶ್ಯಾಮ್ ನಾಯಕ್ - Cancer cases in India

ETV Bharat Logo

Copyright © 2024 Ushodaya Enterprises Pvt. Ltd., All Rights Reserved.