ETV Bharat / state

ನೇಣು ಬಿಗಿದ ಸ್ಥಿತಿಯಲ್ಲಿ ಉತ್ತರ ಪ್ರದೇಶ ಮೂಲದ ಯುವಕನ ಶವ‌ ಪತ್ತೆ - Uttar Pradesh man dead body - UTTAR PRADESH MAN DEAD BODY

ಉತ್ತರ ಪ್ರದೇಶ ಮೂಲದ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.

BENGALURU
ಬೆಂಗಳೂರು (ETV Bharat)
author img

By ETV Bharat Karnataka Team

Published : Jul 23, 2024, 3:17 PM IST

ಡಿಸಿಪಿ ಸೈದುಲು ಅದಾವತ್ (ETV Bharat)

ಬೆಂಗಳೂರು : ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೇಲ್ಸೇತುವೆಯ ತಡೆಗೋಡೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಆತನನ್ನ ಉತ್ತರ ಪ್ರದೇಶದ ಗೋರಕ್‌ಪುರ ಮೂಲದ ಅಖಿಲೇಶ್ ಸಹಾನಿ ಎಂದು ಗುರುತಿಸಲಾಗಿದೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಕೆ. ಸಿ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.

'ಶನಿವಾರ ಹೈದರಾಬಾದ್‌‌ನಿಂದ ಬೆಂಗಳೂರಿಗೆ ಬಂದಿರುವ ಅಖಿಲೇಶ್ ಸಹಾನಿ, ಬಳಿಕ ದೊಡ್ಡಬಳ್ಳಾಪುರಕ್ಕೆ ಹೋಗಿ ನಿನ್ನೆ ಮಧ್ಯಾಹ್ನ ವಾಪಸ್​​​ ಬಂದಿರುವುದಕ್ಕೆ ಪೂರಕವಾದ ಟಿಕೆಟ್‌ಗಳು ಆತನ ಜೇಬಿನಲ್ಲಿ ಪತ್ತೆಯಾಗಿವೆ‌. ಅಲ್ಲದೇ ಮೃತನ ಜೇಬಿನಲ್ಲಿ ಐಡಿ ಕಾರ್ಡ್ ಪತ್ತೆಯಾಗಿದ್ದು, ಗೋರಕ್‌ಪುರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ‌. ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ‌. ಸದ್ಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅದಾವತ್ ತಿಳಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು: ನ್ಯಾಯಾಲಯದ ಬಳಿ ವಕೀಲೆಗೆ ಚಾಕು ಇರಿತ, ಆರೋಪಿ ಪೊಲೀಸ್ ವಶಕ್ಕೆ - Woman Lawyer Stabbed

ETV Bharat Logo

Copyright © 2025 Ushodaya Enterprises Pvt. Ltd., All Rights Reserved.