ತುಮಕೂರು : ತಾಲೂಕಿನ ಕುಚ್ಚಂಗಿ ಗ್ರಾಮದ ಕೆರೆಯಲ್ಲಿ ಕಾರೊಂದರಲ್ಲಿ ಮೂವರು ವ್ಯಕ್ತಿಗಳ ಶವಗಳು ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಕೆರೆ ಸಂಪೂರ್ಣ ಬತ್ತಿ ಹೋಗಿದ್ದು, ಇದರ ಮಧ್ಯ ಭಾಗದಲ್ಲಿ ಕಾರು ಕೂಡ ಸುಟ್ಟು ಕರಕಲಾಗಿದೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಫೋರೆನ್ಸಿಕ್ ತಜ್ಞರ ತಂಡ ಕೂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಮಾಹಿತಿ ಸಂಗ್ರಹಿಸುತ್ತಿದೆ.
![The bodies of three persons were found burnt in a car at Tumkuru](https://etvbharatimages.akamaized.net/etvbharat/prod-images/22-03-2024/kn-tmk-02-3deadbody-vis-ka10037_22032024162141_2203f_1711104701_1004.jpg)
''ಕೋರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕುಚ್ಚಂಗಿ ಕೆರೆಯ ಮಧ್ಯದಲ್ಲಿ ಒಂದು ವೈಟ್ ಕಲರ್ ಮಾರುತಿ ಕಾರ್ನಲ್ಲಿ ಮೂರು ಮೃತದೇಹಗಳು ಸುಟ್ಟ ಸ್ಥಿತಿಯಲ್ಲಿ ಸಿಕ್ಕಿವೆ. ಫೋರೆನ್ಸಿಕ್ ತಜ್ಞರ ತಂಡ ಸ್ಥಳಕ್ಕೆ ಬಂದಿದೆ. ಕಾರಿನ ನಂಬರ್ ಕೂಡ ಪತ್ತೆಯಾಗಿದ್ದು, ಇದರ ಮೂಲಕ ಸುಟ್ಟು ಕರಕಲಾಗಿರುವ ಶವಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದು ಎಲ್ಲಿಂದ ಬಂದಿದೆ ಎಂಬುದನ್ನ ಸಿಸಿಟಿವಿ ಮೂಲಕ ಪತ್ತೆ ಮಾಡುತ್ತೇವೆ. ಆದಷ್ಟು ಬೇಗ ಎಫ್ಐಆರ್ ಅನ್ನು ದಾಖಲಿಸಿಕೊಂಡು ತನಿಖೆಯನ್ನು ಪೂರ್ಣಗೊಳಿಸುತ್ತೇವೆ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರು ತಿಳಿಸಿದ್ದಾರೆ. ಈ ಸಂಬಂಧ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![The bodies of three persons were found burnt in a car at Tumkuru](https://etvbharatimages.akamaized.net/etvbharat/prod-images/22-03-2024/kn-tmk-02-3deadbody-vis-ka10037_22032024162141_2203f_1711104701_321.jpg)
ಇದನ್ನೂ ಓದಿ: ತುಮಕೂರು: ಖಾಸಗಿ ಬಸ್ನಲ್ಲಿ ಆ್ಯಸಿಡ್ ಬಾಟಲಿ ಸ್ಫೋಟ - ಐವರಿಗೆ ಗಾಯ