ETV Bharat / state

ಊಟಕ್ಕೆ ಕುಳಿತುಕೊಳ್ಳುವ ಜಾಗಕ್ಕಾಗಿ ಗಲಾಟೆ; ಸಹ ಕಾರ್ಮಿಕನ ಹತ್ಯೆಗೈದ ಆರೋಪಿ ಸೆರೆ - Murder Case - MURDER CASE

ಗಾರೆ ಕೆಲಸ ಮಾಡಿಕೊಂಡಿದ್ದ ಕಟ್ಟಡದಲ್ಲಿಯೇ ಊಟ ಮಾಡುವ ಜಾಗಕ್ಕೋಸ್ಕರ ಸಹ ಕಾರ್ಮಿಕನ ಹತ್ಯೆಗೈಯ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸಹ ಕಾರ್ಮಿಕನನ್ನು ಹತ್ಯೆಗೈದಿದ್ದ ಆರೋಪಿ, ಕೃತ್ಯ ನಡೆದ ಕಟ್ಟಡ
ಸಹ ಕಾರ್ಮಿಕನನ್ನು ಹತ್ಯೆಗೈದಿದ್ದ ಆರೋಪಿ, ಕೃತ್ಯ ನಡೆದ ಕಟ್ಟಡ (ETV Bharat)
author img

By ETV Bharat Karnataka Team

Published : Sep 30, 2024, 2:31 PM IST

ಬೆಂಗಳೂರು: ಊಟಕ್ಕೆ ಕುಳಿತುಕೊಳ್ಳುವ ಜಾಗಕ್ಕಾಗಿ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದ ಆರೋಪಿಯನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹರೀಶ್ ಬಂಧಿತ ಆರೋಪಿ.

ಸೆಪ್ಟಂಬರ್​ 24ರಂದು ಶ್ರೀನಿವಾಸನಗರದ 11ನೇ ಕ್ರಾಸ್‌ನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಅಜಿತ್​​​ (30) ಎಂಬಾತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈಯ್ಯಲಾಗಿತ್ತು. ಹತ್ಯೆಯಾಗಿರುವ ಅಜಿತ್​​​ ಹಾಗೂ ಆರೋಪಿ ಹರೀಶ್​​​ ಇಬ್ಬರು ಕೃತ್ಯ ನಡೆದಿದ್ದ ಕಟ್ಟಡದಲ್ಲಿಯೇ ಗಾರೆ ಕೆಲಸ ಮಾಡಿಕೊಂಡಿದ್ದರು.

ಸೆಪ್ಟಂಬರ್ 24ರಂದು ಕಟ್ಟಡದ ಮೊದಲ ಮಹಡಿಯಲ್ಲಿ ಕುಳಿತು ಊಟ ಮಾಡುತ್ತಿದ್ದ ಅಜಿತ್‌ನ ಬಳಿ ಬಂದಿದ್ದ ಹರೀಶ್, "ಅದು ನಾನು ಕುಳಿತು ಊಟ ಮಾಡುವ ಜಾಗ, ಎದ್ದೇಳು" ಎಂದಿದ್ದ. ಅಲ್ಲಿಂದು ಎದ್ದಿದ್ದ ಅಜಿತ್ ಕಟ್ಟಡದ ಮೂರನೇ ಮಹಡಿಗೆ ತೆರಳಿ ಊಟಕ್ಕೆ ಕುಳಿತಿದ್ದ. ಅಲ್ಲಿಗೂ ಹೋಗಿದ್ದ ಹರೀಶ್, "ನಾನು ಇಲ್ಲಿ ಕುಳಿತುಕೊಳ್ಳಬೇಕು" ಎಂದು ಗಲಾಟೆ ಆರಂಭಿಸಿದ್ದ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿತ್ತು. ಅದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಲ್ಲನ್ನು ಅಜಿತ್​ ತಲೆ ಮೇಲೆ ಹರೀಶ್ ಎತ್ತಿಹಾಕಿ ಹತ್ಯೆಗೈದಿದ್ದ.

ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಹನುಮಂತ ನಗರ ಠಾಣೆ ಪೊಲೀಸರು ಸದ್ಯ ಆರೋಪಿ ಹರೀಶ್‌ನನ್ನು ಬಂಧಿಸಿದ್ದಾರೆ. ಅಪರಾಧ ಹಿನ್ನಲೆಯುಳ್ಳವನಾಗಿರುವ ಹರೀಶ್ ಈ ಹಿಂದೆ ಒಮ್ಮೆ ಕೊರಟಗೆರೆಯಲ್ಲಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮದ್ಯ ಪಾರ್ಟಿ ವೇಳೆ ಕಾಲು ತುಳಿದ ವ್ಯಕ್ತಿಯ ಹತ್ಯೆ, ಆರೋಪಿ ಸೆರೆ - Bengaluru Murder Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.