ETV Bharat / state

ದಕ್ಷಿಣ ಕನ್ನಡ ಜಿಲ್ಲಾ ಸಿಡಿಮದ್ದು ತಯಾರಿಕಾ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ

ಬೆಳ್ತಂಗಡಿ ತಾಲೂಕಿನಲ್ಲಿ ಸಿಡಿಮದ್ದು ತಯಾರಿಕ ಘಟಕದಲ್ಲಿ ಸ್ಫೋಟ ಪ್ರಕರಣದ ಬೆನ್ನಲ್ಲೇ ದ.ಕ. ಜಿಲ್ಲಾಡಳಿತವು ಎಲ್ಲಾ ಸಿಡಿಮದ್ದು ತಯಾರಿಕಾ ಘಟಕಗಳಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಿದೆ.

Ban on explosives manufacturing units
ಸಿಡಿಮದ್ದು ತಯಾರಿ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ
author img

By ETV Bharat Karnataka Team

Published : Jan 30, 2024, 1:31 PM IST

ಮಂಗಳೂರು (ದಕ್ಷಿಣ ಕನ್ನಡ): ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯಲ್ಲಿ ಭಾನುವಾರ ಸಿಡಿಮದ್ದು ಘಟಕದಲ್ಲಿ ಸ್ಫೋಟ ಸಂಭವಿಸಿದ್ದರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಜಿಲ್ಲಾ ವ್ಯಾಪ್ತಿಯಲ್ಲಿನ ಎಲ್ಲಾ ಸಿಡಿಮದ್ದು ತಯಾರಿಕಾ ಘಟಕಗಳ ಮೇಲೆ ತಕ್ಷಣದಿಂದಲೇ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿ ಆದೇಶಿಸಲಾಗಿದೆ. ಅಲ್ಲದೆ ಮುಂದಿನ ಆದೇಶದವರೆಗೆ ಅವುಗಳನ್ನು ಅಮಾನತಿನಲ್ಲಿರಿಸಿ ಆದೇಶ ಹೊರಡಿಸಿದೆ.

ಅಲ್ಲದೆ ಎಲ್ಲಾ ಸಿಡಿಮದ್ದು ತಯಾರಿಕಾ ಘಟಕ, ದಾಸ್ತಾನು, ಮಾರಾಟ ಮಳಿಗೆಗಳು ಕೈಗೊಂಡಿರುವ ಮುಂಜಾಗ್ರತೆ ಕ್ರಮಗಳ ಸ್ಥಳ ಪರಿಶೀಲನೆಗೆ ಮಂಗಳೂರು ಹಾಗೂ ಪುತ್ತೂರು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ. ಭಾನುವಾರ ಸಂಜೆ ಬೆಳ್ತಂಗಡಿ ತಾಲೂಕಿನ ವೇಣೂರು ಗೋಳಿಯಂಗಡಿ ಸಮೀಪದ ಕುಕ್ಕೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡ್ಯಾರು ಎಂಬಲ್ಲಿ ನುಡುಮದ್ದು ತಯಾರಿಕಾ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅಲ್ಲದೆ, ಸಮೀಪದ ಮನೆಯ ಆಸ್ತಿ ಪಾಸ್ತಿ ಹಾನಿಯಾಗಿದೆ. ಸಿಡಿಮದ್ದು ತಯಾರಿಸುವ ಸಂದರ್ಭಗಳಲ್ಲಿ ಸಿಡಿಮದ್ದುಗಳಿಂದ ಯಾವುದೇ ಅಗ್ನಿ ಅನಾಹುತಗಳು, ಜೀವ ಹಾನಿ, ಆಸ್ತಿ ಹಾನಿ ಸಂಭವಿಸದಂತೆ ಸಂಪೂರ್ಣ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಈ ಆದೇಶ ಮಾಡಲಾಗಿದೆ.

ಸಮಿತಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಿಡಿಮದ್ದು ತಯಾರಿಕಾ ಘಟಕಗಳನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಸೀಲ್​ ಡೌನ್​ ಮಾಡುವುದು, ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಿಡಿಮದ್ದು ತಯಾರಿಕಾ ಘಟಕಗಳು ಹಾಗೂ ದಾಸ್ತಾನು ಮತ್ತು ಮಾರಾಟಗಳ ಬಗ್ಗೆ ಜಂಟಿಯಾಗಿ ಸಮನ್ವಯ ಸಾಧಿಸಿಕೊಂಡು ಪರಿಶೀಲಿಸತಕ್ಕದ್ದು.

ಸ್ಥಳ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಜಮೀನಿನ ಜಿಪಿಎಸ್​​ ಫೋಟೋವನ್ನು ಕ್ಲಿಕ್ಕಿಸಿಕೊಂಡು ವರದಿಯನ್ನು ನೀಡಲು ಸೂಚಿಸಿದೆ. ಅಧಿಕೃತವಾಗಿ ನಮೂನೆ ಎಲ್​ಇ-1 ರಲ್ಲಿ ಸಿಡಿಮದ್ದು ತಯಾರಿಕಾ ಘಟಕಗಳಲ್ಲಿ ಮಾಡಲು ಪರವಾನಿಗೆ ಪಡೆದುಕೊಂಡಿರುವ ಬಗ್ಗೆ ಪರಿಶೀಲಿಸತಕ್ಕದ್ದು. ಹಾಗೆಯೇ ದಾಸ್ತಾನು ಮತ್ತು ಮಾರಾಟ ಮಳಿಗೆಗಳು ಅಧಿಕೃತವಾಗಿ ನಮೂನೆ ಎಲ್​ಇ-5ರಲ್ಲಿ ಪಡೆದುಕೊಂಡಿರುವ ಬಗ್ಗೆ ಪರಿಶೀಲಿಸಬೇಕಿದೆ. ಸಿಡಿಮದ್ದು ತಯಾರಿಕಾ ಘಟಕಗಳು ಹಾಗೂ ದಾಸ್ತಾನು ಮತ್ತು ಮಾರಾಟ ಮಳಿಗಳು ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರಗಳನ್ನು ಪಡೆದುಕೊಂಡಿರುವ ಹಾಗೂ ಸದರಿ ನಿರಾಕ್ಷೇಪಣಾ ಪತ್ರಗಳು ವಾಯಿದೆ ಇರುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ.

ಹಸಿರು ಪಟಾಕಿಗಳನ್ನು ಅಧಿಕೃತ ಉತ್ಪಾದಕರಿಂದ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಉತ್ಪಾದಿಸಲಾಗಿದೆಯೇ ಎಂಬುವುದರ ಬಗ್ಗೆ ಪರಿಶೀಲಿಸತಕ್ಕದ್ದು. ಸಿಡಿಮದ್ದು ತಯಾರಿಕಾ ಘಟಕಗಳಲ್ಲಿ ಅಗ್ನಿ ನಿವಾರಣಾ ಹಾಗೂ ಅಗ್ನಿಶಮನ ವ್ಯವಸ್ಥೆ ಇರವ ಬಗ್ಗೆ ಪರಿಶೀಲಿಸುವುದು. ತಮ್ಮ ವ್ಯಾಪ್ತಿಯಲ್ಲಿ ಬರುವ ಸಿಡಿಮದ್ದು ತಯಾರಿಕಾ ಘಟಕಗಳು ಹಾಗೂ ದಾಸ್ತಾನು ಮತ್ತು ಮಾರಾಟ ಮಳಿಗೆಗಳು ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಹಾಜರುಪಡಿಸಿದ ನಂತರ ಕಾರ್ಯಾರಂಭಕ್ಕೆ ಅಗತ್ಯ ಪೂರಕ ದಾಖಲೆಗಳ ಸಹಿತ ಸ್ಪಷ್ಟ ಅಭಿಪ್ರಾಯದೊಂದಿಗೆ ಶಿಫಾರಸ್ಸನ್ನು ಕಚೇರಿಗೆ ಸಲ್ಲಿಸಲು ಕ್ರಮವಹಿಸುವುದು ಎಂದು ಸೂಚನೆ‌ ನೀಡಲಾಗಿದೆ.

ಇದನ್ನೂ ಓದಿ: ಬೆಳ್ತಂಗಡಿ: ಪಟಾಕಿ ಸ್ಫೋಟ ಪ್ರಕರಣ ಸ್ಥಳಕ್ಕೆ ಡಿಐಜಿ ರವಿ.ಡಿ.ಚನ್ನಣ್ಣನವರ್ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.