ಬೆಂಗಳೂರು: ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ ಅರೋಪದಡಿ ತೆಲುಗು ನಟಿ ಹೇಮಾ ಪೊಲೀಸರೆದುರು ವಿಚಾರಣೆ ಹಾಜರಾಗಲು ಒಂದು ವಾರ ಸಮಯಾವಕಾಶ ಕೇಳಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಇತ್ತೀಚಿಗೆ ಪೊಲೀಸರು ದಾಳಿ ನಡೆಸಿದ್ದರು.
ಪ್ರಕರಣ ಸಂಬಂಧ ನಟಿ ಸೇರಿ 8 ಮಂದಿಗೆ ಇಂದು ವಿಚಾರಣೆ ಹಾಜರಾಗಲು ಸಿಸಿಬಿ ನೋಟಿಸ್ ನೀಡಿತ್ತು. ಆದರೆ ಸಮಯಾವಕಾಶ ಕೇಳಿರುವ ಹಿನ್ನೆಲೆಯಲ್ಲಿ ಹೇಮಾ ವಿಚಾರಣೆಗೆ ಹಾಜರಾಗುವುದು ಬಹುತೇಕ ಅನುಮಾನ. ಅನಾರೋಗ್ಯದಿಂದಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಅವರು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರೇವ್ ಪಾರ್ಟಿ ಪ್ರಕರಣ, ತೆಲುಗು ನಟಿ ಸಹಿತ 8 ಜನರಿಗೆ ಸಿಸಿಬಿ ನೋಟಿಸ್ - BENGALURU RAVE PARTY CASE
ಒಂದು ವೇಳೆ ಇಂದು ವಿಚಾರಣೆಗೆ ಹಾಜರಾಗದೇ ಇದ್ದರೆ ಪೊಲೀಸರು ಮತ್ತೊಂದು ನೋಟಿಸ್ ನೀಡಲಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಹೇಮಾ ಹೊರತುಪಡಿಸಿ ಇನ್ನಿತರರು ಸಿಸಿಬಿ ಮುಂದೆ ಹಾಜರಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಬೆಂಗಳೂರು ರೇವ್ ಪಾರ್ಟಿ ಪ್ರಕರಣ: ತೆಲುಗು ನಟಿ ಸೇರಿ 86 ಮಂದಿ ಡ್ರಗ್ಸ್ ಸೇವನೆ ದೃಢ - Bengaluru Rave Party