ETV Bharat / state

ಸಿದ್ದಾಪುರದಲ್ಲಿ ಟ್ಯಾಂಬೋ ಆರ್ಟ್​ ಮೂಲಕ ಗಮನ ಸೆಳೆದ ಭತ್ತದ ಗದ್ದೆ; ಇದು ಸಂಪೂರ್ಣ ಸಾವಯವ

ಜರ್ಮನ್​ನ ಚಾಕೋಪರ್ಟ್ ಭತ್ತದ ತಳಿಯ ಟ್ಯಾಂಬೋ ಆರ್ಟ್ ಅನ್ನು ಮುಂದಿನ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಿರಿಧಾನ್ಯ ಹಾಗೂ ಸಾವಯವ ಮೇಳದಲ್ಲಿ ಪ್ರದರ್ಶಿಸಲಾಗುವುದು.

TAMBO ART OF GERMAN CHOCOPERT RICE VARIETY WHICH IS ATTRACTING ATTENTION IN SIDDAPURA
ಸಿದ್ದಾಪುರದಲ್ಲಿ ಗಮನ ಸೆಳೆಯುತ್ತಿರುವ ಜರ್ಮನ್​ನ ಚಾಕೋಪರ್ಟ್ ಭತ್ತದ ತಳಿಯ ಟ್ಯಾಂಬೋ ಆರ್ಟ್​ (ETV Bharat)
author img

By ETV Bharat Karnataka Team

Published : 2 hours ago

Updated : 2 hours ago

ಶಿರಸಿ (ಉತ್ತರ ಕನ್ನಡ): ಮಲೆನಾಡಿನಲ್ಲಿ ಅಬ್ಬರದ ಮಳೆಗಾಲ ಮುಗಿದರೂ ಮಳೆ ಇನ್ನೂ ಬಿಟ್ಟಿಲ್ಲ. ಅದಾಗಲೇ ರೈತರು ಭತ್ತನಾಟಿ ಮಾಡಿ ಸಸಿಗಳು ಮಾಗುವ ಹಂತಕ್ಕೆ ಬಂದು ನಿಂತಿವೆ. ಇದರ ನಡುವೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತರು ಜರ್ಮನ್​ನ ಚಾಕೋಪರ್ಟ್ ಎನ್ನುವ ನೇರಳೆ ಬಣ್ಣದ ಭತ್ತದ ತಳಿಯಿಂದ ನಿರ್ಮಿಸಿರುವ ಟ್ಯಾಂಬೋ ಆರ್ಟ್​ ಎಲ್ಲರ ಗಮನ ಸೆಳೆಯುತ್ತಿದೆ.

ಹೌದು, ಮಲೆನಾಡ ಇದೀಗ ಹಸಿರು ಹೊದಿಕೆಯನ್ನು ಹೊದ್ದು ರಾರಾಜಿಸುತ್ತಿದೆ. ಭತ್ತದ ಗದ್ದೆಗಳಲ್ಲಿ ಸಸಿಗಳ ನಾಟಿ ಆಗಿ ಹಸಿರಿನಿಂದ ಕಂಗೊಳಿಸುತ್ತಿವೆ. ಈ ಹಸಿರು ಸಿರಿಯ ನಡುವೆ ನೇರಳೆ ಬಣ್ಣದ ಭತ್ತದ ತಳಿಯಿಂದ ಟ್ಯಾಂಬೋ ಆರ್ಟ್​ ನಿರ್ಮಿಸಲಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಿರಿಧಾನ್ಯ ಹಾಗೂ ಸಾವಯವ ಮೇಳಕ್ಕೆ ಸಿದ್ದಾಪುರ ಕೃಷಿ ಇಲಾಖೆ ಟ್ಯಾಂಬೋ ಕಲೆಯ ಮೂಲಕ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುಂದಿನ ಜನವರಿ ಮೊದಲ ವಾರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಿರಿಧಾನ್ಯ ಹಾಗೂ ಸಾವಯವ ಮೇಳದಲ್ಲಿ ಈ ಟ್ಯಾಂಬೋ ಆರ್ಟ್ ಪ್ರದರ್ಶನವಾಗಲಿದೆ.

ಸಿದ್ದಾಪುರದಲ್ಲಿ ಟ್ಯಾಂಬೋ ಆರ್ಟ್​ ಮೂಲಕ ಗಮನ ಸೆಳೆದ ಭತ್ತದ ಗದ್ದೆ (ETV Bharat)

ಸಿದ್ದಾಪುರ ತಾಲೂಕಿನ ಗೋಳಗೊಡ ಎನ್ನುವ ಗ್ರಾಮದ ದ್ಯಾವ ನಾಯ್ಕ ಎಂಬ ರೈತನ ಭತ್ತದ ಗದ್ದೆಯಲ್ಲಿ ಈ ಟ್ಯಾಂಬೋ ಕಲೆಯನ್ನು ಮೂಡಿಸಲಾಗಿದೆ. ಅಪರೂಪದ ನೇರಳೆ ಬಣ್ಣದ ಭತ್ತದ ತಳಿಯನ್ನು ಇವರ ಗದ್ದೆಯಲ್ಲಿ ಬೆಳೆಯಲು ಹಾಗೂ ಟ್ಯಾಂಬೋ ಕಲೆಯ ರಚನೆಯ ಅವಕಾಶಕ್ಕಾಗಿ ಕೃಷಿ ಇಲಾಖೆ ಅಧಿಕಾರಿಗಳು ರೈತನನ್ನು ಕೇಳಿಕೊಂಡರು. ನಂತರ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಇದನ್ನು ನಾಟಿ ಮಾಡಿದರು. ಸುತ್ತಲೂ ಹಸಿರು ತಳಿಯ ಭತ್ತದ ನಡುವೆ ಹಗ್ಗದ ಸಹಾಯದಿಂದ ಮಧ್ಯದಲ್ಲಿ "ORGANIC MILLETS 2025" ಎಂದು ನೇರಳೆ ಬಣ್ಣದ ಚಾಕೋಪರ್ಟ್ ತಳಿಯ ಭತ್ತವನ್ನು ನಾಟಿ ಮಾಡಿದರು.

ಕೃಷಿ ಇಲಾಖೆ ಅಧಿಕಾರಿ ಪ್ರಶಾಂತ್ ಮಾತನಾಡಿ, "ಭತ್ತದ ಸಸಿಗಳು ಬೆಳೆದು, ಸುತ್ತಲೂ ಹಸಿರು ಬಣ್ಣದ ಗಿಡಗಳ ನಡುವೆ ನೇರಳೆ ಬಣ್ಣದ ಟ್ಯಾಂಬೋ ಆರ್ಟ್, ಡ್ರೋಣ್ ವ್ಯೂನಲ್ಲಿ ಸುಂದರವಾಗಿ ಕಾಣುತ್ತಿದೆ. ಹತ್ತಿರದಿಂದ ನೋಡಿದಾಗ ಇದು ಕಾಣಿಸದೆ ಇರುವ ಕಾರಣ, ಡ್ರೋನ್ ಮೂಲಕ ಈ ದೃಶ್ಯ ಸೆರೆಹಿಡಿದು ಸಿರಿಧಾನ್ಯ ಮೇಳದಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುವುದು. ಅದೂ ಅಲ್ಲದೆ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಇದನ್ನು ಬೆಳೆಯಾಗಿದೆ. ಹಾಗಾಗಿ ಸಾವಯವ ಕೃಷಿಯ ಬಗ್ಗೆಯೂ ರೈತರಿಗೆ ಮನದಟ್ಟು ಮಾಡುವ ಕಾರ್ಯವಾಗಲಿದೆ" ಎಂದು ತಿಳಿಸಿದರು.

ಒಟ್ಟಿನಲ್ಲಿ ಟ್ಯಾಂಬೋ ಕಲೆ ಮೂಲಕ ಅಪರೂಪದ ಚಾಕೋಪರ್ಟ್ ತಳಿ ಹಾಗೂ ಸಾವಯವ ಕೃಷಿಗೆ ಒತ್ತು ನೀಡುವ ಮೂಲಕ ಇಳುವರಿ ಹೆಚ್ಚಿಸಬಹುದು ಎನ್ನುವುದನ್ನು ರೈತರಿಗೆ ತೋರಿಸುವ ಕಾರ್ಯವನ್ನು ಕೃಷಿ ಇಲಾಖೆ ಮಾಡುತ್ತಿದೆ.

ಇದನ್ನೂ ಓದಿ: ಕೇವಲ 30 ಗುಂಟೆಯಲ್ಲಿ 6 ಟನ್​ ಸುಗಂಧರಾಜ, ಬರೋಬ್ಬರಿ 6 ಲಕ್ಷ ಆದಾಯ: ಇದು ನಿವೃತ್ತ ನೌಕರನ ಕೃಷಿ ಸಾಧನೆ

Last Updated : 2 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.