ETV Bharat / state

ಸೆಮಿಸ್​ಗೆ ಭಾರತ Vs ಇಂಗ್ಲೆಂಡ್, ಅಫ್ಘಾನ್​ Vs ದಕ್ಷಿಣ ಆಫ್ರಿಕಾ ಸಜ್ಜು: ಐಸಿಸಿಯ ಹೊಸ ನಿಯಮ, ಹೀಗಿದೆ ಹವಾಮಾನ ವರದಿ - T20 World cup sempi final

ಟಿ20 ವಿಶ್ವಕಪ್​​​​​​ನ​ ಸೆಮಿಫೈನಲ್​ ಪಂದ್ಯಗಳಿಗೆ ಐಸಿಸಿ ಕೆಲ ನಿಯಮಗಳನ್ನು ಬದಲಾವಣೆ ಮಾಡಿದೆ. ಮೊದಲ ಮತ್ತು ಎರಡನೇ ಸೆಮಿಫೈನಲ್​ ಪಂದ್ಯದ ನಿಯಮಗಳು ವಿಭಿನ್ನವಾಗಿರಲಿವೆ.

ಸೆಮಿಸ್​ಗೆ ಭಾರತ Vs ಇಂಗ್ಲೆಂಡ್, ಅಫ್ಘಾನ್​ Vs ದಕ್ಷಿಣ ಆಫ್ರಿಕಾ ಸಜ್ಜು
ಸೆಮಿಸ್​ಗೆ ಭಾರತ Vs ಇಂಗ್ಲೆಂಡ್, ಅಫ್ಘಾನ್​ Vs ದಕ್ಷಿಣ ಆಫ್ರಿಕಾ ಸಜ್ಜು (ETV Bharat)
author img

By ETV Bharat Karnataka Team

Published : Jun 26, 2024, 2:25 PM IST

ಹೈದರಾಬಾದ್​: ಟಿ20 ವಿಶ್ವಕಪ್‌ನ ಸೂಪರ್-8ರ ಪಂದ್ಯದಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾವನ್ನು ಮಣಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಗುರುವಾರ (ನಾಳೆ) ಸೆಮಿಫೈನಲ್​ನಲ್ಲಿ ಭಾರತ ತಂಡ ಇಂಗ್ಲೆಂಡ್​ ತಂಡವನ್ನು ಎದುರಿಸಲಿದೆ. ಇದು ಎರಡನೇ ಬಾರಿಗೆ ಉಭಯ ತಂಡಗಳು ಟಿ20 ವಿಶ್ವಕಪ್​ ಸೆಮಿಸ್​ನಲ್ಲಿ ಮುಖಾಮುಖಿಯಾಗುತ್ತಿವೆ.

ಈ ಹಿಂದೆ 2022ರಲ್ಲಿ ಅಡಿಲೇಡ್​ನಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ನೀಡಿದ್ದ 168 ರನ್​ಗಳ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್​ ವಿಕೆಟ್​ ನಷ್ಟವಿಲ್ಲದೆ ಗೆದ್ದು ಬೀಗಿತ್ತು. ತಂಡದ ಪರ ಆರಂಭಿಕ ಬ್ಯಾಟರ್​ಗಳಾದ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಗಮನಾರ್ಹ ಪ್ರದರ್ಶನ ತೋರಿದ್ದರು. ಇದೀಗ ಭಾರತ ಸೋಲಿನ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಇದರ ನಡುವೆಯೇ ಸೆಮಿಫೈನಲ್​ ಪಂದ್ಯಗಳಿಗಾಗಿ ಐಸಿಸಿ ಕೆಲ ನಿಯಮಗಳನ್ನು ಬದಲಾವಣೆ ಮಾಡಿದೆ. ಮೊದಲ ಮತ್ತು ಎರಡನೇ ಸೆಮಿಸ್​ ಪಂದ್ಯಗಳ ನಿಯಮಗಳು ಭಿನ್ನವಾಗಿರಲಿವೆ.

ಸೆಮಿಫೈನಲ್​ ನಿಯಮ: ಮೊದಲ ಸೆಮಿಸ್​ನಲ್ಲಿ ಅಪ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಒಂದು ವೇಳೆ ಮಳೆ ಬಂದು ನಿಂತರೆ ಪಂದ್ಯದ ಸಮಯವನ್ನು ಹೆಚ್ಚುವರಿಯಾಗಿ 60 ನಿಮಿಷಗಳ ಕಾಲ ವಿಸ್ತರಿಸಲು ಅವಕಾಶ ಇರಲಿದೆ. ಪಂದ್ಯ ರದ್ದಾದರೆ ಮೀಸಲು ದಿನ ನಿಗದಿ ಪಡಿಸಲಾಗುತ್ತದೆ ಹೆಚ್ಚುವರಿಯಾಗಿ ಅಂದು 190 ನಿಮಿಷಗಳು ಇರಲಿದೆ.

ಆದರೇ ಎರಡನೇ ಸೆಮಿಸ್​ ಪಂದ್ಯಕ್ಕೆ (ಭಾರತ ಮತ್ತು ಇಂಗ್ಲೆಂಡ್​) ಮೀಸಲು ದಿನ ಇರುವುದಿಲ್ಲ. ಮಳೆ ಬಂದದ್ದೇ ಆದಲ್ಲಿ ಹೆಚ್ಚುವರಿಯಾಗಿ 250 ನಿಮಿಷಗಳನ್ನು ನಿಗದಿ ಪಡಿಸಲಾಗಿದೆ. ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೇ ಕನಿಷ್ಠ 5 ಓವರ್​ಗಳ ಪಂದ್ಯವನ್ನಾದರೂ ನಡೆಸಲು ಪ್ರಯತ್ನಿಸಲಾಗುತ್ತದೆ. ಒಂದೇ ಒಂದು ಎಸೆತ ಕಾಣದೇ ಪಂದ್ಯ ರದ್ದಾದರೇ ಸೂಪರ್ ​ -8 ರಲ್ಲಿನ ಅಂಕಪಟ್ಟಿಯ ಆಧಾರದ ಮೇಲೆ ಫಲಿತಾಂಶ ಪ್ರಕಟವಾಗಲಿದೆ. ಇದರಿಂದ ಭಾರತಕ್ಕೆ ಲಾಭವಾಗಲಿದೆ. ಹವಾಮಾನ ಇಲಾಖೆ ಪ್ರಕಾರ ಗುರುವಾರ ಗಯಾನದಲ್ಲಿ ಶೇ 76ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಅಂಪೈರ್​: ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಅಪ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಆನ್​ಫೀಲ್ಡ್​​​ ಅಂಪೈರ್​​ಗಳಾಗಿ ರಿಚರ್ಡ್​ ಇಲ್ಲಿಂಗ್​ವರ್ತ್​ ಮತ್ತು ನಿತಿನ್​ ಮೆನನ್​ ಇರಲಿದ್ದಾರೆ. ರಿಚರ್ಡ್​ ಕೆಟಲ್​ಬರೋ ಟಿಪಿ ಅಂಪೈರ್​ ಆಗಿದ್ದು, ನಾಲ್ಕನೇ ಅಂಪೈರ್​ ಆಗಿ ಅಹ್ಸಾನ್​ ರಾಜಾ ಕಾರ್ಯ ನಿರ್ವಹಿಸಲಿದ್ದಾರೆ.

ಎರಡನೇ ಸೆಮಿಫೈನಲ್​ ಪಂದ್ಯಕ್ಕೆ ಆನ್​ಫೀಲ್ಡ್​ ಅಂಪೈರ್​ಗಳಾಗಿ ಕ್ರಿಸ್​ ಗಫಾನಿ ಮತ್ತು ರಾಡ್ನಿ ಟಕರ್​ ಇರಲಿದ್ದು, ಜೋಯಲ್​ ವಿಲ್ಸನ್​ ಟಿವಿ ಮತ್ತು ಫಾಲ್​ ರೀಫೆಲ್​ ನಾಲ್ಕನೇ ಅಂಪೈರ್​ ಆಗಿರಲಿದ್ದಾರೆ.

ಸ್ಥಳ: ಮೊದಲ ಸೆಮಿಸ್​ ಪಂದ್ಯ - ಬ್ರಿಯಾನ್ ಲಾರಾ ಮೈದಾನ, ಟ್ರಿನಿಡಾಡ್‌

ಎರಡನೇ ಪಂದ್ಯ - ಪ್ರೋವಿಡೆನ್ಸ್​ ಮೈದಾನ - ಗಯಾನಾ

ಇದನ್ನೂ ಓದಿ: ಕ್ರಿಕೆಟ್​​ನ ಡಿಎಲ್​ಎಸ್​​ ನಿಯಮದ ಸಹಶೋಧಕ ಫ್ರಾಂಕ್ ಡಕ್ವರ್ತ್ ನಿಧನ - Frank Duckworth

ETV Bharat Logo

Copyright © 2024 Ushodaya Enterprises Pvt. Ltd., All Rights Reserved.