ETV Bharat / state

ವಿಪಕ್ಷಗಳ ಟೀಕೆಯಿಂದ ಗ್ಯಾರಂಟಿ ಯೋಜನೆಗಳು ಪ್ರಚಾರ ಕಳೆದುಕೊಳ್ತಿವೆ: ಟಿ.ಬಿ.ಜಯಚಂದ್ರ - GUARANTEE SCHEMES

ವಿರೋಧ ಪಕ್ಷಗಳ ಟೀಕೆಗಳಿಂದ ನಮ್ಮ ಗ್ಯಾರಂಟಿ ಯೋಜನೆಗಳು ಪ್ರಚಾರ ಕಳೆದುಕೊಳ್ಳುತ್ತಿವೆ. ಅವುಗಳಿಗೆ ಪ್ರಚಾರ ದೊರೆಯುವ ಕೆಲಸವಾಗಬೇಕು ಎಂದು ಟಿ.ಬಿ.ಜಯಚಂದ್ರ ಹೇಳಿದರು.

BELAGAVI  GUARANTEE YOJANA  WINTER SESSION 2024 TB JAYACHANDRA
ಮಾಜಿ ಸಚಿವ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ (ETV Bharat)
author img

By ETV Bharat Karnataka Team

Published : 3 hours ago

ಬೆಳಗಾವಿ: "ಗ್ಯಾರಂಟಿ ಯೋಜನೆಗಳನ್ನು ನೀಡಿರುವುದೇ ತಪ್ಪು ಎಂಬಂತೆ ವಿರೋಧ ಪಕ್ಷಗಳು ಇವುಗಳನ್ನು ಬಿಟ್ಟಿ ಭಾಗ್ಯ ಎಂದು ಟೀಕಿಸುತ್ತಿವೆ" ಎಂದು ಮಾಜಿ ಸಚಿವ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸುವರ್ಣಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ವಿರೋಧ ಪಕ್ಷಗಳ ಟೀಕೆಯಿಂದ ನಮ್ಮ ಗ್ಯಾರಂಟಿ ಯೋಜನೆಗಳು ಪ್ರಚಾರ ಕಳೆದುಕೊಳ್ಳುತ್ತಿವೆ. ನಮ್ಮ ಸರ್ಕಾರದ ಯೋಜನೆಗಳಿಗೆ ಹೆಚ್ಚು ಪ್ರಚಾರ ದೊರೆಯುವ ಕೆಲಸವಾಗಬೇಕು. ಗ್ಯಾರಂಟಿಗಳು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಫಲಾನುಭವಿಗಳನ್ನು ತಲುಪುತ್ತಿದೆ‌. ಈ ವಾಸ್ತವತೆಯನ್ನು ನಾವು ಅರಿತುಕೊಳ್ಳಬೇಕು" ಎಂದರು.

ಮಾಜಿ ಸಚಿವ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿಕೆ (ETV Bharat)

"ಅಭಿವೃದ್ಧಿಗಾಗಿ ಕ್ಷೇತ್ರವಾರು ನೂತನ ಕಾಮಗಾರಿಗಳಿಗೆ ಅನುದಾನ ನೀಡುವ ಕುರಿತು 4 ಸಾವಿರ ಕೋಟಿ ರೂಪಾಯಿ ಒದಗಿಸುವ ಬಗ್ಗೆ ಪಕ್ಷದ ಶಾಸಕಾಂಗ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಮಳೆಹಾನಿಯಿಂದ ಹಾಳಾದ ರಸ್ತೆಗಳು, ಹಳ್ಳಿಗಾಡಿನ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ಕುರಿತು ಶಾಸಕಾಂಗ ಸಭೆಯಲ್ಲಿ ಚರ್ಚೆಯಾಗಿದೆ. ಈ ಎಲ್ಲ ಕೆಲಸಗಳಿಗೆ ಹಣ ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ" ಎಂದು ತಿಳಿಸಿದರು.

"ರಾಜ್ಯದಲ್ಲಿ ಆಯ್ದ ಹಾಗೂ ಅತೀ ಅವಶ್ಯಕವಿರುವ ನೂತನ ಕಾಮಗಾರಿಗಳಿಗೆ ನಾಲ್ಕು ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆಗೆ ಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿದ್ದಾರೆ. ಹಳ್ಳಿಗಳ ರಸ್ತೆಗಳ ಸುಧಾರಣೆಗೆ 2 ಸಾವಿರ ಕೋಟಿ ರೂಪಾಯಿಗಳಷ್ಟು ನೀಡಲು ಒತ್ತಾಯಿಸಿದ ಬೆನ್ನಲ್ಲೇ ಅದಕ್ಕೂ ಸಿದ್ದರಾಮಯ್ಯನವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ" ಎಂದು ಮಾಹಿತಿ ನೀಡಿದರು.

"ಕ್ಷೇತ್ರವಾರು ಅನುದಾನ ವಿತರಣೆಯಲ್ಲಿ ಪಕ್ಷಾತೀತವಾದ ನಿಲುವಿನ ಜೊತೆಗೆ ಎಲ್ಲರಿಗೂ ಹಣ ನೀಡಲು ಸಹಮತಿ ನೀಡಿದ್ದಾರೆ. ನಾವು ನಮ್ಮ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳ ಮೂಲಕ ನೇರವಾಗಿ ಹಣ ಜಮೆ ಮಾಡುತ್ತಿರುವುದು ಸೇರಿದಂತೆ ಪಂಚ ಯೋಜನೆಗಳು ಮಧ್ಯಮ ವರ್ಗದ, ಮಹಿಳೆಯರಿಗೂ ಹೆಚ್ಚಿನ ಸಹಾಯವಾಗಿದೆ. ಅದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನೇರವಾಗಿ ಸಹಾಯ ಮಾಡುವ ಯೋಜನೆ ಎಲ್ಲೂ ಇರಲಿಲ್ಲ. ಆದರೆ ಈ ಯೋಜನೆಗಳು ಹೆಚ್ಚು ಪ್ರಚಾರವಾಗುತ್ತಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯವರು ಸ್ನೇಹಮಯಿ ಕೃಷ್ಣರನ್ನು ಬಳಸಿಕೊಳ್ಳುತ್ತಿದ್ದಾರೆ- ಶಾಸಕ ರಂಗನಾಥ್​: "ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರ ಹಿನ್ನೆಲೆಯ ಬಗ್ಗೆ ಇಡೀ ಕರ್ನಾಟಕ ರಾಜ್ಯಕ್ಕೆ ಗೊತ್ತಿದೆ. ಅವರ ಹಿಂದೆ ನಿಂತು ಎಲ್ಲವನ್ನೂ ಯಾವ ಪಕ್ಷದವರು? ಯಾರ್ಯಾರು ನಿಯಂತ್ರಣ ಮಾಡುತ್ತಿದ್ದಾರೆ ಎಂಬುದೂ ಸಹ ಎಲ್ಲ ಜನರಿಗೂ ತಿಳಿದಿರುವ ವಿಚಾರ" ಎಂದು ಕುಣಿಗಲ್ ಶಾಸಕ ಡಾ. ರಂಗನಾಥ್ ಬಿಜೆಪಿ ವಿರುದ್ಧ ಕಿಡಿಕಾರಿದರು.

ಕುಣಿಗಲ್ ಶಾಸಕ ಡಾ.ರಂಗನಾಥ್ ಪ್ರತಿಕ್ರಿಯೆ (ETV Bharat)

ಸುವರ್ಣಸೌಧದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, "ಸ್ನೇಹಮಯಿ ಕೃಷ್ಣ ಅವರನ್ನು ಬಿಜೆಪಿಯವರು ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ತಮಗೆ ಬೇಕಾದ ಹಾಗೆ ಹೇಳಿಕೆಗಳನ್ನು ಕೊಡಿಸುತ್ತಾ ಕೃಷ್ಣ ಅವರ ಬಳಕೆ ಮಾಡಿಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದರು.

"ಒಬ್ಬ ವ್ಯಕ್ತಿಯ ಗುಣಧರ್ಮ ಆತನ ಹಿನ್ನೆಲೆಯ ಬಗ್ಗೆ ಅವಲೋಕನ ಮಾಡಬೇಕಿರುವುದು ಪ್ರತಿಯೊಬ್ಬರ ಧರ್ಮವಾಗಿದೆ. ಕೃಷ್ಣ ಅವರ ಹಿನ್ನೆಲೆ ಬಹಳಷ್ಟು ಜನರಿಗೆ ಗೊತ್ತಿರುವ ವಿಚಾರವಾಗಿದೆ. ಯಾರದೋ ಹೆಗಲಮೇಲೆ ಇನ್ನಾರೋ ಬಂದೂಕು ಇಟ್ಟು ರಾಜಕೀಯವಾಗಿ ಅವರನ್ನು ಬಳಸಿಕೊಳ್ಳುವ ಕೆಲಸದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರುವಲ್ಲಿ ಬಿಜೆಪಿ ಇದನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ" ಎಂದು ಟೀಕಿಸಿದರು.

ಇದನ್ನೂ ಓದಿ: ಏನೇ ಆಮಿಷ ಒಡ್ಡಲಿ, ಮುಡಾ ಹೋರಾಟದಿಂದ ಹಿಂದೆ ಸರಿಯದಿರಿ: ಕೃಷ್ಣ ಪರ ಹೆಚ್​. ವಿಶ್ವನಾಥ್ ಬ್ಯಾಟಿಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.