ETV Bharat / state

ಇಂದಿನಿಂದ ಬೆಂಗಳೂರಿನಲ್ಲಿ ಮೊಬೈಲ್ ವ್ಯಾನ್​ಗಳ ಮೂಲಕ ರಿಯಾಯತಿ ದರದಲ್ಲಿ ಈರುಳ್ಳಿ ಮಾರಾಟ ಪ್ರಾರಂಭ - Subsidised price onion distribution - SUBSIDISED PRICE ONION DISTRIBUTION

ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟವು ಭಾರತ ಸರ್ಕಾರದ ನಿರ್ದೇಶನದ ಅನುಸಾರದ ಪ್ರಕಾರ, ಇಂದಿನಿಂದ ಬೆಂಗಳೂರಿನಲ್ಲಿ ರಿಯಾಯತಿ ದರದಲ್ಲಿ ಈರುಳ್ಳಿ ಮಾರಾಟ ಪ್ರಾರಂಭಿಸಿದೆ.

onion
ರಿಯಾಯತಿ ದರದಲ್ಲಿ ಈರುಳ್ಳಿ ಮಾರಾಟ (ETV Bharat)
author img

By ETV Bharat Karnataka Team

Published : Sep 23, 2024, 3:41 PM IST

ಬೆಂಗಳೂರು : ಸಿಲಿಕಾನ್ ಸಿಟಿಯ ಈರುಳ್ಳಿ ಪ್ರಿಯರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ನ್ಯಾಷನಲ್ ಕೋ ಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್) ಬೆಂಗಳೂರು ಶಾಖೆ ಭಾರತ ಸರ್ಕಾರದ ನಿರ್ದೇಶನದ ಅನುಸಾರದಂತೆ, ರಿಯಾಯತಿ ದರದಲ್ಲಿ ಬೆಲೆ ಸ್ಥಿರೀಕರಣ ನಿಧಿ (ಪಿಎಸ್ಎಫ್) ಅಡಿಯಲ್ಲಿ ಈರುಳ್ಳಿ ಮಾರಾಟವನ್ನು ಇಂದಿನಿಂದ ಆರಂಭಿಸಿದೆ.

ಇಂದು ಮೊಬೈಲ್ ವ್ಯಾನ್ ಮೂಲಕ ಈರುಳ್ಳಿ ಮಾರಾಟ ಮಧ್ಯಾಹ್ನ 12.30 ರಿಂದ ಹೆಚ್​​​ಡಿಎಫ್​ಸಿ ಬ್ಯಾಂಕ್ ಲಿಮಿಟೆಡ್, ನಂ.27, ಡಾಲರ್ಸ್ ಕಾಲೋನಿ, 1 ಮುಖ್ಯ ರಸ್ತೆ, ನಂದಿನಿ ಲೇಔಟ್, ಬೆಂಗಳೂರು - 560096 ನಲ್ಲಿ ಆರಂಭವಾಗಿದೆ.

onion
ರಿಯಾಯತಿ ದರದಲ್ಲಿ ಈರುಳ್ಳಿ ಮಾರಾಟಕ್ಕೆ ಚಾಲನೆ (ETV Bharat)

35 ರೂಪಾಯಿಗೆ ಒಂದು ಕಿಲೋ ಈರುಳ್ಳಿಯನ್ನು ಈ ಮೊಬೈಲ್ ವ್ಯಾನ್​ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆಯ ವರದಿಗಳ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಈರುಳ್ಳಿ ಪೂರೈಸಲು ಈ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ.

'ಈ ಯೋಜನೆಯಡಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ಖರೀದಿಸಿದ ಈರುಳ್ಳಿ ಸೋಮವಾರದಿಂದ ಬೆಂಗಳೂರು ನಗರದಲ್ಲಿ ಮಾರಾಟವಾಗುತ್ತಿದೆ. ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರಿಯಾಯತಿ ದರದಲ್ಲಿ ಈರುಳ್ಳಿ ದೊರೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನಾಲ್ಕು ಸಂಚಾರಿ ಈರುಳ್ಳಿ ವ್ಯಾನ್​ಗಳನ್ನು ಮಂಜೂರು ಮಾಡಲಾಗಿದೆ' ಎಂದು ಶಾಖಾ ವ್ಯವಸ್ಥಾಪಕ ರವಿಚಂದ್ರ ಮಾಹಿತಿ ನೀಡಿದರು.

onion
ಈರುಳ್ಳಿ ಖರೀದಿಸಿದ ಜನರು (ETV Bharat)

ಈರುಳ್ಳಿಯನ್ನು ವಿತರಿಸಲು ಒಟ್ಟು 112 ಮೊಬೈಲ್ ವ್ಯಾನ್​ಗಳನ್ನು ಬಳಸಲಾಗುವುದು. ಈರುಳ್ಳಿ ದರಗಳು ಸಹಜ ಸ್ಥಿತಿಗೆ ಬರುವವರೆಗೂ ಮಾರಾಟ ಮುಂದುವರೆಯಲಿದೆ. ಗುರುವಾರದ ವೇಳೆಗೆ ಈರುಳ್ಳಿ ಮಾರಾಟ ವಾಹನಗಳ ಸಂಖ್ಯೆಯನ್ನು 50 ವ್ಯಾನ್​ಗಳಿಗೆ ಹೆಚ್ಚಿಸಲಾಗುವುದು. ಮುಂದಿನ ವಾರ ಈರುಳ್ಳಿ ಮಾರಾಟ ವಾಹನಗಳ ಸಂಖ್ಯೆ 112ಕ್ಕೆ ಮುಟ್ಟಲಿದೆ ಎಂದು ವಿವರಿಸಿದರು.

ಇದನ್ನೂ ಓದಿ : 4 ತಿಂಗಳಲ್ಲಿ 2.6 ಲಕ್ಷ ಟನ್ ಈರುಳ್ಳಿ ರಫ್ತು: ಕೇಂದ್ರ ಸರ್ಕಾರ - India Onion Exports

ETV Bharat Logo

Copyright © 2025 Ushodaya Enterprises Pvt. Ltd., All Rights Reserved.