ಬೆಂಗಳೂರು: ಮಾರ್ಚ್ ತಿಂಗಳ ಭಾನುವಾರ ಮತ್ತು 2ನೇ ಹಾಗೂ 4ನೇ ಶನಿವಾರದಂದು ಬೆಂಗಳೂರು ನಗರದ 5 ಉಪನೋಂದಣಿ ಕಚೇರಿಗಳು ಕಾರ್ಯ ನಿರ್ವಹಿಸಲಿವೆ. ಆರ್ಥಿಕ ವರ್ಷದ ಕೊನೆಯ ತಿಂಗಳಿನಲ್ಲಿ ಸ್ಥಿರಾಸ್ತಿಗಳ ವಹಿವಾಟಿನಲ್ಲಿ ಹೆಚ್ಚಳವಾಗುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ನಗರ ಜಿಲ್ಲೆಯ ಚಾಮರಾಜಪೇಟೆ, ಇಂದಿರಾ ನಗರ, ರಾಜಾಜಿನಗರ, ಯಲಹಂಕ ಹಾಗೂ ಜೆ.ಪಿ.ನಗರ ಉಪನೋಂದಣಿ ಕಚೇರಿಗಳು ಸೂಚಿಸಿದ ದಿನಗಳಂದು ಕಾರ್ಯ ನಿರ್ವಹಿಸುತ್ತವೆ ಎಂದು ನೋಂದಣಿ ಹಾಗೂ ಮುದ್ರಾಂಕ ಇಲಾಖೆ ತಿಳಿಸಿದೆ.
ಮಾರ್ಚ್ 9, 10, 17, 23, 24 ಹಾಗೂ ಮಾ.31ರಂದು ಜಿಲ್ಲಾ ನೋಂದಣಿ ಕಚೇರಿ ಹಾಗೂ ಉಪ ನೋಂದಣಿ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಜಿಲ್ಲಾ ನೋಂದಣಿ ಕಚೇರಿ, ಶಿವಾಜಿನಗರ ಮತ್ತು ಉಪ ನೋಂದಣಿ ಕಚೇರಿ ಇಂದಿರಾನಗರ, ಜಿಲ್ಲಾ ನೋಂದಣಿ ಕಛೇರಿ ಬಸವನಗುಡಿ ಮತ್ತು ಉಪ ನೋಂದಣಿ ಕಚೇರಿ ಚಾಮರಾಜಪೇಟೆ, ಜಿಲ್ಲಾ ನೋಂದಣಿ ಕಚೇರಿ, ರಾಜಾಜಿನಗರ ಹಾಗೂ ಉಪ ನೋಂದಣಿ ಕಚೇರಿ ರಾಜಾಜಿನಗರ, ಜಿಲ್ಲಾ ನೋಂದಣಿ ಕಚೇರಿ, ಗಾಂಧಿನಗರ ಹಾಗೂ ಉಪ ನೋಂದಣಿ ಕಚೇರಿ ಯಲಹಂಕ, ಜಿಲ್ಲಾ ನೋಂದಣಿ ಕಚೇರಿ, ಜಯನಗರ ಮತ್ತು ಉಪ ನೋಂದಣಿ ಕಚೇರಿ ಜೆ.ಪಿ.ನಗರ ಕಚೇರಿಗಳು ಸಾರ್ವಜನಿಕರಿಗೆ ಬಳಕೆಗೆ ಸಿಗಲಿವೆ.
ಇದನ್ನೂ ಓದಿ: ನಿಗಮ-ಮಂಡಳಿಗಳ ಪರೀಕ್ಷಾ ಫಲಿತಾಂಶ ಪ್ರಕಟಿಸಿದ ಕೆಇಎ