ETV Bharat / state

ವಿದ್ಯಾರ್ಥಿಗಳ ತಪ್ಪು ಉತ್ತರಕ್ಕೆ ಶಿಕ್ಷಕರಿಗೇ ಏಟು: ಕಲಿಕೆಗೆ ವಿಭಿನ್ನ ಹಾದಿ, ಮೇಷ್ಟ್ರ ಕೆಲಸಕ್ಕೆ ಸಲಾಂ - punishment to teacher - PUNISHMENT TO TEACHER

ಹಾಲಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಹೆಚ್. ಎಸ್ ಗೋಪಾಲ್ ಅವರು ತಮ್ಮದೇ ಆದ ಪ್ರಯೋಗದ ಮೂಲಕ ವಿದ್ಯಾರ್ಥಿಗಳನ್ನು ಜಾಣರನ್ನಾಗಿಸುತ್ತಿದ್ದಾರೆ. ಈ ಮೂಲಕ ಇತರರಿಗಿಂತ ಭಿನ್ನರಾಗಿ ಕೆಲಸ ಮಾಡುತ್ತಿದ್ದಾರೆ.

ಶಾಲೆಯ ಶಿಕ್ಷಕ ಹೆಚ್​ ಎಸ್ ಗೋಪಾಲ್
ಶಾಲೆಯ ಶಿಕ್ಷಕ ಹೆಚ್​ ಎಸ್ ಗೋಪಾಲ್
author img

By ETV Bharat Karnataka Team

Published : Mar 27, 2024, 8:53 PM IST

Updated : Mar 27, 2024, 10:23 PM IST

ಶಿವಮೊಗ್ಗ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ಪದವಿದೆ. ಯಾರೇ ಆಗಲಿ ಗುರುವಿನಲ್ಲಿ ತಮ್ಮನ್ನು ತೊಡಗಿಸಿಕೊಂಡರೆ, ಅವರಿಗೆ ಗುರಿ ಸಲೀಸಾಗಿ ದೊರೆಯುತ್ತದೆ. ಆದರೆ, ಇದಕ್ಕೆ ವಿಭಿನ್ನವಾಗಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತಪ್ಪು ಮಾಡುವ ವಿದ್ಯಾರ್ಥಿಯಿಂದಲೇ ಏಟು ತಿನ್ನುವ ಪ್ರಯೋಗದ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಿ, ಯಶಸ್ಸು ಗಳಿಸುತ್ತಿದ್ದಾರೆ.

ಶಾಲೆಯ ಶಿಕ್ಷಕ ಹೆಚ್​ ಎಸ್ ಗೋಪಾಲ್
ಶಾಲೆಯ ಶಿಕ್ಷಕ ಹೆಚ್​ ಎಸ್ ಗೋಪಾಲ್

ಹೊಸನಗರ ತಾಲೂಕು ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟ ಗ್ರಾಮ ಹಾಲಂದೂರು. ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಹೆಚ್. ಎಸ್ ಗೋಪಾಲ್ ಅವರು ತಮ್ಮದೇ ಆದ ಪ್ರಯೋಗದ ಮೂಲಕ ವಿದ್ಯಾರ್ಥಿಗಳನ್ನು ಜಾಣರನ್ನಾಗಿಸುತ್ತಿದ್ದಾರೆ. ಕಲಿಕೆಯಲ್ಲಿ ಮುಂದೆ ಬರುವಂತೆ ಮಾಡುತ್ತಿದ್ದಾರೆ.

ಈ ಶಾಲೆಯು ಒಂದನೇ ತರಗತಿಯಿಂದ 5ನೇ ತರಗತಿ ತನಕ ಶಿಕ್ಷಣ ಒದಗಿಸುತ್ತಿದೆ. ಈ ಶಾಲೆಯಲ್ಲಿ 8 ವಿದ್ಯಾರ್ಥಿಗಳಿದ್ದಾರೆ. ಇವರಿಗೆಲ್ಲ ಹೆಚ್. ಎಸ್ ಗೋಪಾಲ್ ಒಬ್ಬರೆ ಶಿಕ್ಷಕರು ಆಗಿರುವುದು ವಿಶೇಷ. ಅತ್ಯಂತ ಹಿಂದುಳಿದ ಪುಟ್ಟ ಗ್ರಾಮ ಹಾಲಂದೂರು. ಇಲ್ಲಿ ಜನಸಂಖ್ಯೆ ಕಡಿಮೆ ಇದೆ. ಈ ಶಾಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗೋಪಾಲ್ ಅವರು ವಿದ್ಯಾರ್ಥಿಗಳಲ್ಲಿ ಬದಲಾವಣೆ ತರುವ ಉದ್ದೇಶದಿಂದ ತಾವು ಹೇಳಿ‌ಕೊಟ್ಟ ಪಾಠವನ್ನು ತಪ್ಪಾಗಿ ಬರೆದರೆ, ಅವರಿಂದ ತಾವೇ ಏಟು ತಿನ್ನುವ ಪ್ರಯೋಗ ಮಾಡಿದ್ದಾರೆ. ಈ ಪ್ರಯೋಗ ಒಂದು ರೀತಿ ವಿಚಿತ್ರ ಎನ್ನಿಸಿದರೂ, ಮಕ್ಕಳ ಕಲಿಕೆಗಾಗಿ ಈ ತಂತ್ರವನ್ನು ಶಿಕ್ಷಕರು ಅನುಸರಿಸುತ್ತಿದ್ದಾರೆ.

ಈ ವಿಭಿನ್ನ ಪ್ರಯೋಗದ ಕುರಿತು ಈಟಿವಿ ಭಾರತದ ಜೊತೆ ದೂರವಾಣಿಯಲ್ಲಿ ಮಾಹಿತಿ ನೀಡಿದ ಶಿಕ್ಷಕ ಗೋಪಾಲ್ ಅವರು, ಇದು ಸಣ್ಣ ಗ್ರಾಮ. ಆದರೂ ಸಹ ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಕಳುಹಿಸುತ್ತಾರೆ. ಹಾಲಿ ವಿದ್ಯಾರ್ಥಿಗಳ ತಂದೆಯವರು ಸಹ ನಮ್ಮ ಶಾಲೆಯಲ್ಲಿಯೇ ಓದಿದವರು. ತಪ್ಪು ಮಾಡಿದಾಗ ನಾನು ಅವರಿಗೆ ಏಟು ಕೊಡುವುದಕ್ಕಿಂತ, ತಪ್ಪು ಮಾಡಿದ ವಿದ್ಯಾರ್ಥಿಗಳೇ ನನಗೆ ಏಟು ನೀಡಬೇಕು ಎಂದು ಹೇಳಿದಾಗ, ವಿದ್ಯಾರ್ಥಿಗಳು ಯಾವುದೇ ತಪ್ಪನ್ನು ಮಾಡದೇ, ಹೇಳಿಕೊಟ್ಟ ಪಾಠವನ್ನು ಸರಿಯಾಗಿ ಕಲಿಯುತ್ತಿದ್ದಾರೆ. ಇದು ನಮಗೂ ಸಂತಸವನ್ನು ತಂದುಕೊಟ್ಟಿದೆ ಎಂದು ಹೇಳಿದ್ದಾರೆ.

ಶಿಕ್ಷಕ ಹೆಚ್. ಎಸ್ ಗೋಪಾಲ ಅವರ ಪ್ರಯೋಗಕ್ಕೆ ಹಾಲಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ದಿ ಸಮಿತಿ ತಲೆದೂಗಿದೆ. ಈ ಕುರಿತು ದೂರವಾಣಿಯಲ್ಲಿ ಮಾತನಾಡಿದ ಶಾಲಾ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಓಂಕಾರ್ ಅವರು, ಗೋಪಾಲ್ ಸರ್ ಉತ್ತಮ ವ್ಯಕ್ತಿ. ಅವರು ನಮ್ಮ ಗ್ರಾಮದ‌ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಅವರ ವಿಭಿನ್ನ ಪ್ರಯೋಗ ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸಿದೆ ಎಂದರು.

ನಾವು ಮಾಡುವ ತಪ್ಪಿಗೆ ಮೇಸ್ಟ್ರಿಗೆ ನಾವೇ ಏಟು ನೀಡಬೇಕೇ? ಎಂಬ ಭಯದಿಂದ ಅವರು ತಪ್ಪು ಮಾಡದೇ ಚೆನ್ನಾಗಿ ಕಲಿಯುತ್ತಿದ್ದಾರೆ. ಗೋಪಾಲ ಸರ್ ಜೂನ್​ನಲ್ಲಿ ವಯೋನಿವೃತ್ತಿ ಹೊಂದುತ್ತಿದ್ದಾರೆ. ಇದರಿಂದ ನಮಗೆಲ್ಲ ದಾರಿ‌ ಕಾಣದಂತೆ ಆಗಿದೆ. ಇವರ ಜಾಗಕ್ಕೆ ಇಲಾಖೆಯು ಬೇರೆ ಶಿಕ್ಷಕರನ್ನು ಕಳುಹಿಸಬಹುದು. ಆದರೆ, ಗೋಪಾಲ್ ಸರ್ ಇಲ್ಲ, ನಮ್ಮ ಶಾಲೆಗೆ ಬರಲ್ಲ ಎಂಬ ಕೊರಗು ನಮ್ಮಲ್ಲಿ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : 16 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕನಿಗೆ ವಿದ್ಯಾರ್ಥಿಗಳು, ಗ್ರಾಮಸ್ಥರಿಂದ ಬೈಕ್ ಗಿಫ್ಟ್​

Last Updated : Mar 27, 2024, 10:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.