ETV Bharat / state

'ರೂಬಿಕ್ ಕ್ಯೂಬಿಕ್ ಮೊಸಾಯಿಕ್' ಗೇಮ್​ನಲ್ಲಿ ಗಿನ್ನಿಸ್​ ದಾಖಲೆ ಸೇರಿದ ದಾವಣಗೆರೆ ವಿದ್ಯಾರ್ಥಿ

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ವಿದ್ಯಾರ್ಥಿಯೊಬ್ಬರು 'ರೂಬಿಕ್​ ಕ್ಯೂಬಿಕ್​​ ಮೊಸಾಯಿಕ್​' ಗೇಮ್​ನಲ್ಲಿ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಇವರಿಗೆ ಸರ್ಟಿಫಿಕೆಟ್ ಕೊಟ್ಟು ಗೌರವಿಸಲಾಗಿದೆ.

Student Gurukiran
ವರ್ಲ್ಡ್ ರೆಕಾರ್ಡ್ ಸರ್ಟಿಫಿಕೇಟ್​ನೊಂದಿಗೆ ಗುರುಕಿರಣ್ (ETV Bharat)
author img

By ETV Bharat Karnataka Team

Published : 2 hours ago

ದಾವಣಗೆರೆ: 'ರೂಬಿಕ್ ಕ್ಯೂಬಿಕ್ ಮೊಸಾಯಿಕ್' ಗೇಮ್​ನಲ್ಲಿ ಕೇವಲ 44 ಸೆಕೆಂಡ್‌ಗಳಲ್ಲಿ ಕ್ಯೂಬ್​ಗಳನ್ನು ಜೋಡಿಸಿ ದಾವಣಗೆರೆ ವಿದ್ಯಾರ್ಥಿಯೊಬ್ಬ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಕ್ಯೂಬ್​ಗಳನ್ನು ಅತಿ ವೇಗವಾಗಿ ಜೋಡಿಸಿದ್ದರಿಂದ ವಿದ್ಯಾರ್ಥಿಯ ಹೆಸರು ಗಿನ್ನಿಸ್ ದಾಖಲೆಯಲ್ಲಿ ಸೇರಿದೆ. ಅಲ್ಲದೆ, ಗಿನ್ನಿಸ್ ಸಂಸ್ಥೆ ನೇತೃತ್ವದಲ್ಲಿ ನಡೆದ ಈ ಆಟದಲ್ಲಿ ಗೆದ್ದು ಬೀಗಿದ ವಿದ್ಯಾರ್ಥಿಗೆ ಸರ್ಟಿಫಿಕೆಟ್ ಕೊಟ್ಟು ಗೌರವಿಸಲಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ವಾಸನ ಗ್ರಾಮದ ರಾಜು ಹಾಗು ಸುಜಾತ ದಂಪತಿಯ ಪುತ್ರ ಗುರುಕಿರಣ್ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿ ಅಂಗಡಿ ಗ್ರಾಮದ ಸಿದ್ಧಿವಿನಾಯಕ ರೆಸಿಡೆನ್ಸಿಯಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಗುರುಕಿರಣ್ 'ರೂಬಿಕ್ ಕ್ಯೂಬಿಕ್ ಮೊಸಾಯಿಕ್ ಗೇಮ್' ಅಲ್ಲಿ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿ ಗುರುಕಿರಣ್ ಮಾತನಾಡಿದರು (ETV Bharat)

ಈ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ ಗುರುಕಿರಣ್​, "ರೂಬಿಕ್ ಕ್ಯೂಬಿಕ್ ಮೊಸಾಯಿಕ್ 3*3 ಆಟದಲ್ಲಿ ಕ್ಷಿಪ್ರವಾಗಿ ಕ್ಯೂಬಿಕ್​ಗಳನ್ನು ಜೋಡಿಸಿದ್ದಕ್ಕೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಆಗಿದೆ. ಹರಡಿರುವ ಕ್ಯೂಬ್​ಗಳನ್ನು ಪ್ಯಾಟರ್ನ್​ಗೆ​ ತಕ್ಕಂತೆ ಜೋಡಿಸಬೇಕು. ಕೇವಲ 44 ಸೆಕೆಂಡ್​ಗಳಲ್ಲಿ ಜೋಡಿಸಿದ್ದಕ್ಕಾಗಿ ದಾಖಲೆಯಲ್ಲಿ ತನ್ನ‌ ಹೆಸರು ಸೇರ್ಪಡೆ ಆಗಿದೆ.‌ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿ ಅಂಗಡಿ ಹಳ್ಳಿಯ ಸಿದ್ಧಿ ವಿನಾಯಕ ಶಾಲೆಯಲ್ಲಿ ಗಿನ್ನಿಸ್ ಸಂಸ್ಥೆ ನೇತೃತ್ವದಲ್ಲಿ ಗೇಮ್ ನಡೆದಿತ್ತು. ನನ್ನ ಹೆಸರು ವರ್ಲ್ಡ್ ರೆಕಾರ್ಡ್ ದಾಖಲೆಯಲ್ಲಿ ಸೇರಿದೆ. ಇದರಲ್ಲಿ ವಿವಿಧ ದೇಶದ 15 ಜನ ಭಾಗವಹಿಸಿದ್ದರು'' ಎಂದರು.‌

Student Gurukiran
ವಿದ್ಯಾರ್ಥಿ ಗುರುಕಿರಣ್ (ETV Bharat)

ಪೋಷಕರಿಂದ ಹರ್ಷ, ಇಡೀ ಜಿಲ್ಲೆಯ ಹೆಸರು ಉತ್ತುಂಗಕ್ಕೆ ಏರಿಸಿದ ಬಾಲಕ : ಗುರುಕಿರಣ್ ಈ ಸಾಧನೆ ಮಾಡಿ ದಾವಣಗೆರೆ ಹೆಸರನ್ನು ಉತ್ತುಂಗಕ್ಕೇರುವಂತೆ ಮಾಡಿದ್ದಾರೆ.‌ ಈ ಸಾಧನೆಯಿಂದ ಹತ್ತೂರಿನ ಗ್ರಾಮಸ್ಥರು ಸಂತಸ ಪಡುತ್ತಿದ್ದಾರೆ. ಅಲ್ಲದೇ ಪೋಷಕರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.‌

rubiks-cube-mosaic
ವರ್ಲ್ಡ್ ರೆಕಾರ್ಡ್ ಸರ್ಟಿಫಿಕೇಟ್​ನೊಂದಿಗೆ ಗುರುಕಿರಣ್ (ETV Bharat)

ಈ ಬಗ್ಗೆ ಗುರುಕಿರಣ್ ತಂದೆ ರಾಜು ಪ್ರತಿಕ್ರಿಯಿಸಿ, "ನನ್ನ ಮಗ ಗುರುಕಿರಣ್ ಕುಂದಾಪುರ ತಾಲೂಕಿನ ಸಿದ್ಧಿ ವಿನಾಯಕ ಶಾಲೆಯಲ್ಲಿ ನಡೆದ ರೂಬಿಕ್ ಕ್ಯೂಬಿಕ್ ಮೊಸಾಯಿಕ್ ಆಟದಲ್ಲಿ ಈ ಸಾಧನೆ ಮಾಡಿದ್ದಾನೆ. ಈ ಆಟದಲ್ಲಿ ಕ್ಯೂಬ್​ಗಳನ್ನು ಕ್ಷಿಪ್ರಗತಿಯಲ್ಲಿ ಜೋಡಣೆ ಮಾಡಿದ್ದಾನೆ.‌ 44 ಸೆಕೆಂಡ್​ನಲ್ಲಿ ಜೋಡಣೆ ಮಾಡಿದ್ದಕ್ಕೆ ಈ ಗರಿ ದೊರೆತಿದೆ.‌ ಈ ಆಟವನ್ನ ಗಿನ್ನಿಸ್ ದಾಖಲೆ ಸಂಸ್ಥೆ ನೇತೃತ್ವದಲ್ಲಿ ನಡೆಸಲಾಗಿದೆ. ಮಗ ದಾಖಲೆ ಸೃಷ್ಟಿ ಮಾಡಿದ್ದು, ಇದು ಅಂತಾರಾಷ್ಟ್ರೀಯ ದಾಖಲೆಯಾಗಿದೆ. ನಮಗೆ ಸಂತಸ ತಂದಿದೆ'' ಎಂದು ತಿಳಿಸಿದರು.

world-record certificate
ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸರ್ಟಿಫಿಕೇಟ್ (ETV Bharat)

ಇದನ್ನೂ ಓದಿ : ಸೈಕಲ್​ ತುಳಿಯುತ್ತಾ 271 ರೂಬಿಕ್ಸ್​ ಕ್ಯೂಬ್ ಸರಿಯಾಗಿ​ ಜೋಡಿಸಿ ಗಿನ್ನಿಸ್​ ದಾಖಲೆ ಬರೆದ ಬಾಲಕ - Rubiks Cube Guinness Record

ETV Bharat Logo

Copyright © 2024 Ushodaya Enterprises Pvt. Ltd., All Rights Reserved.