ETV Bharat / state

ಮಾಜಿ ಶಾಸಕ ಮೊಯ್ದೀನ್ ಬಾವಾಗೆ ನಾಯಿ ಕಡಿತ; 25 ದಿನಗಳಿಂದ ವ್ಹೀಲ್ ಚೇರ್​ನಲ್ಲೇ ಓಡಾಟ - ಮಾಜಿ ಶಾಸಕ ಮೊಯ್ದೀನ್ ಬಾವಾ

ಮಾಜಿ ಶಾಸಕ ಮೊಯ್ದೀನ್ ಬಾವಾ ಅವರಿಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದೆ.

ಮಂಗಳೂರು
ಮಂಗಳೂರು
author img

By ETV Bharat Karnataka Team

Published : Feb 16, 2024, 10:19 PM IST

ಮಾಜಿ ಶಾಸಕ ಮೊಯ್ದೀನ್ ಬಾವಾ ಅವರಿಗೆ ನಾಯಿ ಕಡಿತ

ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯ್ದೀನ್ ಬಾವಾ ಅವರಿಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದೆ. ಕಳೆದ ಇಪ್ಪತ್ತೈದು ದಿನಗಳಿಂದ ಅವರು ವ್ಹೀಲ್ ಚೇರ್​ನಲ್ಲೇ ಓಡಾಟ ನಡೆಸುತ್ತಿದ್ದಾರೆ.

ನಗರದ ಕದ್ರಿ ಪಾರ್ಕ್​ನೊಳಗಡೆ ವಾಕಿಂಗ್​​ಗೆಂದು ಬಂದಿದ್ದ ಮೊಯ್ದೀನ್ ಬಾವಾ ಅವರ ಕಾಲಿಗೆ ನಾಯಿ ಕಟ್ಟಿದೆ. ಕಾಲಿನ ನರಕ್ಕೆ ಗಾಯವಾಗಿ ಅವರು ನಡೆಯಲಾರದಂತಹ ಸ್ಥಿತಿ ತಲುಪಿದ್ದಾರೆ. ಕದ್ರಿ ಪಾರ್ಕ್‌ನೊಳಗಡೆ ಸಾಕು ನಾಯಿಗಳನ್ನು ತರುವಂತಿಲ್ಲ‌. ಆದರೆ ಬೀದಿನಾಯಿಗಳ ಕಾಟ ವಾಯುವಿಹಾರಿಗಳನ್ನು ಭೀತಿಗೆ ತಳ್ಳಿದೆ.

ಈ ಬಗ್ಗೆ ಮಾತನಾಡಿದ ಮೊಯ್ದೀನ್ ಬಾವಾ, ಈಗಾಗಲೇ ಡಿಸಿಯವರಿಗೆ, ಮ.ನ.ಪಾ ಕಮಿಷನರ್ ಅವರಿಗೆ ದೂರು ನೀಡಲಾಗಿದೆ. ಬೀದಿನಾಯಿಗಳ ಸಂತಾನ ಹೆಚ್ಚಾಗದಂತೆ ಕ್ರಮ ವಹಿಸಬೇಕು. ಅಲ್ಲದೆ ಬೀದಿಗಳಲ್ಲಿರುವ ನಾಯಿಗಳನ್ನು ಬೇರೆಡೆ ಕೊಂಡೊಯ್ದು, ಸಾಕುವುದಕ್ಕೆ ವ್ಯವಸ್ಥೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಾಗರ : ಶ್ವಾನ ಪ್ರದರ್ಶನದಲ್ಲಿ ವೀಕ್ಷಕನ ಮೇಲೆರಗಿ ಕಚ್ಚಿ ಗಾಯಗೊಳಿಸಿದ ರಾಟ್ ವ್ಹೀಲರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.