ETV Bharat / state

ಬಿತ್ತನೆ ಬೀಜ, ಗೊಬ್ಬರ ಪೂರೈಕೆಯಲ್ಲಿ ರಾಜ್ಯ ಸರ್ಕಾರ ವಿಫಲ ಎಂದ ಬೊಮ್ಮಾಯಿ; ಕೃಷಿ ಸಚಿವರು ಹೇಳಿದ್ದೇನು? - Basavaraj Bommai

author img

By ETV Bharat Karnataka Team

Published : Jun 1, 2024, 7:44 AM IST

ಬಿತ್ತನೆ ಬೀಜ, ಗೊಬ್ಬರದ ಕೊರತೆ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಯಾವುದೇ ಕೊರತೆಯಾಗದಂತೆ ಅಗತ್ಯ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಕೃಷಿ ಸಚಿವರು ಸ್ಪಷ್ಟಪಡಿಸಿದ್ದಾರೆ.

Basavaraj Bommai
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (ETV Bharat)

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (ETV Bharat)

ಹಾವೇರಿ: ಮುಂಗಾರು ಬೆಳೆಯ ಸಿದ್ಧತೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ರೈತರು ಬಿತ್ತನೆ ಪ್ರಾರಂಭಿಸಿದ್ದಾರೆ. ಆದರೆ ಬಿತ್ತನೆ ಬೀಜ, ಗೊಬ್ಬರದ ಕೊರತೆಯಾಗಿದೆಯೆಂದು ಆರೋಪಿಸಿದರು.

ಬಿತ್ತನೆ ಬೀಜ, ಗೊಬ್ಬರ ದರವೂ ಹೆಚ್ಚಾಗಿದೆ. ಪರಿಣಾಮ, ಉತ್ತಮ ಮಳೆಯಾದರೂ ಸಹ ರೈತರಿಗೆ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಇದನ್ನೆಲ್ಲ ನೋಡಿದರೆ ರಾಜ್ಯ ಸರ್ಕಾರ ಮುಂಗಾರು ಸಿದ್ಧತೆಯಲ್ಲಿ ವಿಫಲವಾಗಿದೆ ಎಂದೆನಿಸುತ್ತಿದೆ. ಬಿತ್ತನೆ ಬೀಜವನ್ನು ಮುಂಗಾರು ಆರಂಭವಾಗುವ ಮುನ್ನ ತಯಾರಿಸಬೇಕು. ಕೃಷಿ ಇಲಾಖೆ ತೋಟಗಾರಿಕಾ ಇಲಾಖೆ, ಕೃಷಿ ವಿವಿಗಳು, ಕೃಷಿ ಕಾಲೇಜ್‌ಗಳಲ್ಲಿ ಬಿತ್ತನೆ ಬೀಜ ತಯಾರಿಸಬಹುದು. ದೂರದೃಷ್ಠಿ ಇಟ್ಟುಕೊಂಡು ಮೂರ್ನಾಲ್ಕು ತಿಂಗಳು ಮೊದಲೇ ಬಿತ್ತನೆ ಬೀಜ ಉತ್ಪಾದನೆ ಮಾಡಬೇಕಿತ್ತು. ಆಮದು ಸಹ ಮಾಡಬಹುದು. ಆದರೆ ಅದ್ಯಾವುದನ್ನೂ ಈ ಸರ್ಕಾರ ಮಾಡಿಲ್ಲವೆಂದು ಆರೋಪಿಸಿದರು. ಬಿತ್ತನೆ ಬೀಜದ ಕೊರತೆಯಾದರೆ ಆಹಾರದ ಉತ್ಪಾದನೆ ಕಡಿಮೆಯಾಗುತ್ತದೆ. ಪರಿಣಾಮವಾಗಿ, ಆಹಾರ ಭದ್ರತೆಗೆ ಕೊರತೆಯಾಗುತ್ತದೆಯೆಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ, ಅನ್ನಭಾಗ್ಯಅಂತಾ ಹೇಳ್ತಾರೆ. ಅನ್ನಕ್ಕೆ ಮೊದಲು ಬೇಕಾಗಿರುವುದು ಬಿತ್ತನೆ ಬೀಜ. ಸರ್ಕಾರ ರೈತರಿಗೆ ಬೇಕಾಗುವಷ್ಟು ಬಿತ್ತನೆ ಬೀಜ ಪೂರೈಸಬೇಕು. ಖರೀದಿಗೆ ಪ್ರೋತ್ಸಾಹಧನ ನೀಡಬೇಕು. ರೈತರಿಗೇನು ಗ್ಯಾರಂಟಿ ಕೊಟ್ಟಿದ್ದೀರಿ. ಬಿತ್ತನೆ ಬೀಜದ ಗ್ಯಾರಂಟಿಯಿಲ್ಲ, ಗೊಬ್ಬರದ ಗ್ಯಾರಂಟಿಯಿಲ್ಲ. ಬೆಳೆದ ಬೆಳೆಗೆ ಬೆಲೆ ಗ್ಯಾರಂಟಿಯಿಲ್ಲ. ಮಾರುಕಟ್ಟೆ ಗ್ಯಾರಂಟಿ ಇಲ್ಲವೆಂದು ಆರೋಪಿಸಿದರು. ಹೆಕ್ಟೇರ್​ಗೆ 25 ಸಾವಿರ ರೂಪಾಯಿ ಪ್ರೋತ್ಸಾಹ ಧನ ಕೊಡಬೇಕು. ಡಿಎಪಿ ಗೊಬ್ಬರದ ಅಭಾವವಿದೆ. ಬಿತ್ತನೆ ಸಂದರ್ಭ ಡಿಎಪಿ ಗೊಬ್ಬರ ಬೇಕು. ಆದರೆ ಇವರ ಕಡೆ ಯುರಿಯಾ ಇದೆ. ಬೇಕಾದ್ದು ಬಿಟ್ಟು ಉಳಿದದ್ದೆಲ್ಲವೂ ಇದೆ ಎಂದು ಆರೋಪಗಳ ಮಳೆಗೈದರು.

ಈ ವರ್ಷ ಮಾರ್ಕೆಟಿಂಗ್ ಫೆಡರೇಷನ್​ಗೆ ಸರ್ಕಾರ ಒಂದು ನಯಾ ಪೈಸೆ ಕೊಟ್ಟಿಲ್ಲ. ಸ್ಟೇಟ್ ಫೆಡರೇಷನ್​​​ನಿಂದ ಗೊಬ್ಬರ ಖರೀದಿಸಲು ಪ್ರತೀ ವರ್ಷ ಸರ್ಕಾರ ಮುಂಗಡ ಹಣ ನೀಡುತ್ತದೆ. ಪ್ರತೀ ವರ್ಷ ಮಾರ್ಕೆಟಿಂಗ್ ಫೆಡರೇಷನ್​​ಗೆ 400 ರಿಂದ 500 ಕೋಟಿ ರೂಪಾಯಿ ಕೊಡಲಾಗುತ್ತಿತ್ತು. ಆದರೆ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಫೆಡರೇಷನ್‌ಗೆ ಒಂದು ನಯಾಪೈಸೆ ಕೂಡ ಕೊಟ್ಟಿಲ್ಲವೆಂದು ಆರೋಪಿಸಿದರು.

ಫೆಡರೇಷನ್​ನಿಂದ ಗೊಬ್ಬರ ಖರೀದಿಯಾಗಿಲ್ಲ. ಇದರಿಂದ ಸೊಸೈಟಿಗಳಿಗೆ ಗೊಬ್ಬರ ನೀಡಲಾಗುತ್ತಿಲ್ಲ. ರೈತರಿಗಾಗಿ ರೈತರಿಂದ ಹುಟ್ಟಿರುವ ಸೊಸೈಟಿಗಳಲ್ಲಿ ಗೊಬ್ಬರ ನೀಡಿದರೆ ರೈತರಿಗೆ ಗೊಬ್ಬರ ಸಿಗುತ್ತದೆ. ನ್ಯಾಯಯುತ ಬೆಲೆ ಸಹ ಸಿಗುತ್ತದೆ. ರಾಜ್ಯ ಸರ್ಕಾರ ರೈತರ ಹಿತ ಕಾಪಾಡಿಲ್ಲ. ಸರ್ಕಾರ ಫೆಡರೇಷನ್​​​ಗೆ ಮುಂಗಡ ಅನುದಾನ ನೀಡಿದ್ದರೆ, ಇಂತಹ ಸಂದರ್ಭ ಎದುರಾಗುತ್ತಿರಲಿಲ್ಲ. ರೈತರಿಗೆ ಅನ್ಯಾಯವಾಗುತ್ತಿದ್ದು, ಅವರು ಆಕ್ರೋಶಗೊಂಡಿದ್ದಾರೆ. ರಾಜ್ಯದಲ್ಲಿ ಮಳೆಯಾದರೂ ಬಿತ್ತನೆ ಮಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಎಂ ಕೂಡಲೇ ಮಧ್ಯಪ್ರವೇಶಿಸಬೇಕು, ಅನುದಾನ ಕೊಡಬೇಕೆಂದು ಒತ್ತಾಯಿಸಿದರು. ಜೊತೆಗೆ, ರೈತರಿಗೆ ಕಳಪೆ ಬಿತ್ತನೆ ಬೀಜ, ಕಳಪೆ ಗೊಬ್ಬರ ಮಾರಾಟ ಮಾಡದಂತೆ ಕೃಷಿ ಇಲಾಖೆ ನೋಡಿಕೊಳ್ಳಬೇಕು. ಇದು ಇಲಾಖೆಯ ಜವಾಬ್ದಾರಿ ಎಂದು ಬೊಮ್ಮಾಯಿ ಹೇಳಿದರು.

ಇನ್ನು, ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಆರೋಪ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿ, ಯಾರ ಕಾಲದಲ್ಲಿ, ಯಾರ ಡೈರೆಕ್ಷನ್​​ನಲ್ಲಿ ಅವ್ಯವಹಾರ ಆಗಿದೆ ಅನ್ನೋದು ಮುಖ್ಯ. ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಸಚಿವ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಬಿತ್ತನೆ ಬೀಜ ಕೊರತೆಯಾಗದಂತೆ ಅಗತ್ಯ ದಾಸ್ತಾನು- ಸಚಿವ ಚಲುರಾಯಸ್ವಾಮಿ

ಬೆಂಗಳೂರು: ಕೇರಳಕ್ಕೆ ಮುಂಗಾರು ಪ್ರವೇಶಿಸಿದ್ದು, ಎರಡು ದಿನದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡಲಿದೆ. ಮಳೆಗಾಲದ ಆರಂಭದಲ್ಲಿಯೇ ರೈತರಿಗೆ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆಯಾಗದಂತೆ ಅಗತ್ಯ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೃಷಿ ಸಚಿವರು, ಪೂರ್ವ ಮುಂಗಾರು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ರಾಜ್ಯದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ ಎಂದು ಹೇಳುವ ಮೂಲಕ ಬೊಮ್ಮಾಯಿ ಹೇಳಿಕೆಗಳಿಗೆ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಭೂಮಿ ಹದ ಮಾಡಿಕೊಳ್ಳುತ್ತಿರುವ ರೈತರು; ಹೇಗಿದೆ ಬಿತ್ತನೆ ಬೀಜ, ರಸಗೊಬ್ಬರದ ದರ? - Farmers preparing land for sowing

ವಿರೋಧ ಪಕ್ಷಗಳ ನಾಯಕರು ಕೇವಲ ಪ್ರಚಾರಕ್ಕಾಗಿ ಸುಳ್ಳು ಹೇಳಿಕೆ ನೀಡಿ ರೈತರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಕಳೆದ ಸಾಲಿನಲ್ಲಿ ಕೇಂದ್ರದಿಂದ ಬರ ಪರಿಹಾರ ಕೊಡಿಸಲು ಕನಿಷ್ಠ ಪ್ರಯತ್ನ ಪಟ್ಟಿದ್ದರೂ ಕೃಷಿಕರು ಮೆಚ್ಚುತ್ತಿದ್ದರು. ಬರ ಪರಿಸ್ಥಿತಿಯಲ್ಲೂ ರಾಜ್ಯದ ರೈತರ ಹಿತಕಾಯಲು ನಮ್ಮ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ರೈತರ ಹಿತ ಕಾಯಲು ನಾವು ಸದಾ ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.