ETV Bharat / state

ಶ್ರೀರಾಮ ಸೇನೆ ಪ್ರಮುಖರ ಸಾಮಾಜಿಕ ಮಾಧ್ಯಮ ಖಾತೆಗಳು ಬ್ಲಾಕ್​: ಹು - ಧಾ ಪೊಲೀಸ್ ಕಮಿಷನರ್​ಗೆ ಮುತಾಲಿಕ್ ದೂರು - Social media block

author img

By ETV Bharat Karnataka Team

Published : Jul 19, 2024, 9:41 PM IST

Updated : Jul 19, 2024, 10:32 PM IST

ಶ್ರೀ ರಾಮ ಸೇನೆಯ ಪ್ರಮುಖ ಮುಖಂಡರ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಬ್ಲಾಕ್​ ಮಾಡಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಪೊಲೀಸ್​ ಕಮಿಷನರ್​ಗೆ ದೂರು ನೀಡಿದ್ದಾರೆ.

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (ETV Bharat)

ಹುಬ್ಬಳ್ಳಿ: ಶ್ರೀ ರಾಮ ಸೇನೆಯ ಪ್ರಮುಖ ಮುಖಂಡರ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಬ್ಲಾಕ್​ ಮಾಡಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಹುಬ್ಬಳ್ಳಿ - ಧಾರವಾಡ ಪೊಲೀಸ್​ ಕಮಿಷನರ್​ಗೆ ದೂರು ನೀಡಿದ್ದಾರೆ.

ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಕಳೆದ 15 ದಿನಗಳಿಂದ ನನ್ನ ಸೇರಿ ಶ್ರೀರಾಮ್ ಸೇನೆಯ 20ಕ್ಕೂ ಹೆಚ್ಚು ಪ್ರಮುಖರ ಇನ್​ಸ್ಟಾಗ್ರಾಮ್​ ಮತ್ತು ಫೇಸ್​ಬುಕ್​ ಖಾತೆಗಳನ್ನು ಬ್ಲಾಕ್ ಮಾಡಿದ್ದಾರೆ. ಲವ್​ ಜಿಹಾದ್​ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಹೆಲ್ಪ್ ಲೈನ್​, ತ್ರಿಶೂಲ್​ ದೀಕ್ಷೆ ಮಾಡಿದ್ದಕ್ಕೆ ರಾಜ್ಯಾದ್ಯಂತ ಪ್ರಚಾರ ಸಿಕ್ತು. ಇದರಿಂದ ಒಂದು ಸಮುದಾಯದವರು ಕೆರಳಿ, ನಮ್ಮ​ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬ್ಲಾಕ್​ ಮಾಡಿಸಿದ್ದಾರೆ ಎಂಬ ಸುದ್ದಿ ಇದೆ. ವಿಶೇಷವಾಗಿ ಭಟ್ಕಳ, ಮಂಗಳೂರು ಮತ್ತು ವಿದೇಶದಲ್ಲಿರುವ ಕೆಲವ ಪಾತ್ರ ಇದೆ ಎಂಬ ಅಂಶ ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ಪೊಲೀಸ್​ ಕಮಿಷನರ್ ಎನ್​ ​ಶಶಿಕುಮಾರ್​ಗೆ ದೂರು ಕೊಟ್ಟಿದ್ದೇವೆ. ಕೊಡಲೇ ತನಿಖೆ ನಡೆಸಿ ಸಮಸ್ಯೆ ಬಗೆಹರಿಸಿಕೊಡಬೇಕು ಎಂಬ ವಿನಂತಿ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ಬಿಜೆಪಿ ವಂಶಾಧಾರಿತವಾಗಿ ಟಿಕೆಟ್​ ಕೊಟ್ಟರೆ, ಶ್ರೀರಾಮಸೇನೆಯಿಂದ ಹಿಂದೂ ಅಭ್ಯರ್ಥಿ ಕಣಕ್ಕೆ: ಪ್ರಮೋದ್ ಮುತಾಲಿಕ್ ಎಚ್ಚರಿಕೆ - Pramod Mutalik Warns BJP

Last Updated : Jul 19, 2024, 10:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.