ಹುಬ್ಬಳ್ಳಿ: ಅಯೋಧ್ಯೆ ರೈಲು ನಿಲ್ದಾಣದಲ್ಲಿ ಹುಬ್ಬಳ್ಳಿಯ ಕಲಾವಿದರು ಕಮಾಲ್ ಮಾಡಿದ್ದಾರೆ. ಲಂಕಾಗೆ ಹೋಗಲು ರಾಮನಿಗೆ ಹನುಮಾನ್ ಸೈನ್ಯದ ಜೊತೆಗೆ ಅಳಿಲು ಕೂಡ ಸೇತುವೆ ನಿರ್ಮಾಣಕ್ಕೆ ಸಹಾಯ ಮಾಡಿತ್ತು. ಅದೇ ರೀತಿ ಅಯೋಧ್ಯೆಯ ರೈಲು ನಿಲ್ದಾಣಕ್ಕೆ ಹುಬ್ಬಳ್ಳಿಯ ಕಲಾವಿದರು ತಮ್ಮ ಕೈಚಳಕದಿಂದ ಗಮನ ಸೆಳೆದಿದ್ದಾರೆ.
ಶ್ರೀರಾಮನಿಗೆ ಸಮುದ್ರದ ಮೇಲೆ ಸೇತುವೆ ಕಟ್ಟಲು ಅಳಿಲು ಸಹ ಸಹಾಯ ಮಾಡಿದೆ ಎಂಬ ಉಲ್ಲೇಖ ರಾಮಾಯಣದಲ್ಲಿದೆ. ಅಂತೆಯೇ ಅಳಿಲಿನ ಬೃಹದಾಕಾರದ ಕಲಾಕೃತಿಯನ್ನು ಅಯೋಧ್ಯೆಯ ಧಾಮ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ನಿರ್ಮಿಸಲಾಗಿದೆ. ಐದು ಕಲಾಕೃತಿಯನ್ನು ಆರ್ಟ್‌ವಾಲೇ ಹುಬ್ಬಳ್ಳಿಯ ಇನ್ಪಾಸ್ಟ್ರಕ್ಟರ್ ಸಂಸ್ಥೆ ನಿರ್ಮಿಸಿದ್ದು, ಒಂದಕ್ಕಿಂತ ಒಂದು ಆಕರ್ಷಕವಾಗಿವೆ.
ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯ ಆರ್ಟ್ ವಾಲೇ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಓಸ್ತವಾಲ್ ಹಾಗೂ ಆರ್ಟ್ ಡೈರೆಕ್ಟರ್ ನಿಧಿ ಓಸ್ತವಾಲ್ ಅವರ ಮಾರ್ಗದರ್ಶನದಲ್ಲಿ ಈ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಕಲಾಕೃತಿ ನಿರ್ಮಾಣದ ಪ್ರಾಜೆಕ್ಟ್ ಮುಖ್ಯಸ್ಥ (ಆರ್ಕಿಟೆಕ್ಟ್) ಸನತ್ ಪಾಟೀಲ, ಕಿರಿಯ ಆರ್ಕಿಟೆಕ್ಟ್ ವಿನಯಕುಮಾರ ಕುಂಬಾರ ಸೇರಿದಂತೆ ಒಟ್ಟು 20 ಜನ ಸಿಬ್ಬಂದಿ ಕೇವಲ 35 ದಿನಗಳಲ್ಲಿ ಕಲಾಕೃತಿ ಸಿದ್ಧಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕೈಯಲ್ಲಿ ಅರಳಿದ ಅಯೋಧ್ಯೆ ರಾಮಮಂದಿರ
ಜಂಕ್ಷನ್‌ನ ಮುಖ್ಯ ದ್ವಾರದ ಬಳಿಯ ಎ-3 ಪ್ಯಾಸೇಜ್‌ನಲ್ಲಿ ಕ್ವಾರ್ಟನ್ ಸ್ಟೀಲ್ನಲ್ಲಿ ಈ ಕಲಾಕೃತಿಯನ್ನು ಈಗಾಗಲೇ ಸ್ಥಾಪಿಸಲಾಗಿದೆ. ಅಳಿಲು ಒಟ್ಟು 19.5 ಅಡಿ ಎತ್ತರವಿದ್ದು, 2.5 ಟನ್ ತೂಕವಿದೆ. ಇದು ಭಾರತದ ಅತೀ ಎತ್ತರದ ಅಳಿಲಿನ ಕಲಾಕೃತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ಅದರಂತೆ ರೈಲ್ವೆ ಜಂಕ್ಷನ್‌ನಲ್ಲಿ 40 ಅಡಿ ಎತ್ತರದ ಅಯೋಧ್ಯೆ ರಾಮ ಮಂದಿರ, 8.5 ಅಡಿ ಎತ್ತರದ ಅಯೋಧ್ಯೆ ಹಾಗೂ 9 ಅಡಿ ಎತ್ತರದ ನಾಮಫಲಕ ಹಾಗೂ 40 ಅಡಿ ಎತ್ತರದ ಸರಯು ನದಿ ಘಾಟ್ ಕಲಾಕೃತಿಗಳನ್ನು ಆರ್ಟ್ ವಾಲೇ ಸಂಸ್ಥೆ ನಿರ್ಮಾಣ ಮಾಡಿದೆ.
ಇದನ್ನೂ ಓದಿ: ರಾಮ ಮಂದಿರದ ಕಲ್ಲು, ರಾಮಲಲ್ಲಾ ವಿಗ್ರಹದ ಶಿಲೆ ಆಯ್ಕೆ ಮಾಡಿದ್ದೇ ಕೋಲಾರ ವಿಜ್ಞಾನಿ!
ಆರ್ಟ್ ಡೈರೆಕ್ಟರ್ ನಿಧಿ ಓಸವಾಲ್ ಮಾತನಾಡಿ, ''ತಮಗೆ ಈ ಅವಕಾಶ ಸಿಕ್ಕಿದಕ್ಕೆ ಖುಷಿಯಾಗಿದೆ. ನಮ್ಮ ಹುಬ್ಬಳ್ಳಿ ಹಾಗೂ ಆರ್ಟ್ ವಾಲೇ ಸಂಸ್ಥೆಗೂ ಒಂದು ಗೌರವದ ಸ್ಥಾನ ಸಿಕ್ಕಿದೆ. ಇವೆಲ್ಲ ಆರ್ಟ್ಗಳಿಗೆ ಕಲ್ಯಾಣ ಜ್ಯುವೆಲೆರ್ಸ್ ಸಂಸ್ಥೆ ಸಹಯೋಗದಲ್ಲಿ ಸಿದ್ಧಪಡಿಸಲಾಗಿದೆ'' ಎಂದರು.
ಇದನ್ನೂ ಓದಿ: ಅಯೋಧ್ಯೆಯಲ್ಲಿ ನಗುಮೊಗದ ರಾಮ ಲಲ್ಲಾನ ದರ್ಶನ