ETV Bharat / state

ಆಗಸ್ಟ್ 1ರಿಂದ ರಾಜ್ಯದಲ್ಲಿ ಎಲ್ಲಾ ವಿಧದ ವಾಹನಗಳ ವೇಗಕ್ಕೆ ಕಡಿವಾಣ: ನಿಯಮ ಅನುಷ್ಠಾನಕ್ಕಿರುವ ಸವಾಲುಗಳೇನು? - Speed Limit Rule

ಆಗಸ್ಟ್ 1ರಿಂದ ರಾಜ್ಯದಲ್ಲಿ ಎಲ್ಲಾ ವಿಧದ ವಾಹನಗಳ ವೇಗಕ್ಕೆ ಕಡಿವಾಣ ಬೀಳಲಿದ್ದು, ನಿಯಮ ಮೀರಿದ್ರೆ ಸವರಾರರ ವಿರುದ್ಧ ಎಫ್​ಐಆರ್​ ದಾಖಲಾಗುತ್ತದೆ. ಈ ಬಗ್ಗೆ ಹಿರಿಯ ಅಧಿಕಾರಿ ಅಲೋಕ್​ ಕುಮಾರ್​ ಮಾಹಿತಿ ನೀಡಿದ್ದಾರೆ.

ALL TYPES OF VEHICLES  SPEED LIMIT RULE AUGUST  ADGP ALOK KUMAR  BENGALURU
ಆಗಸ್ಟ್ 1ರಿಂದ ರಾಜ್ಯದಲ್ಲಿ ಎಲ್ಲಾ ವಿಧದ ವಾಹನಗಳ ವೇಗಕ್ಕೆ ಕಡಿವಾಣ (ETV Bharat)
author img

By ETV Bharat Karnataka Team

Published : Jul 30, 2024, 4:35 PM IST

ಬೆಂಗಳೂರು : ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಕೆಲ ರಸ್ತೆ ಅಪಘಾತ ಪ್ರಕರಣಗಳಿಗೆ ಅತಿವೇಗದ ಚಾಲನೆ ಕಾರಣವಾಗುತ್ತಿದೆ. ಆದರಿಂದ ಇನ್ನುಮುಂದೆ ವೇಗದ ಚಾಲನೆಗೆ ಎಫ್ಐಆರ್ ದಾಖಲಿಸಿಕೊಳ್ಳಲು ನಿರ್ಧರಿಸಲಾಗಿದೆ. ಆಗಸ್ಟ್ 1ರಿಂದ ಈ ನಿಯಮ ಜಾರಿಗೆ ಬರಲಿದ್ದು, ರಾಜ್ಯಾದ್ಯಂತ ಗಂಟೆಗೆ 130 ಕಿ.ಮೀ.ಗಿಂತಲೂ ವೇಗವಾಗಿ ಸಂಚರಿಸುವ ಎಲ್ಲಾ ವಿಧದ ವಾಹನ ಚಾಲಕರ ವಿರುದ್ಧವೂ ಸಹ ಎಫ್ಐಆರ್ ದಾಖಲಿಸಿಕೊಳ್ಳಲಾಗುವುದು ಎಂದು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

2022ರಲ್ಲಿ ರಾಜ್ಯದಲ್ಲಿ ಸಂಭವಿಸಿದ್ದ 90 ಪ್ರತಿಶತ ಗಂಭೀರ ಅಪಘಾತ ಪ್ರಕರಣಗಳಿಗೆ ಅತಿವೇಗದ ವಾಹನ ಚಾಲನೆ ಕಾರಣ ಎಂಬ ಅಂಶ ಬಯಲಾಗಿತ್ತು. ಅಲ್ಲದೆ ಇತ್ತೀಚೆಗೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಕಾರಿನಲ್ಲಿದ್ದ ಚಾಲಕ ಸಹಿತ ಮೂವರು ಸಾವನ್ನಪ್ಪಿದ್ದರು. ಚಾಲಕ ಗಂಟೆಗೆ 160 ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿರುವುದರಿಂದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರುವುದು ಕಂಡು ಬಂದಿತ್ತು.

ಈ ವಿಚಾರವನ್ನ ಉಲ್ಲೇಖಿಸಿದ್ದ ಸುಪ್ರೀಂ ಕೋರ್ಟ್‌ನ ರಸ್ತೆ ಸುರಕ್ಷತೆ ಮೇಲ್ವಿಚಾರಣಾ ಸಮಿತಿ, ವಾಹನಗಳ ವೇಗವನ್ನ ನಿಯಂತ್ರಣಕ್ಕೆ ತರುವಂತೆ ರಾಜ್ಯ ಪೊಲೀಸರಿಗೆ ಎಚ್ಚರಿಸಿತ್ತು. ಆದ್ದರಿಂದ ರಾಜ್ಯದಲ್ಲಿ ವಾಹನಗಳ ವೇಗ ಮಿತಿಯನ್ನ ಪರಿಣಾಮಕಾರಿಯಾಗಿ ನಿಯಂತ್ರಿಸಲು ಈ ನಿರ್ಧಾರಕ್ಕೆ ಬರಲಾಗಿದೆ. ನೂತನ ನಿಯಮದ ಅನುಸಾರ ರಾಜ್ಯಾದ್ಯಂತ ಆಗಸ್ಟ್ 1ರಿಂದ ಗಂಟೆಗೆ 130 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸುವ ವಾಹನ ಚಾಲಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ - 281 (ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಾಲನೆ) ಆರೋಪದಡಿ ಎಫ್ಐಆರ್ ದಾಖಲಿಸಿಕೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ. ನಿಯಮ ಉಲ್ಲಂಘಿಸುವವರಿಗೆ 1 ಸಾವಿರ ರೂ. ದಂಡ ಅಥವಾ 6 ತಿಂಗಳವರೆಗೆ ಸಜೆ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ನೂತನ ನಿರ್ಧಾರದ ಕುರಿತು ಈಟಿವಿ ಭಾರತ್‌ಗೆ ಪ್ರತಿಕ್ರಿಯಿಸಿದ ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್, ''ರಾಜ್ಯದಲ್ಲಿ ಬಹುತೇಕ ಅಪಘಾತ ಪ್ರಕರಣಗಳಿಗೆ ವಾಹನಗಳ ವೇಗ ಕಾರಣವಾಗುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಸಾಮಾನ್ಯವಾಗಿ ಯಾವುದೇ ವಾಹನದ ವೇಗ ಗಂಟೆಗೆ 120 ಕಿ.ಮೀ ಮೀರಿದ ಬಳಿಕ ಅಪಾಯಕಾರಿಯಾಗಬಹುದು. ರಾಜ್ಯದಲ್ಲಿ ಈ ನಿಯಮ ಉಲ್ಲಂಘನೆ ಆಗುತ್ತಿರುವುದರಿಂದ ಆಗಸ್ಟ್ 1 ರಿಂದ ವೇಗ ಮಿತಿ ಮೀರುವ ಎಲ್ಲಾ ವಿಧದ ವಾಹನಗಳ ಚಾಲಕ/ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಈಗಾಗಲೇ ನಗರ ಹಾಗೂ ಜಿಲ್ಲೆಗಳ ಪೊಲೀಸ್ ಸಿಬ್ಬಂದಿಗಳಿಗೆ ಸೂಚಿಸಲಾಗಿದ್ದು, ಅದರನ್ವಯ ವೇಗದ ಮಿತಿ ಮೀರುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಮೊದಲ ಬಾರಿಗೆ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗುತ್ತದೆ. ಎರಡು ಅಥವಾ ಮೂರಕ್ಕಿಂತಲೂ ಹೆಚ್ಚು ಬಾರಿ ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ ನ್ಯಾಯಾಂಗ ಬಂಧನವಾಗುವ ಸಾಧ್ಯತೆಯೂ ಇರಲಿದೆ'' ಎಂದು ವಿವರಿಸಿದರು.

ಸವಾಲುಗಳೇನು?: ನೂತನ ನಿಯಮ ಅನುಷ್ಠಾನಕ್ಕೆ ಇರುವ ಕೆಲ ಸವಾಲುಗಳ ಕುರಿತು ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, ''ಬೆಂಗಳೂರು - ಮೈಸೂರು ರಸ್ತೆ, ಏರ್‌ಪೋರ್ಟ್ ರಸ್ತೆ ಸೇರಿದಂತೆ ಕೆಲವು ರಸ್ತೆಗಳಲ್ಲಿ ರಾತ್ರಿ ವೇಳೆ ವೇಗ ಮಿತಿ ಮೀರುವವರ ವಿರುದ್ಧ ಅತ್ಯಾಧುನಿಕ ಕ್ಯಾಮರಾಗಳ ಸಹಾಯದಿಂದ ಪ್ರಕರಣ ದಾಖಲಿಸಿಕೊಳ್ಳಬಹುದು ಎಂದರು.

ಇನ್ನೂ ಕೆಲವು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಪೂರ್ಣವಾಗಿ ಕ್ಯಾಮೆರಾಗಳ ವ್ಯವಸ್ಥೆ ಇಲ್ಲ. ಅಂಥಹ ರಸ್ತೆಗಳಲ್ಲಿ ಹಗಲಿನಲ್ಲಿ ಪೊಲೀಸ್ ಸಿಬ್ಬಂದಿಗಳನ್ನ ನಿಯೋಜಿಸುವ ಮೂಲಕ ವೇಗ ಮಿತಿ ಮೀರುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬಹುದು. ಅದೇ ರಾತ್ರಿ ಸಂದರ್ಭದಲ್ಲಿ ಸಿಬ್ಬಂದಿಗಳನ್ನ ನಿಯೋಜಿಸುವುದೂ ಸಹ ಕಷ್ಟ ಸಾಧ್ಯವಾಗುವುದರಿಂದ ಸ್ವಲ್ಪ ಸವಾಲು ಎನಿಸಬಹುದು‌. ಆದರೂ ಸಹ ಸಾಧ್ಯವಾದಷ್ಟು ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಪೊಲೀಸರ ಪ್ರಯತ್ನ ನಿರಂತರವಾಗಿರಲಿದೆ'' ಎಂದು ತಿಳಿಸಿದರು.

ಓದಿ: ರಸ್ತೆ ಖಾಲಿಯಿದೆ ಅಂತಾ ಹೀಗ್​ ಮಾಡಿದ್ರೆ ಎಫ್​​ಐಆರ್; ಆಗಸ್ಟ್ 1ರಿಂದಲೇ ರಾಜ್ಯಾದ್ಯಂತ ಜಾರಿ - Traffic Rules

ETV Bharat Logo

Copyright © 2024 Ushodaya Enterprises Pvt. Ltd., All Rights Reserved.