ETV Bharat / state

ದೀಪಾವಳಿ, ಛತ್ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ - SPECIAL TRAINS

ದೀಪಾವಳಿ ಮತ್ತು ಛತ್ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸಲಿದೆ.

special-train
ರೈಲ್ವೇ ಸ್ಟೇಷನ್‌ (ಸಂಗ್ರಹ ಚಿತ್ರ) (ETV Bharat)
author img

By ETV Bharat Karnataka Team

Published : Oct 25, 2024, 9:29 PM IST

ಬೆಂಗಳೂರು/ಹುಬ್ಬಳ್ಳಿ: ದೀಪಾವಳಿ ಮತ್ತು ಛತ್ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆ, ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ಮುಜಾಫರಪುರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ದಾನಾಪುರ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದೆ.

1. ರೈಲು ಸಂಖ್ಯೆ 07373/07374 ಎಸ್ಎಸ್ಎಸ್ ಹುಬ್ಬಳ್ಳಿ-ಮುಜಾಫರಪುರ್-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್​ಪ್ರೆಸ್ ರೈಲು (ಒಂದು ಟ್ರಿಪ್).

ಅಕ್ಟೋಬರ್ 27ರಂದು ರೈಲು ಸಂಖ್ಯೆ 07373 ಹುಬ್ಬಳ್ಳಿಯಿಂದ ಸಂಜೆ 5:20 ಗಂಟೆಗೆ ಹೊರಟು, ಮುಜಫರ್‌ಪುರ ನಿಲ್ದಾಣವನ್ನು ಅಕ್ಟೋಬರ್ 29ರಂದು ಸಂಜೆ 4 ಗಂಟೆಗೆ ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ ಅಕ್ಟೋಬರ್ 30ರಂದು ರೈಲು ಸಂಖ್ಯೆ 07374 ಮುಜಫರ್‌ಪುರದಿಂದ ಮಧ್ಯಾಹ್ನ 1:15 ಗಂಟೆಗೆ ಹೊರಟು, ಹುಬ್ಬಳ್ಳಿ ನಿಲ್ದಾಣಕ್ಕೆ ನವೆಂಬರ್ 1ರಂದು ಬೆಳಿಗ್ಗೆ 10:30 ಗಂಟೆಗೆ ಆಗಮಿಸಲಿದೆ.

ಈ ರೈಲು ಎರಡೂ ದಿಕ್ಕುಗಳಲ್ಲಿ ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಕರಾಡ್, ಸತಾರಾ ಪುಣೆ, ದೌಂಡ್ ಕಾರ್ಡ್ ಲೈನ್, ಅಹ್ಮದ್‌ನಗರ, ಕೋಪರ್‌ಗಾಂವ್, ಮನ್ಮಾಡ್, ಭೂಸಾವಲ್, ಖಾಂಡ್ವಾ, ಇಟಾರ್ಸಿ, ನರಸಿಂಗ್‌ಪುರ, ಜಬಲ್‌ಪುರ, ಕಟ್ನಿ, ಸತ್ನಾ, ಮಾಣಿಕ್‌ಪುರ, ಪ್ರಯಾಗ್‌ರಾಜ್ ಛೋಕಿ, ಪಂಡಿತ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸಾರ್, ಅರಾ, ದಾನಾಪುರ, ಪಾಟ್ಲಿಪುತ್ರ, ಸೋನ್‌ಪುರ್ ಮತ್ತು ಹಾಜಿಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಈ ರೈಲು 2 ಎಸಿ 2-ಟೈರ್, 10 ಎಸಿ 3-ಟೈರ್, 5 ಸ್ಲೀಪರ್ ಕ್ಲಾಸ್ ಮತ್ತು 2 ಲಗೇಜ್, ಬ್ರೇಕ್ ಕಮ್ ಜನರೇಟರ್ ಕಾರುಗಳು ಸೇರಿದಂತೆ 19 ಬೋಗಿಗಳನ್ನು ಒಳಗೊಂಡಿರುತ್ತದೆ.

2. ರೈಲು ಸಂಖ್ಯೆ 06235/06236 ಎಸ್ಎಂವಿಟಿ ಬೆಂಗಳೂರು-ದಾನಾಪುರ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು (ಒಂದು ಟ್ರಿಪ್).

ನವೆಂಬರ್ 3ರಂದು ರೈಲು ಸಂಖ್ಯೆ 06235 ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 11 ಗಂಟೆಗೆ ಹೊರಟು, ದಾನಾಪುರ ನಿಲ್ದಾಣವನ್ನು ನವೆಂಬರ್ 5ರಂದು ಸಂಜೆ 4:30 ಗಂಟೆಗೆ ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ನವೆಂಬರ್ 9ರಂದು ರೈಲು ಸಂಖ್ಯೆ 06236 ದಾನಾಪುರದಿಂದ ಬೆಳಿಗ್ಗೆ 8:05 ಗಂಟೆಗೆ ಹೊರಟು, ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ನವೆಂಬರ್ 11ರಂದು ಬೆಳಿಗ್ಗೆ 7:30 ಗಂಟೆಗೆ ಆಗಮಿಸಲಿದೆ.

ಈ ರೈಲು ಎರಡೂ ದಿಕ್ಕುಗಳಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್‌ಪೇಟ್ಟೈ, ಕಟಪಾಡಿ, ರೇಣಿಗುಂಟಾ, ಗುಡೂರು, ನೆಲ್ಲೂರು, ಓಂಗೋಲ್, ವಿಜಯವಾಡ, ಖಮ್ಮಂ, ವಾರಂಗಲ್, ರಾಮಗುಂಡಂ, ಬಲ್ಹರ್ಷಾ, ನಾಗ್ಪುರ, ಇಟಾರ್ಸಿ, ಪಿಪಾರಿಯಾ, ಜಬಲ್‌ಪುರ, ಕಟ್ನಿ, ಸತ್ನಾ, ಪ್ರಯಾಗ್‌ರಾಜ್‌ ಛೋಕಿ, ಮಿರ್ಜಾಪುರ, ಪಂಡಿತ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸಾರ್ ಮತ್ತು ಅರಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

2 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್‌ಡಿ ಸೇರಿದಂತೆ 18 ಕೋಚ್‌ಗಳನ್ನು ಈ ರೈಲು ಒಳಗೊಂಡಿರುತ್ತದೆ.

ಪ್ರಯಾಣಿಕರು www.enquiry.indianrail.gov.in ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ ಅಥವಾ NTES ಅಪ್ಲಿಕೇಶನ್ ಬಳಸಿ ಅಥವಾ 139ಗೆ ಡಯಲ್ ಮಾಡುವ ಮೂಲಕ ರೈಲುಗಳ ಆಗಮನ/ನಿರ್ಗಮನ ಸಮಯ, ಇತರ ವಿವರಗಳನ್ನು ಪರಿಶೀಲಿಸಬಹುದು ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ದೀಪಾವಳಿ ಪ್ರಯುಕ್ತ ಮಂಗಳೂರು - ಬೆಂಗಳೂರು ನಡುವೆ ವಿಶೇಷ ರೈಲು ಓಡಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.