ETV Bharat / state

ಭುವನೇಶ್ವರ-ಬೆಳಗಾವಿ ನಡುವೆ ವಿಶೇಷ ರೈಲು: ಹಲವು ರೈಲುಗಳ ವೇಳಾಪಟ್ಟಿ ಬದಲು - Special Train Services - SPECIAL TRAIN SERVICES

ಮುಂಬರುವ ಸಾಲು ಸಾಲು ಹಬ್ಬಕ್ಕಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆ ಒದಗಿಸುತ್ತಿದೆ. ಇದರ ವೇಳಾಪಟ್ಟಿ ಇಂತಿದೆ.

ಭುವನೇಶ್ವರ-ಬೆಳಗಾವಿ ನಡುವೆ ವಿಶೇಷ ರೈಲು ಸೇವೆ
ಭಾರತೀಯ ರೈಲ್ವೇ (ETV Bharat)
author img

By ETV Bharat Karnataka Team

Published : Sep 4, 2024, 11:03 AM IST

ಹುಬ್ಬಳ್ಳಿ: ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸಲು ಭುವನೇಶ್ವರ-ಬೆಳಗಾವಿ ನಿಲ್ದಾಣಗಳ ನಡುವೆ ಸಾಪ್ತಾಹಿಕ ವಿಶೇಷ (ರೈಲು ಸಂಖ್ಯೆ 02813/02814) ರೈಲುಗಳನ್ನು ಓಡಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಪ್ರಕರಣೆ ತಿಳಿಸಿದೆ.

ರೈಲು ಸಂಖ್ಯೆ 02813: ಸೆಪ್ಟೆಂಬರ್ 7, 14, 21 ಮತ್ತು 28 ರಂದು ಪ್ರತಿ ಶನಿವಾರ ಭುವನೇಶ್ವರದಿಂದ ಸಾಯಂಕಾಲ 07:15 ಗಂಟೆಗೆ ಹೊರಟು, ಸೋಮವಾರ ಬೆಳಗಿನ ಜಾವ 03:00 ಗಂಟೆಗೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸಲಿದೆ.

(ಹಿಂದಿರುಗುವ ದಿಕ್ಕಿನಲ್ಲಿ) ರೈಲು ಸಂಖ್ಯೆ 02814: ಸೆಪ್ಟೆಂಬರ್ 9, 16, 23 ಮತ್ತು 30ರಂದು ಪ್ರತಿ ಸೋಮವಾರ ಬೆಳಗಾವಿಯಿಂದ ಬೆಳಗ್ಗೆ 07:30 ಗಂಟೆಗೆ ಹೊರಟು, ಮಂಗಳವಾರ ಮಧ್ಯಾಹ್ನ 02:30 ಗಂಟೆಗೆ ಭುವನೇಶ್ವರ ತಲುಪಲಿದೆ.

ಈ ರೈಲುಗಳಿಗೆ ಖುರ್ದಾ ರೋಡ್, ಬ್ರಹ್ಮಪುರ, ಪಲಾಸ, ಶ್ರೀಕಾಕುಳಂ ರೋಡ, ವಿಜಯನಗರಂ, ಪೆಂಡುರ್ತಿ, ದುವ್ವಾಡ, ರಾಜಮಂಡ್ರಿ, ಎಲೂರು, ವಿಜಯವಾಡ, ಗುಂಟೂರು, ನಂದ್ಯಾಳ, ಧೋನೆ, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಮುನಿರಾಬಾದ್, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಅಳ್ನಾವರ ಮತ್ತು ಲೋಂಡಾ ನಿಲ್ದಾಣಗಳಲ್ಲಿ ನಿಲುಗಡೆ ಇರಲಿವೆ. ವಿಶೇಷ ರೈಲು ಹದಿನಾರು ಎಸಿ-3 ಟೈಯರ್​ ಬೋಗಿಗಳು ಮತ್ತು ಎರಡು ಬ್ರೇಕ್/ಲಗೇಜ್ ಕಮ್ ಜನರೇಟರ್ ಕಾರುಗಳನ್ನು ಒಳಗೊಂಡಿರುತ್ತದೆ.

ವಂದೇ ಭಾರತ್ ರೈಲುಗಳ ಸಮಯ ಪರಿಷ್ಕರಣೆ: ಮಧುರೈ-ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ವಾರಕ್ಕೆ ಆರು ದಿನ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯನ್ನು ಕೃಷ್ಣರಾಜಪುರಂ ನಿಲ್ದಾಣದಲ್ಲಿ ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ.

1. ಸೆಪ್ಟೆಂಬರ್ 5ರಿಂದ 20671 ಸಂಖ್ಯೆಯ ಮಧುರೈ-ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 12:50/12:52 ಗಂಟೆಗೆ ಬದಲು 12:30/12:32 ಗಂಟೆಗೆ ಕೃಷ್ಣರಾಜಪುರಂ ನಿಲ್ದಾಣಕ್ಕೆ ಆಗಮಿಸಿ, ನಿರ್ಗಮಿಸಲಿದೆ.

2. ಸೆಪ್ಟೆಂಬರ್ 15ರಿಂದ 20672 ಸಂಖ್ಯೆಯ ಬೆಂಗಳೂರು ಕಂಟೋನ್ಮೆಂಟ್-ಮದುರೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 1:55/1:57 ಗಂಟೆಗೆ ಬದಲು 1:43/1:45 ಗಂಟೆಗೆ ಕೃಷ್ಣರಾಜಪುರಂ ನಿಲ್ದಾಣಕ್ಕೆ ಆಗಮಿಸಿ, ನಿರ್ಗಮಿಸಲಿದೆ.

ರೈಲುಗಳ ಸೇವೆ ವಿಸ್ತರಣೆ: ವಿಜಯಪುರ ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07377/07378) ರೈಲುಗಳ ಸೇವೆಯನ್ನು ಈಗಿರುವ ಸಮಯ, ನಿಲುಗಡೆ ಮತ್ತು ಬೋಗಿಗಳ ಸಂಯೋಜನೆಯೊಂದಿಗೆ ಈ ಕೆಳಗಿನಂತೆ ವಿಸ್ತರಿಸಲಾಗುತ್ತಿದೆ.

1. 07377 ಸಂಖ್ಯೆಯ ವಿಜಯಪುರ-ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲನ್ನು ಅಕ್ಟೋಬರ್​ 1ರಿಂದ ಡಿಸೆಂಬರ್​ 31ರವರೆಗೆ ವಿಸ್ತರಿಸಲಾಗುತ್ತಿದೆ. ಇದನ್ನು ಸೆಪ್ಟೆಂಬರ್​ 30ರವರೆಗೆ ಓಡಿಸಲು ಮೊದಲೇ ತಿಳಿಸಲಾಗಿತ್ತು.

2. 07378 ಸಂಖ್ಯೆಯ ಮಂಗಳೂರು ಸೆಂಟ್ರಲ್​-ವಿಜಯಪುರ ಡೈಲಿ ಸ್ಪೆಷಲ್​ ಎಕ್ಸ್​ಪ್ರೆಸ್​ ರೈಲನ್ನು ಅಕ್ಟೋಬರ್​ 2ರಿಂದ 2025ರ ಜನವರಿ 1ರವರೆಗೆ ವಿಸ್ತರಿಸಲಾಗುತ್ತಿದೆ. ಇದನ್ನು ಅಕ್ಟೋಬರ್​ 1ರವರೆಗೆ ಓಡಿಸಲು ಮೊದಲೇ ತಿಳಿಸಲಾಗಿತ್ತು.

ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ಜರ್ಮನಿಯ 'ಫ್ಲಿಕ್ಸ್‌ಬಸ್' ಸಂಚಾರ: ಸಚಿವ ಎಂ.ಬಿ.ಪಾಟೀಲ್ ಹಸಿರು ನಿಶಾನೆ - Germany Flixbus Service

ETV Bharat Logo

Copyright © 2024 Ushodaya Enterprises Pvt. Ltd., All Rights Reserved.