ETV Bharat / state

ಪ್ರಯಾಣಿಕರ ಗಮನಕ್ಕೆ: ಜುಲೈ 29ರಂದು ಮಂಗಳೂರು ಸೆಂಟ್ರಲ್​ನಿಂದ ಹುಬ್ಬಳ್ಳಿಗೆ ಏಕಮುಖ ವಿಶೇಷ ರೈಲು - Mangaluru Hubballi Special Train

ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹುಬ್ಬಳ್ಳಿಗೆ ಜುಲೈ 29ರಂದು ಏಕಮುಖ ವಿಶೇಷ ರೈಲು ಸಂಚರಿಸಲಿದೆ.

train
ರೈಲು ನಿಲ್ದಾಣ (IANS)
author img

By ETV Bharat Karnataka Team

Published : Jul 29, 2024, 7:23 PM IST

ಹುಬ್ಬಳ್ಳಿ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ದಕ್ಷಿಣ ರೈಲ್ವೆಯು ಜುಲೈ 29ರಂದು ಮಂಗಳೂರು ಸೆಂಟ್ರಲ್​ನಿಂದ ಹುಬ್ಬಳ್ಳಿಗೆ ಏಕಮುಖ ವಿಶೇಷ ರೈಲನ್ನು ಓಡಿಸಲಿದೆ.

ರೈಲು ಸಂಖ್ಯೆ 06178 ಮಂಗಳೂರು ಸೆಂಟ್ರಲ್ - ಎಸ್ಎಸ್ಎಸ್ ಹುಬ್ಬಳ್ಳಿ ಒನ್ ವೇ ಸ್ಪೆಷಲ್ ರೈಲು ಜುಲೈ 29ರಂದು ರಾತ್ರಿ 11:10 ಗಂಟೆಗೆ ಮಂಗಳೂರು ಸೆಂಟ್ರಲ್​ನಿಂದ ಹೊರಟು, ಮರುದಿನ ಮಧ್ಯಾಹ್ನ 2:30ರ ವೇಳೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

ಈ ವಿಶೇಷ ರೈಲು ಮಾರ್ಗದಲ್ಲಿ ಮಂಗಳೂರು ಜಂಕ್ಷನ್ (11:40/11:45pm), ಮೂಲ್ಕಿ (12:50/12:52am), ಉಡುಪಿ (01:45/01:47am), ಬಾರ್ಕೂರು (02:05/02:07am), ಕುಂದಾಪುರ (02:25/02:27am), ಬೈಂದೂರು ಮೂಕಾಂಬಿಕಾ ರೋಡ್ (03:05/03:07am), ಭಟ್ಕಳ (03:23/03:25am), ಮುರ್ಡೇಶ್ವರ (03:45/03:47am), ಹೊನ್ನಾವರ (04:13/04:15am), ಕುಮಟಾ (04:28/04:30am), ಗೋಕರ್ಣ ರೋಡ್ (04:45/04:47am), ಕಾರವಾರ (05:35/05:40am), ಬಲ್ಲಿ (06:10/ 06:12am), ಮಡಗಾಂವ್ (07:30/07:45am), ಸ್ಯಾನ್ವೊರ್ಡೆಮ್ (08:23/08:25am), ಕುಲೆಮ್ (09:00/09:10am), ಕ್ಯಾಸಲ್ ರಾಕ್ (10:20/10:25am), ಲೋಂಡಾ (10:58/11:00am), ಅಳ್ನಾವರ (11:48/11:50am) ಮತ್ತು ಧಾರವಾಡ (12:38/12:40pm) ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

ಈ ರೈಲು ಎಸಿ 3 ಟೈರ್ 1, ಸ್ಲೀಪರ್ ಕ್ಲಾಸ್ 6, ಜನರಲ್ ಸೆಕೆಂಡ್ ಕ್ಲಾಸ್ 5 ಮತ್ತು ಎಸ್ಎಲ್ಆರ್ ಡಿ 2 ಸೇರಿದಂತೆ 14 ಬೋಗಿಗಳನ್ನು ಒಳಗೊಂಡಿರುತ್ತದೆ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ: ಭೂಕುಸಿತ ಹಿನ್ನೆಲೆ ಮೈಸೂರು ವಿಭಾಗದ ಹಲವು ರೈಲು ರದ್ದು - Trains Cancel Due To Landslide

ETV Bharat Logo

Copyright © 2024 Ushodaya Enterprises Pvt. Ltd., All Rights Reserved.