ETV Bharat / state

ವಾಸ್ಕೋ-ಡ-ಗಾಮಾ - ವೆಲಂಕಣಿ ನಡುವೆ ವಿಶೇಷ ರೈಲು - Special train - SPECIAL TRAIN

ವಾಸ್ಕೋ-ಡ-ಗಾಮಾ ಮತ್ತು ತಮಿಳುನಾಡಿನ ವೆಲಂಕಣಿ ನಿಲ್ದಾಣಗಳ ನಡುವೆ ವಿಶೇಷ ರೈಲು ಓಡಿಸಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ.

train
ವಾಸ್ಕೋ-ಡ-ಗಾಮಾ - ವೆಲಂಕಣಿ ನಡುವೆ ವಿಶೇಷ ರೈಲು (ETV Bharat)
author img

By ETV Bharat Karnataka Team

Published : Aug 8, 2024, 11:01 PM IST

ಹುಬ್ಬಳ್ಳಿ : ಪ್ರಯಾಣಿಕರ ಅನುಕೂಲಕ್ಕಾಗಿ ತಮಿಳುನಾಡಿನ ವೆಲಂಕಣಿಯಲ್ಲಿ ನಡೆಯಲಿರುವ ಹಬ್ಬದ ಪ್ರಯುಕ್ತ ಮತ್ತು ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ವಾಸ್ಕೋ-ಡ-ಗಾಮಾ ಮತ್ತು ತಮಿಳುನಾಡಿನ ವೆಲಂಕಣಿ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ.

ರೈಲು ಸಂಖ್ಯೆ 07361/07362 ವಾಸ್ಕೋ-ಡ-ಗಾಮಾ ಮತ್ತು ವೆಲಂಕಣಿ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಎರಡು ದಿಕ್ಕಿನಲ್ಲಿ ಒಟ್ಟು 3 ಟ್ರಿಪ್‌ ಓಡಿಸಲಾಗುತ್ತಿದೆ.

ರೈಲು ಸಂಖ್ಯೆ 07361 ಆಗಸ್ಟ್ 27 ಮತ್ತು ಸೆಪ್ಟೆಂಬರ್ 2 & 6 ರಂದು ವಾಸ್ಕೋ-ಡ-ಗಾಮಾ ನಿಲ್ದಾಣದಿಂದ ರಾತ್ರಿ 09:55 ಗಂಟೆಗೆ ಹೊರಟು, ಮೂರನೇ ದಿನ ಮಧ್ಯರಾತ್ರಿ 01:30 ಗಂಟೆಗೆ ವೆಲಂಕಣಿ ನಿಲ್ದಾಣವನ್ನು ತಲುಪಲಿದೆ.

ಅದೇ ರೀತಿ ರೈಲು ಸಂಖ್ಯೆ 07362 ಆಗಸ್ಟ್ 29, ಸೆಪ್ಟೆಂಬರ್‌ 4 ಮತ್ತು 8 ರಂದು ರಾತ್ರಿ 11:55 ಗಂಟೆಗೆ ವೆಲಂಕಣಿ ನಿಲ್ದಾಣದಿಂದ ಹೊರಟು, ಮೂರನೇ ದಿನ ಮಧ್ಯರಾತ್ರಿ 12:15 ಗಂಟೆಗೆ ವಾಸ್ಕೋ-ಡ-ಗಾಮಾ ನಿಲ್ದಾಣಕ್ಕೆ ಆಗಮಿಸಲಿದೆ.

ಈ ರೈಲು ಎರಡು ಮಾರ್ಗದಲ್ಲಿ ಮಡಗಾಂವ್, ಸ್ಯಾನ್ವೋರ್ಡಮ್‌, ಕುಲೆಂ, ಕ್ಯಾಸಲ್ ರಾಕ್, ಲೋಂಡಾ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಎಸ್ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತುಮಕೂರು, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು, ಕೃಷ್ಣರಾಜಪುರಂ, ವೈಟ್‌ಫೀಲ್ಡ್, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ತಂಜಾವೂರು, ತಿರುವರೂರ್ ಮತ್ತು ನಾಗಪಟ್ಟಣಂ ಈ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಈ ವಿಶೇಷ ರೈಲುಗಳು ಎರಡು ಎಸಿ ಟು ಟೈಯರ್, ನಾಲ್ಕು ಎಸಿ ತ್ರಿ ಟೈಯರ್, ಹತ್ತು ಸ್ಲೀಪರ್ ಕ್ಲಾಸ್, ಎರಡು ಸಾಮಾನ್ಯ ದ್ವಿತೀಯ ದರ್ಜೆ ಮತ್ತು ಎರಡು ಎಸ್ಎಲ್ಆರ್/ಡಿ ಸೇರಿದಂತೆ ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತದೆ.

ಮುಂಗಡ ಬುಕಿಂಗ್ ಮತ್ತು ಇತರ ಮಾಹಿತಿಗಾಗಿ, ಪ್ರಯಾಣಿಕರು www.enquiry.indianrail.gov.in ವೆಬ್​ಸೈಟ್​ಗೆ ಭೇಟಿ ನೀಡಿ ಅಥವಾ 139ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಪ್ರಯಾಣಿಕರು ಈ ವಿಶೇಷ ರೈಲು ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

ಇದನ್ನೂ ಓದಿ : ಆಗಸ್ಟ್ ರಜಾ ದಿನಗಳಲ್ಲಿ ನೈರುತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ: ವೇಳಾಪಟ್ಟಿ ಇಂತಿದೆ - Special Train Services

ETV Bharat Logo

Copyright © 2024 Ushodaya Enterprises Pvt. Ltd., All Rights Reserved.