ETV Bharat / state

ಕನ್ನಡ ಅಸ್ಮಿತೆಯ ಬೀಜ ಬಿತ್ತಿದ್ದ ಕದಂಬ ದೊರೆ ಮಯೂರ ವರ್ಮ: ತಾಳಗುಂದದಲ್ಲಿದೆ ಹಲ್ಮಿಡಿಗಿಂತಲೂ ಹಳೆಯ ಶಾಸನ! - KADAMBA KING MAYURA VARMA

ಕನ್ನಡವನ್ನು ತನ್ನ ಆಡಳಿತ ಭಾಷೆಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದ ಕರ್ನಾಟಕದ ಮೊದಲ ರಾಜ ಮಯೂರ ವರ್ಮ ಹಾಗೂ ತಾಳಗುಂದ ಶಾಸನದ ಬಗೆ ಈಟಿವಿ ಭಾರತ ಪ್ರತಿನಿಧಿ ಕಿರಣ್​ ಕುಮಾರ್​ ನೀಡಿದ ವಿಶೇಷ ವರದಿ ಇಲ್ಲಿದೆ.

Etv Bharat
Etv Bharat (Etv Bharat)
author img

By ETV Bharat Karnataka Team

Published : Nov 1, 2024, 6:42 PM IST

Updated : Nov 1, 2024, 11:07 PM IST

ಶಿವಮೊಗ್ಗ: ಬನವಾಸಿ ಕದಂಬರು ಕರ್ನಾಟಕದ ಮೊದಲ ರಾಜ ಮನೆತನವಾಗಿದೆ. ಈ ರಾಜ ಮನೆತನದ ಮೊದಲ ರಾಜ ಮಯೂರ ವರ್ಮ ಕನ್ನಡವನ್ನು ತನ್ನ ಆಡಳಿತ ಭಾಷೆಯನ್ನಾಗಿ ಮಾಡಿಕೊಂಡು ಕನ್ನಡ ಅಸ್ಮಿತೆಯ ಬೀಜವನ್ನು ಬಿತ್ತಿದ್ದರು.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತಾಳಗುಂದದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಮಯೂರ ಶರ್ಮ ಜನಿಸಿ, ಇಲ್ಲೇ ವಿದ್ಯಾಭ್ಯಾಸ ನಡೆಸಿ ಬಳಿಕ ಹೆಚ್ಚಿನ ಶಿಕ್ಷಣ ಪಡೆಯುವ ಹಂಬಲದಿಂದ ತನ್ನ ತಾತನ ಜೊತೆ ತಮಿಳುನಾಡಿನ ಕಂಚಿಗೆ ತೆರಳಿದ್ದರು. ಕೆಲ ವರ್ಷಗಳ ಬಳಿ ಮಯೂರ ಶರ್ಮ ವಿದ್ಯಾಪಾರಂಗತರಾಗುತ್ತಾರೆ. ಅಶ್ವವನ್ನು ಯಜ್ಞ ಕುಂಡದ ಬಳಿ ಬಲಿಕೊಡುವುದನ್ನು ಮಯೂರ ಶರ್ಮ ವಿರೋಧಿಸುತ್ತಾರೆ. ಇದರಿಂದ ಪಲ್ಲವ ಕ್ಷತ್ರಿಯರು ಮಯೂರ ಶರ್ಮನನ್ನು ಕಟುವಾದ ಮಾತುಗಳಿಂದ ನಿಂದಿಸುತ್ತಾರೆ.

ಮಯೂರ ವರ್ಮ, ತಾಳಗುಂದ ಶಾಸನದ ಕುರಿತ ವಿಶೇಷ ವರದಿ (ETV Bharat)

ಶರ್ಮನಿಂದ ವರ್ಮನಾಗಿದ್ದು ಹೇಗೆ?: ಈ ಅವಮಾನದಿಂದ ಆಕ್ರೋಶಗೊಂಡ ಮಯೂರ ಶರ್ಮನಲ್ಲಿ ಪಲ್ಲವರ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂಬ ದೃಢಸಂಕಲ್ಪ ತೀವ್ರಗೊಂಡಿತು. ತಾನೂ ಕ್ಷತ್ರಿಯನಾಗಿ ಸೈನ್ಯವನ್ನು ಕಟ್ಟಿ, ಪಲ್ಲವರನ್ನು ಸೋಲಿಸಬೇಕೆಂದು ನಿಶ್ಚಯಿಸಿ ಮೈಮೇಲೆ ಇದ್ದ ಜನಿವಾರವನ್ನು ತೆಗೆದುಹಾಕಿ ಕೈಯಲ್ಲಿ ಖಡ್ಗವನ್ನು ಹಿಡಿಯುತ್ತಾರೆ. ಈ ಮೂಲಕ ಬ್ರಾಹ್ಮಣನಾಗಿದ್ದ ಮಯೂರ ಕ್ಷತ್ರಿಯರಾಗುತ್ತಾರೆ. ಬನವಾಸಿಗೆ ಹೋಗಿ 'ಕದಂಬ ವಂಶ' ಸ್ಥಾಪಿಸಿ 'ಮಯೂರ ಶರ್ಮ' ಎಂದಿದ್ದ ಹೆಸರು 'ಮಯೂರ ವರ್ಮ' ಎಂದಾಗುತ್ತದೆ ಎಂದು ಇತಿಹಾಸ ಹೇಳುತ್ತದೆ.

ಸ್ತಂಭ ಶಾಸನ
ಸ್ತಂಭ ಶಾಸನ (ETV Bharat)

ತಾಳಗುಂದ ಶಾಸನ ಹಲ್ಮಿಡಿಗಿಂತಲೂ ಪ್ರಾಚೀನ ಶಾಸನ: ತಾಳಗುಂದ ಒಂದು ಕಾಲದಲ್ಲಿ ಕದಂಬರ ಪ್ರಮುಖ ಕೇಂದ್ರವಾಗಿತ್ತು. ತಾಳಗುಂದದ ಸ್ತಂಭ ಶಾಸನ ಕನ್ನಡ ನಾಡನ್ನು ಆಳಿದ ಪ್ರಥಮ ಕನ್ನಡಿಗ ಅರಸನ ಬಗ್ಗೆ ಮಾಹಿತಿ ನೀಡುತ್ತದೆ. ತಾಳಗುಂದದ ಪ್ರಣವಲಿಂಗೇಶ್ವರ ದೇವಸ್ಥಾನದಲ್ಲಿ ಭಾರತೀಯ ಪುರತಾತ್ವ ಇಲಾಖೆ 2012ರಲ್ಲಿ‌ ಉತ್ಖನನದಿಂದ ಪತ್ತೆಯಾದ ಶಾಸನ, ಕ್ರಿ.ಶ 450 ರಲ್ಲಿ ರಚನೆಯಾದ ಹಲ್ಮಿಡಿ ಶಾಸನಕ್ಕಿಂತಲೂ ಕನ್ನಡದ ಅತ್ಯಂತ ಪ್ರಾಚೀನ ಶಾಸನ ಎಂದು ತಿಳಿದಿ ಬಂದಿದೆ.

ಈ ಕುರಿತು ಸ್ಥಳೀಯರಾದ ನವೀನ್ ಈಟಿವಿ ಭಾರತ ಜೊತೆ ಮಾತನಾಡಿ, "ಕನ್ನಡ ಮೊದಲ ಅರಸ ಮಯೂರ ವರ್ಮ ಜನಿಸಿದ್ದು ತಾಳಗುಂದದಲ್ಲಿ. ಮಯೂರ ವರ್ಮ ತನ್ನ ಪ್ರಾಥಮಿಕ‌ ಶಿಕ್ಷಣ ಮುಗಿಸಿದ್ದು ತಾಳಗುಂದದಲ್ಲಿ. 2012ರಲ್ಲಿ ಭಾರತೀಯ ಪುರತಾತ್ವ ಇಲಾಖೆ ನಡೆಸಿದ ಉತ್ಖನನದಲ್ಲಿ ಹಲ್ಮಿಡಿ ಶಾಸನಕ್ಕಿಂತ ಪುರಾತನ ಶಾಸನ ಲಭ್ಯವಾಗಿದೆ" ಎಂದು ತಿಳಿಸಿದರು.

ಪ್ರಣವಲಿಂಗೇಶ್ವರ ದೇವಸ್ಥಾನ
ಪ್ರಣವಲಿಂಗೇಶ್ವರ ದೇವಸ್ಥಾನ (ETV Bharat)

"ತಾಳಗುಂದದಲ್ಲಿ ದೂರೆತ ಶಾಸನವನ್ನು ಹಲ್ಮಿಡಿ ಶಾಸನಕ್ಕಿಂತ ಪುರಾತನ ಶಾಸನ ಎಂದು ಸರ್ಕಾರ ಘೋಷಣೆ ಮಾಡಬೇಕಿದೆ. ತಾಳಗುಂದದಲ್ಲಿ ಮಯೂರ ವರ್ಮನ ಇತಿಹಾಸದ ಬಗ್ಗೆ ಬೆಳಕು ಚಲ್ಲುವ ಕಲ್ಲಿನ ಕಂಬ ಶಾಸನ ಇದೆ. ಈ ಶಾಸನದ ಆಧಾರದಲ್ಲಿಯೇ ದೇವುಡು ನರಸಿಂಹ ಶಾಸ್ತ್ರಿಗಳು ಐತಿಹಾಸಿಕ ‘ಮಯೂರ’ ಕಾದಂಬರಿಯನ್ನು 1950ರಲ್ಲಿ ಬರೆದು ಪ್ರಕಟಿಸಿದ್ದರು" ಎಂದ ಹೇಳಿದರು.

"ಈ ಕಾದಂಬರಿಯು ಡಾ.ರಾಜ್‌ಕುಮಾರ್ ಅವರಿಗೆ ಚೆನ್ನೈನ ಹಳೆ ಪುಸ್ತಕದ ಅಂಗಡಿಯಲ್ಲಿ ಲಭಿಸುತ್ತದೆ. ‘ಮಯೂರ’ ಕಾದಂಬರಿ ಓದಿ ಪುಳಕಿತರಾದ ಡಾ.ರಾಜ್‌ಕುಮಾರ್ ಬಳಿಕ ಸಿನಿಮಾ ಮಾಡುತ್ತಾರೆ. ತಾಳಗುಂದದ ಪ್ರಣವಲಿಂಗೇಶ್ವರ ದೇವಾಲಯಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದೆ. ಕರ್ನಾಟಕವನ್ನು ಆಳಿದ ಎಲ್ಲಾ ಅರಸು ಬಂದು ಪ್ರಣವಲಿಂಗೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ" ಎಂದು ಮಾಹಿತಿ ನೀಡಿದರು.

ಪ್ರಾದೇಶಿಕ‌ ಸಂಶೋಧಕರಾದ ರಮೇಶ್ ಬಿ ಹಿರೇಜಂಬೂರು ಮಾತನಾಡಿ, "ಇಲ್ಲಿ ಲಿಪಿಯ ಬದಲಾವಣೆಗಳನ್ನು ಗಮನಿಸಬಹುದು. ಬ್ರಾಹ್ಮಿ‌ಲಿಪಿ ಕನ್ನಡವಾಗಿ ಬದಲಾವಣೆ ಆಗುವುದು ಇಲ್ಲಿನ ಶಾಸನಗಳಲ್ಲಿ ಕಂಡು ಬರುತ್ತದೆ. ಅಲ್ಲದೆ ಕನ್ನಡದ ಸಂಸ್ಕೃತಿ ಪ್ರಾರಂಭದಲ್ಲಿ ಉಂಟಾದ ಯಜ್ಞ, ತರ್ಕಗಳು ಕಂಡು ಬರುತ್ತದೆ. ವಿಚಾರ ವಿನಿಮಯಗಳು ಅಧ್ಯಯನಗಳು ನಡೆದಿರುವ ನೆಲ ಇದು‌" ಎಂದರು.

"ಮಯೂರ ವರ್ಮ ತಾಳಗುಂದದಲ್ಲೇ ಶಿಕ್ಷಣ ಪಡೆದಿದ್ದರು. ಇಲ್ಲಿ ಕನ್ನಡ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಶಿಕ್ಷಣ ನೀಡಲಾಗುತ್ತಿತ್ತು. ಈ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇತ್ತು. ಇಲ್ಲಿ ಇನ್ನಷ್ಟು ಉತ್ಖನನದ ಅವಶ್ಯಕತೆ ಇದೆ" ಎಂದು ಹೇಳಿದರು.

ಇದನ್ನೂ ಓದಿ: ಮೈಸೂರು ಅರಮನೆ ಆವರಣದಲ್ಲಿದೆ ಭುವನೇಶ್ವರಿ ದೇವಾಲಯ: ಇಲ್ಲಿ ಕನ್ನಡಾಂಬೆಗೆ ನಿತ್ಯ ಪೂಜೆ

Last Updated : Nov 1, 2024, 11:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.