ETV Bharat / state

ಚಾಮರಾಜನಗರದಲ್ಲಿ ರಾಮನ ಅವತಾರದ ಗಣಪತಿ ಪ್ರತಿಷ್ಠಾಪನೆ: ಮೊದಲ ಪೂಜೆ ಸಲ್ಲಿಸಿದ ಡಿಸಿ, ಎಸ್​ಪಿ​ - special ganesha idol

author img

By ETV Bharat Karnataka Team

Published : Sep 7, 2024, 7:15 PM IST

Updated : Sep 7, 2024, 10:56 PM IST

ಗಡಿಜಿಲ್ಲೆ ಚಾಮರಾಜನಗರದಲ್ಲಿ ಹಿಂದೂಪರ ಸಂಘಟನೆಗಳು ಈ ಬಾರಿ ಅಯೋಧ್ಯೆ ರಾಮನ ಅವತಾರದ ಗಣಪತಿಮೂರ್ತಿಯನ್ನು ಪ್ರತಿಷ್ಠಾಪಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ರಾಮನ ಅವತಾರದ ಗಣಪತಿ ಪ್ರತಿಷ್ಠಾಪನೆ
ರಾಮನ ಅವತಾರದ ಗಣಪತಿ ಪ್ರತಿಷ್ಠಾಪನೆ (ETV Bharat)
ಚಾಮರಾಜನಗರದಲ್ಲಿ ರಾಮನ ಅವತಾರದ ಗಣಪತಿ ಪ್ರತಿಷ್ಠಾಪನೆ (ETV Bharat)

ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರದಲ್ಲಿ ಹಿಂದೂಪರ ಸಂಘಟನೆಗಳು ಈ ಬಾರಿ ಅಯೋಧ್ಯೆ ರಾಮನ ಅವತಾರದ ಗಣಪತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಇದಕ್ಕೂ ಮುನ್ನ ಮಂಗಳವಾದ್ಯದಲ್ಲಿ ಗಣೇಶಮೂರ್ತಿಯನ್ನು ಮೆರವಣಿಗೆಯಲ್ಲಿ ತರಲಾಯಿತು. ಹೆಚ್ಚು ಪೊಲೀಸ್ ಬಂದೋಬಸ್ತ್ ಇರುವುದರಿಂದ ಇದು ಪೊಲೀಸ್ ಗಣಪತಿ ಅಂಥಲೂ, ದೊಡ್ಡ ಗಣಪತಿ, ಆರ್‌ಎಸ್ಎಸ್ ಗಣಪತಿ ಅಂಥಲೂ ಈ ಗಣೇಶ ಜನಪ್ರಿಯತೆ ಗಳಿಸಿದೆ.

ಇನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ‌.ಟಿ‌.ಕವಿತಾ ಪ್ರತಿಷ್ಠಾಪನೆ ವೇಳೆ ಹಾಜರಿದ್ದು, ಪೂಜೆಯಲ್ಲಿ ಪಾಲ್ಗೊಂಡು ಮೊದಲ ಪೂಜೆ ಮಾಡಿ ಗಮನ ಸೆಳೆದರು. ಈ ಬಾರಿಯೂ ಕೂಡ ಹಿಂದೂಪರ ಮುಖಂಡರು 27 ದಿನಗಳ ಕಾಲ ಪೂಜೆ, 7 ದಿನ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಲು ತಯಾರಿ ಮಾಡಿಕೊಂಡಿದ್ದಾರೆ. ಕಳೆದ 62 ವರ್ಷಗಳಿಂದ ವಿಜೃಂಭಣೆಯಿಂದ, ಸೌಹಾರ್ದತೆಯಿಂದ ಗಣೇಶ ಹಬ್ಬ ನಡೆದುಕೊಂಡು ಬಂದಿದ್ದು, ಈ ಬಾರಿಯೂ ಕೂಡ ಅದ್ಧೂರಿಯಾಗಿ ಮತ್ತು ಸೌಹಾರ್ದತೆಯಿಂದ ಕೂಡಿರಲಿ ಎಂದು ಡಿಸಿ ಶಿಲ್ಪಾನಾಗ್ ಹೇಳಿದರು.

ಪ್ರತಿ ವರ್ಷ ವೈವಿಧ್ಯಮಯ ಗಣಪ: ಪ್ರತಿ ವರ್ಷ ಒಂದಲ್ಲಾ ಒಂದು ವೈವಿದ್ಯಮಯ ಗಣಪತಿ ಪ್ರತಿಷ್ಠಾಪನೆಗೆ ಗಡಿಜಿಲ್ಲೆ ಗಣಪತಿ ಹೆಸರುವಾಸಿಯಾಗಿದೆ. ಅದರಂತೆ ಈ ಬಾರಿಯೂ ಸರ್ಕಾರದ ಷರತ್ತುಬದ್ಧ ಅನುಮತಿಯಂತೆ ಕೈಯಲ್ಲಿ ಬಿಲ್ಲು ಹಾಗೂ ತ್ರಿಶೂಲ ಹಿಡಿದ ಅಯೋಧ್ಯೆ ರಾಮನ ಅವತಾರದ ಗಣಪತಿಯನ್ನು ಪ್ರತಿಷ್ಠಾಪಿಸಿದೆ ಶ್ರೀ ವಿದ್ಯಾಗಣಪತಿ ಮಂಡಳಿ.

ಕಳೆದ 62 ವರ್ಷಗಳಿಂದ ವಿಜೃಂಭಣೆಯಿಂದ ಗಣಪತಿ ಪ್ರತಿಷ್ಠಾಪಿಸಿ ಒಂದು ತಿಂಗಳ ಕಾಲ ಗಣೇಶೋತ್ಸವ ಆಚರಿಸುತ್ತಿದ್ದ ವಿದ್ಯಾಗಣಪತಿ ಮಂಡಳಿ ಈ ವರ್ಷ ಸರ್ಕಾರದ ಮಾರ್ಗಸೂಚಿ ಆಚರಣೆಗೆ ಮುಂದಾಗಿದೆ. ಗಣಪತಿಯನ್ನು ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ: ಅದ್ಧೂರಿ ಮೆರವಣಿಗೆಯೊಂದಿಗೆ ಈದ್ಗಾ ಮೈದಾನಕ್ಕೆ ಬಂದ ಶ್ರೀರಾಮನ ಅವತಾರದ ಗಣಪತಿ - idgah maidan ganesha

Last Updated : Sep 7, 2024, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.