ETV Bharat / state

ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಯವರ ಜೀವನ ಚರಿತ್ರೆ ಹೇಳುವ 'ಸ್ಮೃತಿವನ' - Siddaganga Smritivana

author img

By ETV Bharat Karnataka Team

Published : Jul 1, 2024, 10:23 AM IST

Updated : Jul 1, 2024, 2:02 PM IST

ಸಿದ್ದಗಂಗಾ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯ ಜೀವನ ಚರಿತ್ರೆ ಸಾರುವ ಕಲಾಕೃತಿಗಳನ್ನು ಒಳಗೊಂಡ 'ಸ್ಮೃತಿವನ' ಅನಾವರಣಗೊಳಿಸಲಾಗಿದೆ.

ಸಿದ್ದಗಂಗಾ ಮಠದ  ಸ್ಮೃತಿವನ
ಸಿದ್ದಗಂಗಾ ಮಠದ ಸ್ಮೃತಿವನ (ETV Bharat)

ಸಿದ್ದಗಂಗಾ ಸ್ಮೃತಿವನ (ETV Bharat)

ತುಮಕೂರು: ಉಚಿತ ಅನ್ನ, ಅಕ್ಷರ, ವಸತಿ ಕಲ್ಪಿಸಿ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ತ್ರಿವಿಧ ದಾಸೋಹದ ಕ್ಷೇತ್ರ ಸಿದ್ದಗಂಗಾ ಮಠದ 'ಸ್ಮೃತಿವನ' ಪ್ರಸ್ತುತ ಪ್ರವಾಸಿಗರು ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿಯ ಭಕ್ತ ಸಮೂಹದ ಕೇಂದ್ರಬಿಂದುವಾಗಿ ಗೋಚರಿಸುತ್ತಿದೆ. ಶತಾಯುಷಿ ಶಿವಕುಮಾರ ಸ್ವಾಮೀಜಿಯ ಆದರ್ಶ ಬದುಕಿನ ಚರಿತ್ರೆಯನ್ನು ಮನಮುಟ್ಟುವಂತೆ ಶಿಲ್ಪಕಲಾ ಕೃತಿಗಳ ಮೂಲಕ ಅನಾವರಣಗೊಳಿಸಲಾಗಿದೆ.

'ಸ್ಮೃತಿವನ'
ಸಿದ್ದಗಂಗಾ ಸ್ಮೃತಿವನ (ETV Bharat)

ಹುಟ್ಟಿನಿಂದ ಹಿಡಿದು ಶ್ರೀಗಳ ಬದುಕಿನ ಅನೇಕ ಮಹತ್ವದ ಸಂಗತಿಗಳನ್ನು ಕಲಾಕೃತಿಗಳಲ್ಲಿ ಕಟ್ಟಿಕೊಡಲಾಗಿದೆ. ಬಾಲ್ಯಾವಸ್ಥೆ, ಪ್ರೌಢಾವಸ್ಥೆ, ದೀಕ್ಷೆ ಪಡೆದ ಕ್ಷಣಗಳು ಹಾಗೂ ಮಠದಲ್ಲಿ ಸ್ವಾಮೀಜಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭಗಳು ಮನೋಜ್ಞವಾಗಿವೆ.

'ಸ್ಮೃತಿವನ'
ಸಿದ್ದಗಂಗಾ ಸ್ಮೃತಿವನ (ETV Bharat)

ಸ್ವಾಮೀಜಿ ತಮ್ಮ ಆರಂಭದ ದಿನಗಳಲ್ಲಿ ಸೌದೆಗಳನ್ನು ಸ್ವತಃ ಒಡೆದು ಮಕ್ಕಳಿಗೆ ಶಿಕ್ಷಣದ ಜೊತೆಗೆ ಕಾಯಕದ ಮಹತ್ವ ಹೇಳುತ್ತಿರುವುದನ್ನು ಕಲಾಕೃತಿಗಳಲ್ಲಿ ಕಾಣಬಹುದು.

ಇದಲ್ಲದೇ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಮಠಕ್ಕೆ ಭೇಟಿ ಕೊಟ್ಟ ಸಂದರ್ಭ, ಸ್ವಾಮೀಜಿಯ ಪೂಜೆ-ಪುನಸ್ಕಾರಗಳು, ಪ್ರಾಣಿಗಳಲ್ಲಿ ತೋರುತ್ತಿದ್ದ ದಯೆ, ಭಕ್ತರು ತಮ್ಮ ಮಕ್ಕಳನ್ನು ಮಠಕ್ಕೆ ಕರೆದುಕೊಂಡು ಬಂದು ಶಿಕ್ಷಣ ಕೊಡಿಸುವ ಸಂದರ್ಭಗಳನ್ನು ಕಲಾಕೃತಿಗಳಲ್ಲಿ ಅತ್ಯಂತ ಸುಂದರವಾಗಿ ಚಿತ್ರಿಸಲಾಗಿದೆ. ಹೀಗಾಗಿ 'ಸ್ಮೃತಿವನ' ಪ್ರಸ್ತುತ ಪ್ರವಾಸಿಗರು ಹಾಗೂ ಮಠದ ಭಕ್ತರ ಕುತೂಹಲದ ಕೇಂದ್ರವಾಗಿ ಪರಿವರ್ತನೆಗೊಂಡಿದೆ.

'ಸ್ಮೃತಿವನ'
ಸಿದ್ದಗಂಗಾ ಸ್ಮೃತಿವನ (ETV Bharat)

ಇದನ್ನೂ ಓದಿ: ಕಾರವಾರ: ಉದ್ಘಾಟನೆಯಾದ ಕೆಲವೇ ಹೊತ್ತಲ್ಲಿ ಮುಚ್ಚಿದ ಯುದ್ಧ ವಿಮಾನ ಮ್ಯೂಸಿಯಂ - Karwara Warplane Museum

Last Updated : Jul 1, 2024, 2:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.