ETV Bharat / state

ಅಪ್ರತಿಮ ಸಾಧನೆ ತೋರಿದ ಮಕ್ಕಳಿಗೆ ಶೌರ್ಯ ಪ್ರಶಸ್ತಿ: ಹೀಗಿವೆ ಚಿಣ್ಣರ ಸಾಹಸಗಾಥೆಗಳು

ಸಂದಿಗ್ಧ ಸಮಯದಲ್ಲಿ ಧೈರ್ಯ, ಸಾಹಸ ಪ್ರದರ್ಶಿಸಿ ಇತರರ ಪ್ರಾಣ ರಕ್ಷಿಸಿದ ಮಕ್ಕಳಿಗೆ ಹೊಯ್ಸಳ, ಕೆಳದಿ ಚೆನ್ನಮ್ಮ ಶೌರ್ಯ ನೀಡಿ ಗೌರವಿಸಲಾಗಿದೆ.

shaurya awards
ಶೌರ್ಯ ಪ್ರಶಸ್ತಿ ಪಡೆದ ಮಕ್ಕಳು (ETV Bharat)
author img

By ETV Bharat Karnataka Team

Published : Nov 29, 2024, 5:47 PM IST

ಬೆಂಗಳೂರು: ಸಂಕಷ್ಟದ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದು ಧೈರ್ಯ ಸಾಹಸ ಪ್ರದರ್ಶಿಸಿ ಇತರರ ಪ್ರಾಣ ಅಪಾಯದಿಂದ ರಕ್ಷಿಸಿದಂತಹ ಮಕ್ಕಳಿಗೆ 2023-24ನೇ ಸಾಲಿನ ಹೊಯ್ಸಳ, ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗಳನ್ನು ಶುಕ್ರವಾರ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಶೌರ್ಯ ಪ್ರಶಸ್ತಿಗಳನ್ನು 8 ಮಕ್ಕಳಿಗೆ ನೀಡಿ ಗೌರವಿಸಲಾಯಿತು.

ನಗರದ ಕಬ್ಬನ್ ಉದ್ಯಾನದಲ್ಲಿರುವ ಜವಾಹರ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜವಾಹರ ಬಾಲಭವನ ಸೊಸೈಟಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. 10 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಕೊಡಮಾಡಲಾಯಿತು. ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿ ಹಾಗೂ ಜವಾಹರ ಬಾಲಭವನ ಕಲಾಶ್ರೀ ಪ್ರಶಸ್ತಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿದರು.

shaurya awards
ಶೌರ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ (ETV Bharat)

ಶೌರ್ಯ ಪ್ರಶಸ್ತಿ ಪಡೆದ ಮಕ್ಕಳ ಸಾಹಸಗಾಥೆಗಳು ಹೀಗಿವೆ:

ಆರ್.ಮಣಿಕಂಠ (ಶಿವಮೊಗ್ಗದ ಹೊಸನಗರ ತಾಲೂಕಿನ ಆನೆಕರ ಬಾಳೂರು): ಮಣಿಕಂಠ 2ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಶಾಲೆಯಲ್ಲಿ ತನ್ನ ಸಹಪಾಠಿಯ ಬ್ಯಾಗ್​ನಲ್ಲಿದ್ದ ಹಾವನ್ನು ಗಮನಿಸಿ ಭಯಭೀತನಾಗದೆ, ಸಮಯಪ್ರಜ್ಞೆಯಿಂದ ಕೂಡಲೇ ಬ್ಯಾಗ್​ನ ಜಿಪ್ ಅನ್ನು ಹಾಕಿ ಆಟದ ಮೈದಾನದಲ್ಲಿ ತಂದು ಇಟ್ಟಿದ್ದ. ಬಾಲಕನ ಜಾಣ್ಮೆ ಮತ್ತು ಧೈರ್ಯದಿಂದ ಇತರ ಮಕ್ಕಳು ಅಪಾಯದಿಂದ ಪಾರಾಗಿದ್ದರು.

ಶೌರ್ಯ ಪ್ರಶಸ್ತಿ ಪಡೆದ ಚಿಣ್ಣರ ಪ್ರತಿಕ್ರಿಯೆ (ETV Bharat)

ಎಲ್.ನಿಶಾಂತ್​​ ಮತ್ತು ಎ.ಎನ್.ಅಶ್ವಿನ್ (ಶಿವಮೊಗ್ಗದ ಸಾಗರ ತಾಲೂಕಿನ ಅರಳಗೋಡು): ಆರೋಡಿ ಗ್ರಾಮದಲ್ಲಿ 55 ಅಡಿ ಆಳದ ತೆರೆದ ಬಾವಿಯಲ್ಲಿ ಬಿದ್ದ ಹಸು ಮತ್ತು ಕರುವನ್ನು ರಕ್ಷಣೆ ಮಾಡಲು ಮನೆಯ ಯಜಮಾನ ಬಾವಿಗೆ ಧುಮಿಕಿದಾಗ ಬಾವಿಯ ಹಗ್ಗ ತುಂಡಾಗಿತ್ತು. ಕರು ಮತ್ತು ವ್ಯಕ್ತಿಯು ಬಾವಿಯಿಂದ ಮೇಲೆ ಬರಲು ಸಾಧ್ಯವಾಗದೇ, ಸಹಾಯಕ್ಕಾಗಿ ಕೂಗುತ್ತಿದ್ದರು. ಆಗ ಪಕ್ಕದಲ್ಲಿ ಆಟವಾಡುತ್ತಿದ್ದ ನಿಶಾಂತ್ ಹಾಗೂ ಅಶ್ವಿನ್ ಇಬ್ಬರೂ ಹಗ್ಗವನ್ನು ನೀಡಿ, ವ್ಯಕ್ತಿಯನ್ನು ಕಾಪಾಡುವುದರ ಜೊತೆಗೆ ಊರಿನ ಗ್ರಾಮಸ್ಥರನ್ನು ಸೇರಿಸಿ, ಕರುವಿನ ಪ್ರಾಣವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದರು. ಬಾಲಕರ ಸಮಯಪ್ರಜ್ಞೆಗೆ ಶ್ಲಾಘನೀಯವಾಗಿ ಶೌರ್ಯ ಪ್ರಶಸ್ತಿ ನೀಡಲಾಗಿದೆ.

shourya awards
ಶೌರ್ಯ ಪ್ರಶಸ್ತಿ ಪಡೆದ ಎಲ್.ನಿಶಾಂತ್​​ ಮತ್ತು ಎ.ಎನ್.ಅಶ್ವಿನ್ (ETV Bharat)

ಆರ್.ವೈಭವಿ (ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ): ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯಲ್ಲಿ ಸಂಭವಿಸಿದ್ದ ರಿಕ್ಷಾ ಅಪಘಾತದಲ್ಲಿ ಆರ್.ಮಾಧವಿ ತನ್ನ ತಾಯಿಯನ್ನು ರಕ್ಷಿಸಿದ್ದರು. ವಾಹನದ ಅಡಿಯಲ್ಲಿ ಸಿಲುಕಿದ್ದ ತಾಯಿಯನ್ನು ರಿಕ್ಷಾವನ್ನು ಮೇಲೆತ್ತುವ ಮೂಲಕ ರಕ್ಷಣೆ ಮಾಡಿದ್ದಳು. ಈಕೆಯ ಸಮಯಪ್ರಜ್ಞೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಶ್ಲಾಘಿಸಿದ್ದರು. ಇದೀಗ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮಹಮ್ಮದ ಸಮೀರ ಬುಕ್ಕಿಟಗಾರ (ಧಾರವಾಡದ ಕಲಘಟಗಿ ತಾಲೂಕಿನ ಬೆಡತಿಹಳ್ಳ): ಕಲಘಟಗಿ ತಾಲೂಕಿನ ಹನಮಾಪುರ ಗ್ರಾಮದ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಹಮ್ಮದ ಸಮೀರ ಬುಕ್ಕಿಟಗಾರ ತನ್ನ ಅಜ್ಜನ ಜೊತೆ ಮೀನು ಹಿಡಿಯಲು ಹಳ್ಳಕ್ಕೆ ಹೊರಟಿದ್ದ. ಈ ಸಂದರ್ಭದಲ್ಲಿ ಅಜ್ಜನಿಗೆ ವಿದ್ಯುತ್ ತಂತಿ ತಗುಲಿದ್ದರೂ ಗಾಬರಿಯಾಗದೇ ತನ್ನ ಹತ್ತಿರವಿದ್ದ ಕೊಡೆಯ ಹಿಡಿಕೆಯಿಂದ ವಿದ್ಯುತ್ ತಂತಿಯನ್ನು ದೂರ ಸರಿಸಿದ್ದ. ಅಲ್ಲದೆ, ಅವಘಡದಿಂದ ಎಚ್ಚರ ತಪ್ಪಿದ ಅಜ್ಜನಿಗೆ ಪ್ರಥಮ ಚಿಕಿತ್ಸೆ ನೀಡಿ, ಪ್ರಾಣ ರಕ್ಷಣೆ ಮಾಡಿದ್ದ. ಬಾಲಕನ, ಸಮಯಪ್ರಜ್ಞೆ, ಧೈರ್ಯ ಸಾಹಸ ಕಾರ್ಯಕ್ಕೆ ಶ್ಲಾಘನೀಯವಾಗಿ ಶೌರ್ಯ ಪ್ರಶಸ್ತಿ ನೀಡಲಾಗಿದೆ.

shourya awards
ಶೌರ್ಯ ಪ್ರಶಸ್ತಿ ಪಡೆದ ಮಹಮ್ಮದ ಸಮೀರ ಬುಕ್ಕಿಟಗಾರ, ಕುಟುಂಬಸ್ಥರು (ETV Bharat)

ಸ್ಫೂರ್ತಿ ವಿಶ್ವನಾಥ ಸವಾಶೇರಿ (ಬೆಳಗಾವಿ ಜಿಲ್ಲೆಯ ನಡಗಾವಿಯ ವಝಗಲ್ಲಿ): ಬೆಳಗಾವಿಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಸ್ಫೂರ್ತಿ ತಂದೆ-ತಾಯಿಯ ಜೊತೆ ಕಾರಿನಲ್ಲಿ ರಾತ್ರಿ 8.30ರ ಸಮಯದಲ್ಲಿ ಹೋಗುತ್ತಿರುವಾಗ, ಬೆಳಗಾವಿಯ ತಿಳಕವಾಡಿ ರೈಲ್ವೆ ಗೇಟ್ ಹಳಿಯ ಮೇಲೆ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ಓರ್ವ ಅಪರಿಚಿತ ಮಹಿಳೆ ಮತ್ತು ಅವರ ಇಬ್ಬರು ಮಕ್ಕಳನ್ನು ತನ್ನ ಪ್ರಾಣದ ಹಂಗನ್ನು ತೊರೆದು ರಕ್ಷಿಸಿದ್ದಳು.

ಧೀರಜ್ ಐತಾಳ್ (ಉಡುಪಿ ಜಿಲ್ಲೆಯ ಸಾಲಿಗ್ರಾಮದ ಕೆರೆಕಟ್ಟಿ ಮನೆ): ಸಾಲಿಗ್ರಾಮದಲ್ಲಿ 16 ಅಡಿ ಉದ್ಯದ 65 ಕೆ.ಜಿ. ತೂಕದ ಬಾರಿ ಗಾತ್ರದ ಹೆಬ್ಬಾವನ್ನು ಹಿಡಿದು, ಬಾಲಕ ಧೀರಜ್ ಐತಾಳ್ ಸಾರ್ವಜನಿಕರ ಪ್ರಾಣ ರಕ್ಷಣೆ ಮಾಡಿದ್ದ. ಇತರ ಸಂದರ್ಭಗಳಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಕ್ಕ ಸುಮಾರು 70 ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡುವುದರ ಮೂಲಕ ಸಂಭವಿಸಬಹುದಾದ ಅವಘಡಗಳನ್ನು ತಡೆದಿದ್ದ. ಬಾಲಕನ ಸಮಯಪ್ರಜ್ಞೆ, ಧೈರ್ಯ, ಸಾಹಸಕ್ಕೆ ಶ್ಲಾಘಿಸಿ ಶೌರ್ಯ ಪ್ರಶಸ್ತಿ ನೀಡಲಾಗಿದೆ.

shourya awards
ಶೌರ್ಯ ಪ್ರಶಸ್ತಿ ಪಡೆದ ಆರ್.ವೈಭವಿ, ಪೋಷಕರು (ETV Bharat)

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ''ಮಕ್ಕಳಿಗೆ ಪೌಷ್ಟಿಕ ಆಹಾರ, ಶಿಕ್ಷಣ ಒದಗಿಸುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣದ ಗುರಿ ಇದೆ. ಪೌಷ್ಟಿಕ ಆಹಾರ ಕಾರ್ಯಕ್ರಮದಿಂದ ಮಕ್ಕಳು ಹಾಗೂ ಮಹಿಳೆಯರಿಗೆ ಸಹಾಯವಾಗಿದೆ. ಹೆಣ್ಣು ಮಕ್ಕಳ ಕಲ್ಯಾಣಕ್ಕೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ'' ಎಂದರು. ಶಾಸಕ ರಿಜ್ವಾನ್‌ ಆರ್ಶದ್, ಬಿಬಿಎಂಪಿ ಮಾಜಿ ಮೇಯರ್ ಪದ್ಮಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಪೌರ ಕಾರ್ಮಿಕ ಕಲಾವಿದನ ಕೈಚಳಕ: ಕುಂದಾನಗರಿ ಅಂದ ಚೆಂದ ಹೆಚ್ಚಿಸುತ್ತಿರುವ ಬಣ್ಣ ಬಣ್ಣದ ಚಿತ್ರಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.