ETV Bharat / state

ಗದಗ ಅಪಘಾತ: ಮೃತರ ಮನೆಗೆ ಸಚಿವ ಶಿವಾನಂದ ಪಾಟೀಲ ಭೇಟಿ, ವೃದ್ಧ ದಂಪತಿಗೆ ಸಾಂತ್ವನ - Gadag accident - GADAG ACCIDENT

ನಿನ್ನೆ ಗದಗದಲ್ಲಿ ಸಂಭವಿಸಿದ ಭೀಕರ ಅಪಘಾತ ಬೆಚ್ಚಿ ಬೀಳಿಸಿದೆ. ಘಟನೆಯಲ್ಲಿ ಹಾವೇರಿ ಮೂಲದ ನಾಲ್ವರು ಮೃತಪಟ್ಟಿದ್ದರು. ಇಂದು ಮೃತರ ಮನೆಗೆ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ ವೃದ್ಧ ದಂಪತಿಗೆ ಪರಿಹಾರದ ಭರವಸೆ ನೀಡಿದ್ದಾರೆ.

ಮೃತರ ಮನೆಗೆ ಸಚಿವ ಶಿವಾನಂದ ಪಾಟೀಲ ಭೇಟಿ, ವೃದ್ಧ ದಂಪತಿಗೆ ಸಾಂತ್ವಾನ
ಮೃತರ ಮನೆಗೆ ಸಚಿವ ಶಿವಾನಂದ ಪಾಟೀಲ ಭೇಟಿ, ವೃದ್ಧ ದಂಪತಿಗೆ ಸಾಂತ್ವಾನ (ETV Bharat)
author img

By ETV Bharat Karnataka Team

Published : Aug 19, 2024, 12:52 PM IST

ಗದಗ ಅಪಘಾತ: ಮೃತರ ಮನೆಗೆ ಸಚಿವ ಶಿವಾನಂದ ಪಾಟೀಲ ಭೇಟಿ, ವೃದ್ಧ ದಂಪತಿಗೆ ಸಾಂತ್ವನ (ETVV Bharat)

ಹಾವೇರಿ: ನಿನ್ನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ರುದ್ರಪ್ಪ ಅಂಗಡಿ ಮನೆಗೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿದರು.

ಹಾವೇರಿ ನಗರದ ಇಜಾರಿಲಕಮಾಪುರದಲ್ಲಿರುವ ರುದ್ರಪ್ಪ ಅಂಗಡಿ ಮನೆಗೆ ಭೇಟಿ ನೀಡಿದ ಸಚಿವ ಶಿವಾನಂದ ಪಾಟೀಲ್ ರುದ್ರಪ್ಪ ತಂದೆ ತಾಯಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ರುದ್ರಪ್ಪ ಅವರ ತಂದೆ "ನಮಗೆ ವಯಸ್ಸಾಗಿದೆ, ನಾವು ಆರಾಮ ಇದ್ದೇವೆ, ಆರಾಮ ಇರ್ತೇವೆ ಎಂದು ಭಾವುಕರಾದರು. ಮಗ ಸೊಸೆ ಮೊಮ್ಮಕ್ಕಳು ಎಲ್ಲರನ್ನು ಕಳೆದುಕೊಂಡಿದ್ದೇವೆ" ಎಂದು ಕಣ್ಣೀರು ಹಾಕಿದರು.

ಈ ಸಂದರ್ಭದಲ್ಲಿ ರುದ್ರಪ್ಪ ತಂದೆಗೆ ಸಾಂತ್ವನ ಹೇಳಿದ ಸಚಿವ ಶಿವಾನಂದ ಪಾಟೀಲ್​ ಈ ರೀತಿಯ ಘಟನೆ ನಡೆಯಬಾರದಿತ್ತು ನಡೆದಿದೆ. ಸರ್ಕಾರದಿಂದ ಎಲ್ಲ ರೀತಿಯ ಪರಿಹಾರ ಕೊಡಿಸುವ ಭರವಸೆ ನೀಡಿದರು. ಮುಂಜಾನೆ ವಾಹನಗಳನ್ನು ಚಲಾಯಿಸಬಾರದು. ಇವರು ನಸುಕಿನಜಾವ ಪಯಣಿಸಿದ್ದಾರೆ. ಅಪಘಾತಕ್ಕೆ ಕಾರಣ ತಿಳಿದುಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ" ಎಂದು ಸಾಂತ್ವನ ಹೇಳಿದರು.

ಇದನ್ನೂ ಓದಿ: ಗದಗ ಭೀಕರ ಅಪಘಾತ: ಮಗ-ಸೊಸೆ, ಮೊಮ್ಮಕ್ಕಳ ಸಾವು ತಿಳಿಯದೇ ದಾರಿ ಕಾಯುತ್ತಿದ್ದಾರೆ ವೃದ್ಧ ದಂಪತಿ - Gadag accident

ಇದನ್ನೂ ಓದಿ: ಗದಗ; ಕಾರಿನಲ್ಲಿ ದೇವಸ್ಥಾನಕ್ಕೆ ಹೊರಟಿದ್ದ ಕುಟುಂಬಕ್ಕೆ ಬಸ್​ ಡಿಕ್ಕಿ, ಒಂದೇ ಕುಟುಂಬದ ನಾಲ್ವರು ಸಾವು! - 4 people died in an accident

ETV Bharat Logo

Copyright © 2024 Ushodaya Enterprises Pvt. Ltd., All Rights Reserved.