ETV Bharat / state

ಸೇವಾ ನ್ಯೂನತೆ: ಪರಿಹಾರ ನೀಡಲು ಬ್ಯಾಂಕ್​ಗೆ ಗ್ರಾಹಕರ ನ್ಯಾಯಾಲಯ ಆದೇಶ - CONSUMER COURT ORDER

ಎಲ್‌ಐಸಿ ಪಾಲಿಸಿಯ ಇಸಿಎಸ್ ಹಣ ಕಟಾಯಿಸಿ ನೀಡುವಲ್ಲಿ ಸೇವಾ ನ್ಯೂನತೆ ಎಸಗಿದ ಕಾರಣ ಪರಿಹಾರ ನೀಡುವಂತೆ ಬ್ಯಾಂಕ್​ಗೆ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.

District Consumer Dispute Court Shivamogga
ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ETV Bharat)
author img

By ETV Bharat Karnataka Team

Published : 12 hours ago

ಶಿವಮೊಗ್ಗ: ಎಲ್‌ಐಸಿ ಪಾಲಿಸಿಯ ಇಸಿಎಸ್ ಹಣವನ್ನು ಸರಿಯಾದ ಸಮಯಕ್ಕೆ ಕಟಾಯಿಸಿ ನೀಡದ ಬ್ಯಾಂಕ್,​ ಸಂಬಂಧಿತ ಅರ್ಜಿದಾರರಿಗೆ ಒಂದು ಲಕ್ಷ ರೂ. ಪರಿಹಾರ ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಗುರುವಾರ ಆದೇಶಿಸಿತು.

ತೀರ್ಥಹಳ್ಳಿ ನಿವಾಸಿ ಹೆಚ್.ಆರ್.ಶ್ರೀಧರ್ ಎಂಬವರು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ತೀರ್ಥಹಳ್ಳಿ ಶಾಖಾ ವ್ಯವಸ್ಥಾಪಕರು (ಮೊದಲ ಎದುರುದಾರ) ಹಾಗೂ ತೀರ್ಥಹಳ್ಳಿಯ ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕರ (ಎರಡನೇ ಎದುರುದಾರ) ವಿರುದ್ಧ ಸೇವಾ ನ್ಯೂನತೆ ಆರೋಪದ ಮೇಲೆ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸೇವಾ ನ್ಯೂನತೆ ಪರಿಗಣಿಸಿ, ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ.

ದೂರಿನ ವಿವರ: ದೂರುದಾರರು ಎಲ್​ಐಸಿಯ ಜೀವನ್ ಆರೋಗ್ಯ ಪಾಲಿಸಿ ಪಡೆದಿದ್ದು, ಅದರ ಕಂತು 24-11-2012ರಿಂದ 24-01-2044ರ ವರೆಗೆ ಚಾಲ್ತಿಯಲ್ಲಿತ್ತು. ಪಾಲಿಸಿಯ ಮಾಸಿಕ ವಂತಿಕೆಯನ್ನು ಪ್ರತಿ ತಿಂಗಳ 24ರಂದು ದೂರುದಾರರ ಉಳಿತಾಯ ಖಾತೆಯಿಂದ ಇಸಿಎಸ್ ಮೂಲಕ ಕಟಾಯಿಸಿ ಪಾವತಿಸಲು ತೀರ್ಥಹಳ್ಳಿ ಯೂನಿಯನ್ ಬ್ಯಾಂಕ್​ ಒಪ್ಪಿಗೆ ನೀಡಿತ್ತು. ಅದರಂತೆ, ಬ್ಯಾಂಕ್​ನವರು ಪ್ರತಿ ತಿಂಗಳ 24ರಂದು ವಿಮಾ ವಂತಿಕೆಯನ್ನು ಕಟಾಯಿಸಿ ಎಲ್​ಐಸಿಗೆ ಜಮಾ ಮಾಡಬೇಕಾಗಿತ್ತು. ಈ ನಡುವೆ, ದೂರುದಾರರು 2020ರ ಜ.30ರಂದು ಅನಾರೋಗ್ಯದ ನಿಮಿತ್ತ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆದು ವಾಪಸ್ ಆಗಿದ್ದರು. ನಂತರ ಎಲ್​ಐಸಿ ವ್ಯವಸ್ಥಾಪಕರಿಗೆ ವೈದ್ಯಕೀಯ ಚಿಕಿತ್ಸೆ ಪಡೆದ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಚಿಕಿತ್ಸಾ ವೆಚ್ಚವನ್ನು ಪಾವತಿಸಲು ಕೋರಿದ್ದರು. ಆದರೆ, ಬ್ಯಾಂಕ್​ನವರು ಎಲ್​ಐಸಿ ಪಾಲಿಸಿಯ ವಂತಿಕೆ ಜಮಾ ಮಾಡಿಲ್ಲ ಎಂದು ತಮ್ಮ ಅರ್ಜಿಯನ್ನು ವ್ಯವಸ್ಥಾಪಕರು ತಿರಿಸ್ಕರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.

ಈ ಬಗ್ಗೆ ಆಯೋಗವು ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ, ಎರಡೂ ಕಡೆಯ ವಕೀಲರ ವಾದವನ್ನು ಆಲಿಸಿತ್ತು. ಬ್ಯಾಂಕ್​ನವರು ದೂರುದಾರರ ಖಾತೆಯಲ್ಲಿ ಸಂಬಂಧಿಸಿದ ದಿನದಂದು ಹಣವಿದ್ದರೂ ಸಹ ಇಸಿಎಸ್ ಮೂಲಕ ವಿಮಾ ವಂತಿಕೆಯನ್ನು ಕಟಾಯಿಸಿ, ಪಾವತಿಸದೆ ಸೇವಾಲೋಪ ಎಸಗಿದ್ದಾರೆ. ಹೀಗಾಗಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ದ ಪರ‍್ಯಾದನ್ನು ಭಾಗಶಃ ವೆಚ್ಚರಹಿತವಾಗಿ ಪುರಸ್ಕರಿಸಿದೆ.

ಒಂದು ಲಕ್ಷ ರೂ. ಪರಿಹಾರ: ಅಲ್ಲದೆ, ಬ್ಯಾಂಕ್​ನವರು ದೂರುದಾರರಿಗೆ ಒಂದು ಲಕ್ಷ ರೂ. ವೈದ್ಯಕೀಯ ವೆಚ್ಚವನ್ನು ಪರಿಹಾರವಾಗಿ 2024ರ ಫೆ.7ರಿಂದ ಆಗುವ ಶೇ.9ರಷ್ಟು ಬಡ್ಡಿಯನ್ನು ಸೇರಿಸಿ, ಮುಂದಿನ 45 ದಿನಗಳೊಳಗೆ ಪಾವತಿಸಬೇಕು. ತಪ್ಪಿದರೆ, ಶೇ.12ರಷ್ಟು ಬಡ್ಡಿಯನ್ನು ಪರಿಹಾರದ ಮೊತ್ತದ ಜೊತೆ ಪಾವತಿಸಬೇಕಾಗುತ್ತದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಅಲ್ಲದೆ, ಎಲ್‌ಐಸಿ ತೀರ್ಥಹಳ್ಳಿ ಶಾಖಾ ವ್ಯವಸ್ಥಾಪಕರು ಯಾವುದೇ ಸೇವಾ ನ್ಯೂನತೆ ಎಸಗಿಲ್ಲವಾದ್ದರಿಂದ ಅವರ ವಿರುದ್ಧದ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರುಗಳಾದ ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠ ಆದೇಶಿಸಿದೆ.

ಇದನ್ನೂ ಓದಿ: 1,399 ರೂಪಾಯಿಯ ಟ್ರೆಕ್ಕಿಂಗ್ ಪ್ಯಾಂಟ್ ತಲುಪಿಸದ ಡೆಕಥ್ಲಾನ್​ಗೆ ₹35,000 ದಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.