ಶಿವಮೊಗ್ಗ: ಮಟ್ಕಾ ದಂಧೆಗೆ ಬ್ರೇಕ್ ಹಾಕಬೇಕಿದ್ದ ಪೊಲೀಸರೇ ಮಟ್ಕಾ ಬುಕ್ಕಿಗಳಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯ ಎಎಸ್ಐ ರೆಹಮಾನ್ ಎಂಬವರು ಲೋಕಾಯುಕ್ತರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಮಟ್ಕಾ ಬುಕ್ಕಿಗಳಿಂದ ರೆಹಮಾನ್ 1.50 ಲಕ್ಷ ರೂ ಡಿಮ್ಯಾಂಡ್ ಮಾಡಿದ್ದರಂತೆ. ಇಂದು 1 ಲಕ್ಷ ರೂ ನಗದನ್ನು ಪಡೆಯುವಾಗ ಲೋಕಾಯುಕ್ತರು ಬಲೆ ಬೀಸಿದ್ದಾರೆ. ಶಿವಮೊಗ್ಗದ ಆರ್‌ಎಂಎಲ್ ನಗರದ ತಮ್ಮ ಮನೆ ಮುಂದೆಯೇ ಆರೋಪಿ ಹಣ ಪಡೆಯುತ್ತಿದ್ದರು.
ಲೋಕಾಯುಕ್ತ ಎಸ್ಪಿ ವಾಸುದೇವ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಡಿವೈಎಸ್ಪಿ ಉಮೇಶ್ ಈಶ್ವರ್ ನಾಯಕ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.
ಇದನ್ನೂಓದಿ: ಬೆಂಗಳೂರು: ಹೊಯ್ಸಳ, ಪೊಲೀಸ್ ಜೀಪ್ಗಳಿಗೂ ಡ್ಯಾಶ್ ಕ್ಯಾಮರಾ ಅಳವಡಿಕೆ - Dash camera for Hoysala