ETV Bharat / state

2 ಮೇಕೆ ಕೊಟ್ಟು ವಿಧವೆಯ ಬಾಳಿಗೆ ದಾರಿದೀಪವಾದ ಅಪ್ಪು ಫ್ಯಾನ್ಸ್ - PUNEETH RAJKUMAR FANS SOCIAL WORK

ಅಪ್ಪು ಅಭಿಮಾನಿಗಳು ಮಹಿಳೆಗೆ ಸುಮಾರು 20 ಸಾವಿರ ರೂ. ಮೌಲ್ಯದ 2 ಮೇಕೆಗಳನ್ನು ನೀಡಿ, ಅವರ ಬದುಕಿಗೆ ದಾರಿದೀಪವಾಗಿದ್ದಾರೆ.

APPU Fans gave two goats to widow
2 ಮೇಕೆ ನೀಡಿ ಮಹಿಳೆ ಬಾಳಿಗೆ ದಾರಿದೀಪವಾದ ಅಪ್ಪು ಅಭಿಮಾನಿಗಳು (ETV Bharat)
author img

By ETV Bharat Karnataka Team

Published : Oct 29, 2024, 7:34 PM IST

ಶಿವಮೊಗ್ಗ: ಪುನೀತ್​ ರಾಜ್​​ಕುಮಾರ್ ನಮ್ಮನ್ನಗಲಿ ಇಂದಿಗೆ ಮೂರು ವರ್ಷ. ಅವರ ಹೆಸರಿನಲ್ಲಿ ಇಂದಿಗೂ ಪುಣ್ಯಕಾರ್ಯಗಳು ಮುಂದುವರಿದಿವೆ. ಮೂರನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳು ವಿಧವೆಯೊಬ್ಬರಿಗೆ ಸುಮಾರು 20 ಸಾವಿರ ರೂ. ಮೌಲ್ಯದ 2 ಮೇಕೆಗಳನ್ನು ನೀಡಿ, ಅವರ ಸ್ವಾಭಿಮಾನಿ ಬದುಕಿಗೆ ದಾರಿದೀಪವಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಪ್ರಶಾಂತ್ ಹಾಗೂ ಸ್ನೇಹಿತರು ಸೇರಿ ತಾವೇ ಹಣ ಸಂಗ್ರಹಿಸಿ ಎರಡು ಹೆಣ್ಣು ಮೇಕೆಗಳನ್ನು ಅಪ್ಪು ನೆನಪಿಗಾಗಿ ನೀಡಿದ್ದಾರೆ.

ಭದ್ರಾವತಿ ತಾಲೂಕಿನ ಜಂಕ್ಷನ್ ಬಳಿಯ‌ ರಂಗನಾಥಪುರ ಗ್ರಾಮದ ಮಹಿಳೆ ಅನು ಎಂಬವರಿಗೆ ಎರಡು ಮೇಕೆ ಮರಿಗಳನ್ನು ನೀಡಲಾಗಿದೆ. ಮಹಿಳೆಯ ಪತಿ ತೀರಿಕೊಂಡು ಸುಮಾರು 7 ತಿಂಗಳುಗಳಾಗಿದೆ. ಅನು ಅವರಿಗೆ ಎರಡು ಮಕ್ಕಳಿದ್ದು, ಅವರ ಮುಂದಿನ ಜೀವನಕ್ಕೆ ಅನುಕೂಲವಾಗಲೆಂದು ತಿರುಮಲ ಚಾರಿಟೇಬಲ್ ಫೌಡೇಂಷನ್​​ನ ಪ್ರಶಾಂತ್ ಹಾಗೂ ಅವರ ಸ್ನೇಹಿತರ ತಂಡ ತಮ್ಮಲ್ಲಿಯೇ 20 ಸಾವಿರ ರೂ. ಸಂಗ್ರಹಿಸಿ, 2 ಹೆಣ್ಣು ಮೇಕೆಗಳನ್ನು ತಂದುಕೊಟ್ಟಿದ್ದಾರೆ.

ವಿಧವೆಗೆ 2 ಮೇಕೆ ನೀಡಿದ ಅಪ್ಪು ಅಭಿಮಾನಿಗಳು (ETV Bharat)

ಇದನ್ನೂ ಓದಿ: ಹಾವೇರಿಯ ಅಭಿಮಾನಿ ಕಟ್ಟಿದ ಪುನೀತ್​ ದೇಗುಲದಲ್ಲಿ ವಿಶೇಷ ಪೂಜೆ; ಗ್ರಾಮಸ್ಥರಿಂದ ನಮನ

ರಂಗನಾಥಪುರದ ಅನು ಅವರ ಮನೆ ಮುಂದೆಯೇ ಅಪ್ಪು ಅವರ ಫೋಟೋ ಇಟ್ಟು ಪೂಜೆ ಸಲ್ಲಿಸಿ, ನಂತರ ಅನು ಅವರಿಗೆ ಮೇಕೆಯನ್ನು ಹಸ್ತಾಂತರಿಸಿದರು.

ಇದನ್ನೂ ಓದಿ: ಪುನೀತ್ ಪುಣ್ಯಸ್ಮರಣೆ: ಅಭಿಮಾನಿಗಳಿಂದ 10 ಕ್ವಿಂಟಲ್ ಚಿಕನ್ ಬಿರಿಯಾನಿ ವಿತರಣೆ

ಮೇಕೆ ನೀಡಿದ ಕುರಿತು ಪ್ರಶಾಂತ್ 'ಈಟಿವಿ ಭಾರತ್' ಜೊತೆ ದೂರವಾಣಿ ಕರೆಯಲ್ಲಿ ಮಾತನಾಡಿ, "ನಾವು ಕಷ್ಟದಲ್ಲಿಯೇ ಜೀವನ ನಡೆಸುತ್ತಿರುವವರು. ಮೀನು ವ್ಯಾಪಾರ ಮಾಡಿಕೊಂಡಿದ್ದೇನೆ. ಅಪ್ಪು ಅವರಂತೆ ನಾಲ್ಕು ಜನರ ಜೀವನಕ್ಕೆ ಅನುಕೂಲವಾಗುವಂತಹ ಕೆಲಸ ಮಾಡಬೇಕೆಂಬುದು ನಮ್ಮ ಹಂಬಲ. ಇದರಿಂದ ನಮ್ಮ ಸ್ನೇಹಿತರು ಸೇರಿಕೊಂಡು ಎರಡು ಮೇಕೆಯನ್ನು ಕೊಡಿಸಿದ್ದೇವೆ. ಅನು ಅವರ ಗಂಡ ತೀರಿಹೋಗಿ 7 ತಿಂಗಳುಗಳಾಗಿವೆ. ಅನು ಅವರಿಗೆ ಕಣ್ಣು ಸರಿಯಾಗಿ ಕಾಣುವುದಿಲ್ಲ. ಅಲ್ಲದೇ ಕಿವಿಯೂ ಸರಿಯಾಗಿ ಕೇಳಲ್ಲ. ಆಕೆ ಹೊರಗೆ ಹೋಗಿ ದುಡಿಯಲು ಆಗುವುದಿಲ್ಲ. ಹೊರಗೆ ಹೋದರೆ ಅವರನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ನಾವು ಮೇಕೆಯನ್ನು ನೀಡಿದ್ದು, ಅವರು ಸ್ವಾವಲಂಬಿಯಾಗಿ ಬದುಕಲಿ" ಎಂದು ಆಶಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.