ETV Bharat / state

ಬೈ ಎಲೆಕ್ಷನ್‌ ರಿಸಲ್ಟ್‌ಗೆ ಕೌಂಟ್‌ಡೌನ್‌: ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್​?

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಶನಿವಾರ ಮತ ಎಣಿಕೆ ನಡೆಯಲಿದೆ. ಕ್ಷೇತ್ರಕ್ಕೆ ಮುಂದಿನ ಮೂರೂವರೆ ವರ್ಷ ಯಾರು ‘ಶಾಸಕ’ರಾಗಲಿದ್ದಾರೆ ಎಂಬ ಪ್ರಶ್ನೆಗೆ ಮಧ್ಯಾಹ್ನದ ಹೊತ್ತಿಗೆ ಉತ್ತರ ಸಿಗಲಿದೆ.

ಭರತ್​ ಬೊಮ್ಮಾಯಿ, ಯಾಸೀರ್ ಖಾನ್ ಪಠಾಣ್
ಭರತ್​ ಬೊಮ್ಮಾಯಿ, ಯಾಸೀರ್ ಖಾನ್ ಪಠಾಣ್ (ETV Bharat)
author img

By ETV Bharat Karnataka Team

Published : Nov 22, 2024, 9:33 PM IST

ಹಾವೇರಿ: ಶಿಗ್ಗಾಂವಿ-ಸವಣೂರು ಕ್ಷೇತ್ರಕ್ಕೆ ನ.13 ರಂದು ಉಪಚುನಾವಣೆ ನಡೆದಿದ್ದು, ನಾಳೆ ಫಲಿತಾಂಶ ಬರಲಿದೆ. ಈ ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಿಎಂದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ನಡುವೆ ನೇರ ಹಣಾಹಣಿ ಇದೆ.

ಅರೆಮಲೆನಾಡು ತಾಲೂಕುಗಳಾದ ಶಿಗ್ಗಾಂವಿ - ಸವಣೂರು ದಾಸಶ್ರೇಷ್ಠರಾದ ಕನಕದಾಸ ಮತ್ತು ದಾರ್ಶನಿಕ ಶಿಶುನಾಳ ಷರೀಫರು ಜನ್ಮವೆತ್ತಿದ ಭೂಮಿ. ರಾಜಕೀಯ ಮುತ್ಸದ್ಧಿ- ಮಾಜಿ ಸಿಎಂ ಎಸ್​. ನಿಜಲಿಂಗಪ್ಪ ಮತ್ತು ಮಾಜಿ ಸಿಎಂ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿಗೆ ರಾಜಕೀಯ ಮರುಹುಟ್ಟು ಕೊಟ್ಟ ಕ್ಷೇತ್ರವಾಗಿದೆ.

ಹಿಂದಿನ ಚುನಾವಣೆಗಳ ಇತಿಹಾಸ:

ವರ್ಷಗೆದ್ದ ಅಭ್ಯರ್ಥಿಪಕ್ಷ
1952 ಹುರಳಿಕೊಪ್ಪಲ್ ಮಲ್ಲಪ್ಪ ಬಸಪ್ಪಕಾಂಗ್ರೆಸ್
1957ರುದ್ರನಗೌಡ ಪಾಟೀಲ್ ಕಾಂಗ್ರೆಸ್
1962ಫಕೀರಪ್ಪ ಸಿದ್ದಪ್ಪ ತಾವರೆ ಕಾಂಗ್ರೆಸ್
1967 ಎಸ್. ನಿಜಲಿಂಗಪ್ಪ ಕಾಂಗ್ರೆಸ್
1972 ಎನ್.ಎನ್. ಮರ್ದನ್ ಸಾಬ್ ಕಾಂಗ್ರೆಸ್
1978ನದಾಫ ಮೊಹ್ಮದ್​ ಕಾಶಿಮ್ ಸಾಬ್ ಕಾಂಗ್ರೆಸ್
1983 ನದಾಫ ಮೊಹ್ಮದ್​ ಕಾಶಿಮ್ ಸಾಬ್ ಕಾಂಗ್ರೆಸ್​
1985 ನೀಲಕಂಠಗೌಡ ಪಾಟೀಲ್ ಪಕ್ಷೇತರ
1989 ಕುನ್ನೂರು ಮಂಜುನಾಥ ಕಾಂಗ್ರೆಸ್
1994ಕುನ್ನೂರು ಮಂಜುನಾಥ ಕಾಂಗ್ರೆಸ್
1999 ಅಜ್ಜಂಪೀರ್ ಖಾದ್ರಿ ಜೆಡಿಎಸ್
2004ಸಿಂಧೂರ ರಾಜಶೇಖರ ಪಕ್ಷೇತರ
2008, 2013, 2018 ಮತ್ತು 2023 ಬಸವರಾಜ ಬೊಮ್ಮಾಯಿಬಿಜೆಪಿ

ಶಿಗ್ಗಾಂವಿ ವಿಧಾನಸಭೆ ಕ್ಷೇತ್ರ:

ಒಟ್ಟು ಮತದಾರರ ಸಂಖ್ಯೆ2,37,525
ಪುರುಷರು1,21,443
ಮಹಿಳೆಯರು1,16,076
ಇತರೆ06
ಜಾತಿವಾರು ಅಂದಾಜು ಲೆಕ್ಕಾಚಾರ
ಜಾತಿವಾರು ಅಂದಾಜು ಲೆಕ್ಕಾಚಾರ (ETV Bharat)

2024ರ ಉಪಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು: ಬಿಜೆಪಿ ಅಭ್ಯರ್ಥಿಯಾಗಿ ಭರತ್​ ಬೊಮ್ಮಾಯಿ, ಕಾಂಗ್ರೆಸ್​ ಅಭ್ಯರ್ಥಿಯಾಗಿ ಯಾಸೀರ್ ಖಾನ್ ಪಠಾಣ್, ಸೋಷಿಯಲಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಖಾಜಾಮೈನುದ್ದೀನ ಗುಡಗೇರಿ, ಕೆಆರ್​ಎಸ್ ಪಕ್ಷದ ಅಭ್ಯರ್ಥಿಯಾಗಿ ರವಿ ಕೃಷ್ಣಾರೆಡ್ಡಿ, ಪಕ್ಷೇತರ ಅಭ್ಯರ್ಥಿಗಳಾಗಿ ಡಾ.ಜಿ.ಹೆಚ್. ಇಮ್ರಾಪೂರ, ಶಿದ್ದಪ್ಪ ಹೊಸಳ್ಳಿ, ಎಸ್.ಎಸ್.ಪಾಟೀಲ್ ಮತ್ತು ಸಾತಪ್ಪ ನೀಲಪ್ಪ ದೇಸಾಯಿ ಅವರು ಚುನಾವಣಾ ಕಣದಲ್ಲಿದ್ದಾರೆ.

ಯಾರಿಗೆ ಗೆಲುವು, ಯಾರಿಗೆ ಸೋಲು: ಶಿಗ್ಗಾಂವಿಯಲ್ಲಿ ಚುನಾವಣಾ ಸನ್ನಿವೇಶ ಸಂಪೂರ್ಣ ಬದಲಾಗಿದೆ. ಆರಂಭದಲ್ಲಿ ಭರತ್ ಪರವಾಗಿ ಏಕಪಕ್ಷೀಯವಾಗಿ ಕಾಣುತ್ತಿದ್ದ ಸ್ಪರ್ಧೆ ಕ್ರಮೇಣ ಟ್ವಿಸ್ಟ್ ಪಡೆಯಿತು. ಈ ಹಿಂದೆ ಕಾಂಗ್ರೆಸ್‌ನ ಮತ್ತೋರ್ವ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್​ ಖಾದ್ರಿ ಅವರಿಗೆ ಟಿಕೆಟ್‌ ನೀಡದಿದ್ದಕ್ಕೆ ಬೇಸರಗೊಂಡಿದ್ದರು. ಆದರೆ ನಂತರ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ನಡೆದಿದ್ದರಿಂದ ಪರಿಸ್ಥಿತಿ ಕಾಂಗ್ರೆಸ್‌ ಪರವಾಗಿ ತಿರುಗಿದೆ ಎಂದು ಹೇಳಲಾಗುತ್ತಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಬೊಮ್ಮಾಯಿ ಅವರಿದ್ದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 8,500 ಮತಗಳ ಮುನ್ನಡೆ ಸಾಧಿಸಿತ್ತು. ಆದರೆ, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ಇದೇ ರೀತಿ ಮುಂದುವರಿದರೆ ಶಿಗ್ಗಾಂವಿಯಲ್ಲಿ ಫೋಟೊ ಫಿನಿಶ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಶನಿವಾರದ ಮತ ಎಣಿಕೆಗೆ ಸಲಕ ಸಿದ್ಧತೆ : ಶನಿವಾರ ಬೆಳಗ್ಗೆ 7:30ಕ್ಕೆ ಸ್ಟ್ರಾಂಗ್ ರೂಂ ಓಪನ್ ಮಾಡಲಾಗುತ್ತದೆ. 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಇವಿಎಂ ಮತಗಳ ಎಣಿಕೆಗಾಗಿ ಒಟ್ಟು 14 ಟೇಬಲ್ ನಿಗದಿ ಮಾಡಲಾಗಿದೆ. ಒಂದು ಟೇಬಲ್​ನಲ್ಲಿ ಅಂಚೆ ಮತ, ಸೇವಾ ಮತದಾರರ ಅಂಚೆ ಮತ ಎಣಿಕೆ ಮಾಡಲಾಗುತ್ತದೆ. ಪ್ರತಿ ಟೇಬಲ್‌ಗೂ ತಲಾ ಒಬ್ಬರು ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕ ಹಾಗೂ ಎಣಿಕೆ ಮೈಕ್ರೋ ಅಬ್ಸರವರ್ ನೇಮಕ ಮಾಡಲಾಗಿದೆ.

ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಾಲ್ವರು ಡಿಎಸ್​​ಪಿ, 9 ಸಿಪಿಐ, 25 ಪಿಎಸ್​​ಐ, 29 ಎಎಸ್​​​ಐ, 250 ಹೆಚ್​​ಸಿ/ಪಿಸಿ ಹಾಗೂ ಎರಡು ಕೆಎಸ್​​ಆರ್​​ಪಿ ತುಕಡಿ, ನಾಲ್ಕು ಡಿಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಮತ ಎಣಿಕೆಗೆ ಆಗಮಿಸುವ ಏಜೆಂಟರುಗಳಿಗಾಗಿ ಗುರುತಿನ ಚೀಟಿ ಕಡ್ಡಾಯ. ಎಣಿಕೆ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಇದನ್ನೂ ಓದಿ: ನಾಳೆ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ: ಯಾರಿಗೆ ಗೆಲುವು, ಯಾರಿಗೆ ಸೋಲು, ಹೀಗಿದೆ ರಾಜಕೀಯ ನಾಯಕರ ಲೆಕ್ಕಾಚಾರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.