ETV Bharat / state

ರಾಯಚೂರು: ಊಟ ಸೇವಿಸಿದ್ದ ಒಂದೇ ಕುಟುಂಬದ 7 ಜನರು ಅಸ್ವಸ್ಥ - PEOPLE FALL ILL AFTER MEAL

ಊಟದ ಬಳಿಕ ಒಂದೇ ಕುಟುಂಬದ 7 ಜನರು ತೀವ್ರ ಅಸ್ವಸ್ಥರಾದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

family fell ill
ಚಿಕಿತ್ಸೆ ಪಡೆಯುತ್ತಿರುವ ಮಹಿಳೆ, ಕುಟುಂಬಸ್ಥರು ಸೇವಿಸಿದ್ದ ಊಟ (ETV Bharat)
author img

By ETV Bharat Karnataka Team

Published : Oct 12, 2024, 7:02 AM IST

ರಾಯಚೂರು: ಊಟದ ನಂತರ ಒಂದೇ ಕುಟುಂಬದ 7 ಜನರು ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಅಮೀನಗಡ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಫುಡ್‌ ಪಾಯಿಸನ್‌ನಿಂದ ಆರೋಗ್ಯ ಏರುಪೇರಾಗಿರುವ ಶಂಕೆ ವ್ಯಕ್ತವಾಗಿದೆ.

ಗ್ರಾಮದ ನಿವಾಸಿಗಳಾದ ಮಾಳಪ್ಪ, ಬಸಲಿಂಗಪ್ಪ, ಗೌರಮ್ಮ, ಲಕ್ಷ್ಮೀ, ಗುರುಬಸಮ್ಮ, ಮಲ್ಲಿಕಾರ್ಜುನ ಸೇರಿ ಒಟ್ಟು 7 ಮಂದಿ ಅಸ್ವಸ್ಥಗೊಂಡಿದ್ದಾರೆ. ಬೆಳಗ್ಗೆ ರೊಟ್ಟಿ, ಬೆಂಡೆಕಾಯಿ ಪಲ್ಯ ಮಾಡಿಕೊಂಡು ಊಟ ಮಾಡಿದ್ದರು. ಹೊಲದಲ್ಲೇ ಕುಳಿತು, ಎಲ್ಲರೂ ಒಟ್ಟಾಗಿ ಊಟ ಸೇವಿಸಿದ್ದರು. ಆದರೆ ಬಳಿಕ ಏಕಾಏಕಿ 7 ಜನರಿಗೆ ತೀವ್ರ ವಾಂತಿ, ಭೇದಿ ಶುರುವಾಗಿದೆ. ಎಲ್ಲರನ್ನೂ ಲಿಂಗಸಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸರಿಯಾಗಿ ಬಟ್ಟೆ ಧರಿಸದಿದ್ದರೆ ಆ್ಯಸಿಡ್ ಎರಚುವ ಸಂದೇಶ ಕಳುಹಿಸಿದ ವ್ಯಕ್ತಿ ಕೆಲಸದಿಂದ ವಜಾ

ಇತ್ತೀಚೆಗೆ, ದೋಷಪೂರಿತ ಆಹಾರ ಸೇವನೆಯಿಂದ 9 ಮಂದಿ ಅಸ್ವಸ್ಥಗೊಂಡ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಪರಾಂಪುರ ತಾಂಡ‌ಬಳಿಯ ಗದ್ದನಗೇರಿ ತಾಂಡದಲ್ಲಿ ನಡೆದಿತ್ತು. ತಾಂಡದಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಈ ವೇಳೆ ಆಹಾರ ಸೇವಿಸಿದವರಲ್ಲಿ 9 ಜನರಿಗೆ ವಾಂತಿ, ಭೇದಿಯಾಗಿತ್ತು. ಅಸ್ವಸ್ಥರನ್ನು ಲಿಂಗಸೂಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.