ETV Bharat / state

ಧಮ್ಕಿ ಸಂಸ್ಕೃತಿಯಿಂದ ಬಂದವರು ಯಾರು?, ಸೆಟ್ಲ್​ಮೆಂಟ್ ಮಾಡುವ ಸಂಸ್ಕೃತಿ ನಮ್ಮದಲ್ಲ: ಹೆಚ್​ಡಿಕೆ - ಸೆಟ್ಲ್​ಮೆಂಟ್ ಸಂಸ್ಕೃತಿ

ಧಮ್ಕಿ ಸಂಸ್ಕೃತಿಯಿಂದ ಬಂದವರು ಯಾರು?, ಸೆಟ್ಲ್​ಮೆಂಟ್​ ಸಂಸ್ಕೃತಿ ನಮ್ಮದಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

Settlement culture  Former CM HD Kumaraswamy  ಸೆಟ್ಲ್​ಮೆಂಟ್ ಸಂಸ್ಕೃತಿ  ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ
ಧಮ್ಕಿ ಸಂಸ್ಕೃತಿಯಿಂದ ಬಂದವರು ಯಾರು?, ಸೆಟ್ಲ್​ಮೆಂಟ್ ಮಾಡುವ ಸಂಸ್ಕೃತಿ ನಮ್ಮದಲ್ಲ: ಹೆಚ್​ಡಿಕೆ
author img

By ETV Bharat Karnataka Team

Published : Feb 20, 2024, 1:54 PM IST

Updated : Feb 20, 2024, 4:51 PM IST

ಹೆಚ್​ಡಿಕೆ ಹೇಳಿಕೆ

ಬೆಂಗಳೂರು: ಧಮ್ಕಿ ಸಂಸ್ಕೃತಿಯಿಂದ ಬಂದವರು ಯಾರು?. ಸೆಟ್ಸ್​ಮೆಂಟ್ ಮಾಡುವ ಸಂಸ್ಕ್ರತಿ ನಮ್ಮದಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಕುಪೇಂದ್ರ ರೆಡ್ಡಿಗೆ ಮತ ಹಾಕುವಂತೆ ಪಕ್ಷೇತರ ಶಾಸಕರಿಗೆ ಧಮ್ಕಿ ಹಾಕಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಸಿಕ್ಕ ಸಿಕ್ಕಿದ ಜಾಗದಲ್ಲಿ ತಂತಿ ಬೇಲಿ ಹಾಕೋರು ಯಾರು?, ನಾವು ಆತ್ಮ ಸಾಕ್ಷಿಯಾಗಿ ಮತ ಕೇಳ್ತೀವಿ ಅಂತ ಹೇಳಿದ್ದೇವೆ. ನಾವು ಕಾಂಗ್ರೆಸ್‌ ಶಾಸಕರ ಜೊತೆ ಮಾತನಾಡಿದ್ರೆ ಅಪರಾಧವೇ ಎಂದು ವಾಗ್ದಾಳಿ ನಡೆಸಿದರು.

ಇವರು ಮೊನ್ನೆ ಬಿಜೆಪಿ ಶಾಸಕರನ್ನು ಕೂರಿಸಿಕೊಂಡು ಮಾತನಾಡಿದ್ದಾರಲ್ವಾ ಅದು ಅಪರಾಧ ಅಲ್ಲವೇ?. ಹಾಗಾದ್ರೆ ನೀವು ಮಾಡ್ತಿರೋದು ಏನು. ಇವರು ಯಾರೋ ಬಿಜೆಪಿ ಶಾಸಕರನ್ನ ಕೂರಿಸಿಕೊಂಡಿದ್ರಲ್ಲ ಅದು ತಪ್ಪಲ್ವಾ.?, ಜೆಡಿಎಸ್‌ ಎರಡು ಮತ ಬರಲಿದೆ ಅಂತ ಹೇಳಿದ್ದಾರೆ ಅದು ತಪ್ಪಲ್ವಾ.?, ಯಾರಿಗೂ ಧಮ್ಕಿ ಹಾಕುವ ಸಂಸ್ಕೃತಿ ಇದೆ ಹೇಳಿ, ಅಂತಹ ಸಂಸ್ಖೃತಿ ನಮ್ಮದಲ್ಲ ಎಂದು ಕಿಡಿ ಕಾರಿದರು.

ರಾಮನಗರ ವಕೀಲರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಮನಗರ ವಿಚಾರ ಸಂಬಂಧಿಸಿದಂತೆ ಈ ಸರ್ಕಾರ ಅಧಿಕಾರಿಗಳನ್ನು ಗುಲಾಮರ ರೀತಿ ಬಳಸಿಕೊಂಡಿದೆ. ಜ್ಞಾನ ವ್ಯಾಪಿ ಶಿವಲಿಂಗ ದೇವಸ್ಥಾನ ಅಂತ ಒಂದು ವರ್ಗ, ಮಸೀದಿ ಅಂತ‌ ಮತ್ತೊಂದು ವರ್ಗ. ಪೂಜೆಗೆ ತೀರ್ಪು ನೀಡಲಾಗಿತ್ತು. ಒಬ್ಬ ವ್ಯಕ್ತಿ ನ್ಯಾಯಾಂಗ ನಿಂದನೆ ದೂರು ನೀಡಿದ್ದರು. ನಾಗರಿಕರು ಈ ಬಗ್ಗೆ ದೂರು ನೀಡಿದ್ರು. ಕಂಪ್ಲೇಂಟ್ ಕೊಟ್ಟ ವಿಚಾರಕ್ಕೆ ರಾಮನಗರ ಹಾಗೂ ಐಜೂರು ಎರಡು ಕಡೆ FIR ಹಾಕಿದ್ರು. FIR ನಲ್ಲಿ ಎಲ್ಲ ರೀತಿಯ ಸೆಕ್ಷನ್ ಕೈ ಬಿಟ್ಟು, ಸ್ಟೇಷನ್ ಬೇಲ್ ಕೊಡಲಾಗಿದೆ. ಮತ್ತೊಂದು ಕಡೆ FIR ನಲ್ಲಿ ಎಲ್ಲಾ ಸೆಕ್ಷನ್ ದಾಖಲಾಗಿದೆ ಎಂದು ಆರೋಪಿಸಿದರು.

ವಕೀಲರನ್ನ ಭೇಟಿ ಮಾಡಬೇಕಾದ್ರೆ ಮ್ಯಾಜಿಸ್ಟ್ರೇಟ್ ಅನುಮತಿ ಪಡೆಯಬೇಕಿತ್ತು. ಆರನೇ ತಾರೀಖು ಮಧ್ಯಾಹ್ನ ಘಟನೆ ನಡೆದಿದೆ. ಪ್ರಗತಿಪರರ ಮೇಲೆ ದಾಳಿ ಮಾಡಿ, ಹಲ್ಲೆ ಮಾಡಿದ್ದಾರೆ. ಘಟನೆ ನಡೆದು ತಲೆ ಒಡೆದಿರೋದು ಆರರಂದು, ಏಳರಂದು ದೂರು ನೀಡಲಾಗಿದೆ. ಪ್ರಗತಿಪರರ ಹೆಸರಲ್ಲಿ ಮಾಹಿತಿ ಇರಲಿಲ್ವಾ?. ಅದೇ ರೀತಿ ಬೋಗಸ್ ಹೆಸರಲ್ಲಿ ಹೋಗಿ ಪ್ರಗತಿಪರರು ಅಂತ ಹಲ್ಲೆ‌ ಮಾಡಿದ್ದಾರೆ. ಹಲ್ಲೆ ಮಾಡಿದವರ ಮೇಲೆ ಕ್ರಮ‌ ಆಗಿಲ್ಲ. ಆದ್ರೆ ಪ್ರತಿಭಟನೆ ಮಾಡಿದವರ ಮೇಲೆ FIR ಆಗಿದೆ. ವಾರದಿಂದ ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದಾರೆ. ಆಗ ಸರ್ಕಾರ ಅವರಿಗೆ ಭರವಸೆ ನೀಡಬಹುದಿತ್ತು. ಇಲ್ಲಿಂದ ಕರೆ ಮಾಡಿ ವಕೀಲರ ಪ್ರತಿಭಟನೆಗೆ ತಲೆ ಕೆಡಿಸಿಕೊಳ್ಳಬೇಡಿ ಅಂತ ಹೇಳಿದ್ದಾರೆ. ಅಧಿಕಾರಿ ವರ್ಗದವರನ್ನು ರಾತ್ರಿವರೆಗೂ ಕೂಡಿಹಾಕಿದ್ದಾರೆ. ಪೊಲೀಸರಿಗೆ ನಿಮ್ಮ ತಪ್ಪನ್ನ ತಿದ್ದುಕೊಳ್ಳಿ ಅಂತಲೂ ಹೇಳಿದ್ದೇನೆ. ನಮಗೆ ಇವರ ದಯಾ ದಾಕ್ಷಿಣ್ಯ ಬೇಡ. ಕಾನೂನಿನ ಹೋರಾಟ ಮಾಡೋದಾಗಿ ಹೇಳಿದ್ದೇನೆ. ಪೊಲೀಸ್ ಇಲಾಖೆ ವೈಫಲ್ಯದಿಂದ ಈ ಘಟನೆ ನಡೆದಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಆನೆಯಿಂದ ಮೃತಪಟ್ಟ ಕೇರಳದ ವ್ಯಕ್ತಿಗೆ 15 ಲಕ್ಷ ರೂ. ಪರಿಹಾರ ವಿಚಾರವಾಗಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ರಾಷ್ಟ್ರೀಯ ನಾಯಕರ ಸಲಹೆ ಮೇರೆಗೆ 15 ಲಕ್ಷ ರೂ. ಕೊಟ್ಟಿದ್ದಾರೆ. ಕೇಂದ್ರದಿಂದ ಪರಿಹಾರವೇ ಬಂದಿಲ್ಲ ಅಂತ ಹೇಳ್ತಾರೆ. ಕನ್ನಡಿಗರಿಗೆ ಅನ್ಯಾಯ ಆಗಿದೆ ಅಂತಾರೆ. ಸಾವಿರ ಸಾರಿ ಸುಳ್ಳು ಹೇಳಿ ನಿಜ ಮಾಡಲು ಹೊರಟಿದ್ದಾರೆ. ರಾಷ್ಟ್ರದ ಹಲವು ಆರ್ಥಿಕ ತಜ್ಞರ ಜೊತೆ ಓಪನ್ ಡಿಬೇಟ್ ಮಾಡೋಣ. ಕೇಂದ್ರದಿಂದ ಅನ್ಯಾಯ ಆಗ್ತಿದೆ ಅಂತ ಹೇಳಿದ್ದೀರಿ. ಅನ್ಯಾಯ ಆಗಿದೆ ಅಂತ ಒಬ್ಬರು ಹೇಳಿದ್ರೆ ಅವರು ಹೇಳಿದ ಹಾಗೆ ಕೇಳೋಕೆ ಸಿದ್ದ. ಅಲ್ಲಿ ಆನೆ ತುಳಿದ್ರೆ 15 ಲಕ್ಷ ಕೊಡ್ತೀರಿ. ಇಲ್ಲಿ ಆನೆ ತುಳಿದ್ರೆ 5 ಲಕ್ಷ‌ ಕೊಡ್ತೀರಿ. ಅದಕ್ಕೂ ಕಚೇರಿಗೆ ಅಲೆಯಬೇಕು. ವೀರಾವೇಷದಿಂದ ಒಳಗೆ ಭಾಷಣ ಮಾಡ್ತಿರಬಹುದು. ಕನ್ನಡಿಗರಿಗೆ ಅನ್ಯಾಯ ಆಯ್ತು ಅಂತಾರೆ. ನಿಮ್ಮ ಸದಸ್ಯರು ಯಾಕೆ ಬೆಂಬಲ ಕೊಡಲಿಲ್ಲ. ತಮಟೆ ಹೊಡೆದು ಪ್ರತಿಭಟನೆ ಮಾಡಿದ್ರಲ್ಲ ಎಂದು ಟೀಕಿಸಿದರು.

ಓದಿ: ಪಿಎಸ್ಐ ಅಮಾನತಿಗೆ ಆಗ್ರಹಿಸಿ ರಾಮನಗರದಲ್ಲಿ ವಕೀಲರ ಅಹೋರಾತ್ರಿ ಧರಣಿ: ಪೊಲೀಸ್​ ಬಿಗಿ ಭದ್ರತೆ

Last Updated : Feb 20, 2024, 4:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.