ETV Bharat / state

ಉಸ್ತುವಾರಿ - ತವರು ಜಿಲ್ಲೆ ಮಾತ್ರವಲ್ಲ, ಸ್ವ-ಕ್ಷೇತ್ರಗಳಲ್ಲೇ ಹಿನ್ನಡೆ: ಸಚಿವರುಗಳಿಗೆ ಹೊಣೆಗಾರಿಕೆ! - Setback for Ministers - SETBACK FOR MINISTERS

ಲೋಕಸಮರದಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಹಿನ್ನಡೆ ಅನುಭವಿಸಿದ ರಾಜ್ಯದ ಹಲವು ಸಚಿವರುಗಳಿಗೆ ಇದೀಗ ಹೊಣೆಗಾರಿಕೆ ಎದುರಾಗಿದೆ. ಈಗಾಗಲೇ ಕಾಂಗ್ರೆಸ್​​ ಹೈಕಮಾಂಡ್ ಸೂಚನೆಯಂತೆ ಸೋಲಿನ ಪರಾಮರ್ಶೆ ನಡೆಸಲಾಗುತ್ತಿದೆ.

setback for congress ministers
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ಸಚಿವರು (Photos: IANS)
author img

By ETV Bharat Karnataka Team

Published : Jun 13, 2024, 8:10 AM IST

Updated : Jun 13, 2024, 9:01 AM IST

ಬೆಂಗಳೂರು: ಕರ್ನಾಟಕ ಲೋಕಸಮರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ಲೋಕಸಭೆ ಚುನಾವಣಾ ಸೋಲಿನ ಪರಾಮರ್ಶೆ ವರದಿಯನ್ನು ಕಾಂಗ್ರೆಸ್ ಸಿದ್ಧಪಡಿಸುತ್ತಿದೆ. ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಗೆಲುವು ನೀಡಲು ವಿಫಲವಾಗಿದ್ದಷ್ಟೇ ಅಲ್ಲ, ಸ್ವ-ಕ್ಷೇತ್ರಗಳಲ್ಲೂ ಕಾಂಗ್ರೆಸ್​​ಗೆ ಮುನ್ನಡೆ ನೀಡದ ಸಚಿವರುಗಳ ಮೇಲೆ ಹೊಣೆಗಾರಿಕೆ ಹೇರಲಾಗುತ್ತಿದೆ.

ಲೋಕಸಭೆ ಚುನಾವಣೆಯು ರಾಜ್ಯದ ಆಡಳಿತಾರೂಢ ಕಾಂಗ್ರೆಸ್​​ಗೆ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಎರಡಂಕಿ ತಲುಪುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್ 9 ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಪಂಚ ಗ್ಯಾರಂಟಿ ಹಾಗೂ ಆಡಳಿತದಲ್ಲಿ ಇದ್ದರೂ ಕಾಂಗ್ರೆಸ್​ಗೆ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಈ ಚುನಾವಣಾ ಫಲಿತಾಂಶಕ್ಕೆ ಹೈಕಮಾಂಡ್ ಗರಂ ಆಗಿದೆ. ಈಗಾಗಲೇ ಅಸಮಾಧಾನ ಹೊರಹಾಕಿರುವ ರಾಹುಲ್ ಗಾಂಧಿ, ಹೊಣೆಗಾರರನ್ನಾಗಿ ಮಾಡುವುದಾಗಿ ಸಚಿವರುಗಳಿಗೆ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾವಾರು ಸೋಲಿನ ಪರಾಮರ್ಶೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.

ಹಲವು ಸಚಿವರುಗಳಿಗೆ ಹೊಣೆಗಾರಿಕೆ ಕುಣಿಕೆ: ಈಗಾಗಲೇ ಹೈಕಮಾಂಡ್ ಸೂಚನೆಯಂತೆ ಸೋಲಿನ ಪರಾಮರ್ಶೆ ಹಾಗೂ ಹಿನ್ನಡೆಯಾದ ಕ್ಷೇತ್ರಗಳಲ್ಲಿ ಅವಲೋಕನ ನಡೆಸಲಾಗುತ್ತಿದೆ. ಸಿಎಂ, ಡಿಸಿಎಂ ಸೇರಿ 24 ಘಟಾನುಘಟಿ ಕೈ ನಾಯಕರುಗಳು ತಮ್ಮ ತವರು ಹಾಗೂ ಉಸ್ತುವಾರಿ ಕ್ಷೇತ್ರಗಳಲ್ಲಿ ಸೋಲಿನ ಮುಖಭಂಗ ಎದುರಿಸುತ್ತಿದ್ದಾರೆ. ಸೋಲಿಗೆ ತಲೆದಂಡ ಮಾಡುವುದು ಅನುಮಾನವಾದರೂ ಹಿನ್ನಡೆಗೆ ಹೊಣೆಗಾರರನ್ನಾಗಿಸುವ ಸಾಧ್ಯತೆ ಹೆಚ್ಚಿದೆ.

ಲೋಕಸಮರದಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಹಿನ್ನಡೆ ಅನುಭವಿಸಿದವರಲ್ಲಿ 23 ಮಂದಿ ಘಟಾನುಘಟಿಗಳಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೇ ತವರು ಅಭ್ಯರ್ಥಿಗಳಿಗೆ ಗೆಲುವಿನ ಹಾರ ಹಾಕಿಸುವಲ್ಲಿ ವಿಫಲರಾಗಿದ್ದಾರೆ. ಉಳಿದಂತೆ ಸಚಿವರಾದ ಡಾ.ಜಿ.ಪರಮೇಶ್ವರ್​, ಕೆ.ಎನ್‌.ರಾಜಣ್ಣ, ಹೆಚ್‌.ಕೆ.ಪಾಟೀಲ, ಕೆ.ಹೆಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ, ಶಿವಾನಂದ ಪಾಟೀಲ್, ಎಂ.ಬಿ.ಪಾಟೀಲ್, ಎಂ.ಸಿ.ಸುಧಾಕರ್‌, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್‌, ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ, ಜಮೀರ್‌ ಅಹಮ್ಮದ್‌, ಬೈರತಿ ಸುರೇಶ್‌, ಎನ್‌. ಚಲುವರಾಯಸ್ವಾಮಿ, ಸಂತೋಷ್‌ ಲಾಡ್‌, ಲಕ್ಷ್ಮೀ ಹೆಬ್ಟಾಳ್ಕರ್‌, ಮಂಕಾಳ ವೈದ್ಯ, ಮಧು ಬಂಗಾರಪ್ಪ, ಡಿ.ಸುಧಾಕರ್‌, ಕೆ.ವೆಂಕಟೇಶ್‌ ತಮ್ಮ ಉಸ್ತುವಾರಿ ಹಾಗೂ ತವರು ಕ್ಷೇತ್ರಗಳಲ್ಲಿ ಕಾಂಗ್ರೆಸ್​​ ಗೆಲ್ಲಿಸುವಲ್ಲಿ ವಿಫಲರಾಗಿದ್ದಾರೆ.

ಸಚಿವರ ಸ್ವ-ಕ್ಷೇತ್ರಗಳಲ್ಲೂ ಹಿನ್ನಡೆ: ಹಲವು ಸಚಿವರುಗಳು ಉಸ್ತುವಾರಿ ಜಿಲ್ಲೆಯಲ್ಲಷ್ಟೇ ಅಲ್ಲದೆ, ತಾವು ಗೆದ್ದು ಬಂದ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳಿಗೆ ಮುನ್ನಡೆ ನೀಡುವಲ್ಲಿ ವಿಫಲರಾಗಿದ್ದಾರೆ‌.‌ ಈ ಸಚಿವರುಗಳಿಗೆ ಇದೀಗ ಸೋಲಿನ ಪರಾಮರ್ಶೆಯ ಹೃದಯ ಬಡಿತ ಹೆಚ್ಚಾಗಿದೆ. 17 ಸಚಿವರುಗಳಿಗೆ ಸ್ವ-ಕ್ಷೇತ್ರಗಳಲ್ಲೇ ತಮ್ಮ ಅಭ್ಯರ್ಥಿಗಳಿಗೆ ಮುನ್ನಡೆ ನೀಡುವಲ್ಲಿ ಸಾಧ್ಯವಾಗಿಲ್ಲ.

ಇದರಲ್ಲಿ ಮುಂಚೂಣಿಯಲ್ಲಿರುವವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್. ಬೆಳಗಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ವಿರುದ್ಧ ತಮ್ಮ ಮಗ ಮೃಣಾಲ್​ರನ್ನು ಕಣಕ್ಕಿಳಿಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸ್ವಂತ ಕ್ಷೇತ್ರವಾದ ಬೆಳಗಾವಿ ಗ್ರಾಮಾಂತರದಲ್ಲಿ ಎದುರಾಳಿಗೆ ಬರೋಬ್ಬರಿ 50,529 ಮತಗಳ ಮುನ್ನಡೆ ಕೊಟ್ಟಿದ್ದಾರೆ. ತುಮಕೂರು ಕಾಂಗ್ರೆಸ್‌ ಅಭ್ಯರ್ಥಿ ಮುದ್ದಹನುಮೇಗೌಡ ವಿರುದ್ಧ ಬಿಜೆಪಿಯ ವಿ.ಸೋಮಣ್ಣಗೆ ಗೃಹ ಸಚಿವ ಪರಮೇಶ್ವರ್‌ ಸ್ವ-ಕ್ಷೇತ್ರ ಕೊರಟಗೆರೆಯಲ್ಲಿ 25,541 ಹಾಗೂ ಸಚಿವ ಕೆ.ಎನ್‌.ರಾಜಣ್ಣ ಅವರ ಮಧುಗಿರಿ ಕ್ಷೇತ್ರದಲ್ಲಿ 12,802 ಮತಗಳ ಲೀಡ್‌ ಲಭಿಸಿದೆ.

ಇತ್ತ ಬೆಂಗಳೂರು ದಕ್ಷಿಣದಿಂದ ಪುತ್ರಿ ಸೌಮ್ಯಾರೆಡ್ಡಿ ಅವರನ್ನು ಕಣಕ್ಕಿಳಿಸಿದ್ದ ರಾಮಲಿಂಗಾರೆಡ್ಡಿ ಅವರು ಸ್ವಂತ ಕ್ಷೇತ್ರ ಬಿಟಿಎಂ ಲೇಔಟ್‌ನಲ್ಲಿಯೇ ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಬಿಟಿಎಂ ಬಡಾವಣೆಯಲ್ಲಿ ಸೌಮ್ಯಾರೆಡ್ಡಿಗೆ 9,349 ಮತಗಳ ಹಿನ್ನಡೆಯಾಗಿದೆ. ಅದೇ ರೀತಿ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸೊರಬ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ವಿರುದ್ಧ ಬಿಜೆಪಿಯ ಬಿ.ವೈ.ರಾಘವೇಂದ್ರಗೆ 17,937 ಮತಗಳ ಮುನ್ನಡೆ ಲಭಿಸಿತ್ತು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಪ್ರತಿನಿಧಿಸುವ ಗಾಂಧಿನಗರದಲ್ಲಿ 23,324 ಮತಗಳ ಹಿನ್ನಡೆ, ಸಚಿವ ಕೆ.ಎಚ್‌.ಮುನಿಯಪ್ಪರ ದೇವನಹಳ್ಳಿಯಲ್ಲಿ 5,231 ಮತಗಳ ಹಿನ್ನಡೆ ಉಂಟಾಗಿದೆ. ಕೋಲಾರದಲ್ಲಿ ಡಾ.ಎಂ.ಸಿ.ಸುಧಾಕರ್ ಸ್ವಕ್ಷೇತ್ರ ಚಿಂತಾಮಣಿಯಲ್ಲಿ 7,250 ಮತಗಳ ಹಿನ್ನಡೆ, ಸಚಿವ ಮಂಕಾಳ ವೈದ್ಯರ ಸ್ವ-ಕ್ಷೇತ್ರ ಭಟ್ಕಳದಲ್ಲಿ 32,403 ಮತಗಳ ಹಿನ್ನಡೆ, ಸಚಿವ ಡಿ.ಸುಧಾಕರ್ ಅವರ ಚಿತ್ರದುರ್ಗದ ಹಿರಿಯೂರು ಕ್ಷೇತ್ರದಲ್ಲಿ 6,197 ಮತಗಳ ಹಿನ್ನಡೆಯಾಗಿತ್ತು. ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಪ್ರತಿನಿಧಿಸುವ ಕಲಘಟಗಿ ಕ್ಷೇತ್ರದಲ್ಲಿ ಬಿಜೆಪಿಯ ಪ್ರಲ್ಹಾದ್​​ ಜೋಶಿಗೆ 32,797 ಮತಗಳ ಲೀಡ್ ಸಿಕ್ಕಿದೆ. ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ ಅವರ ಬಬಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸ್ಪರ್ಧಿಗೆ 3,351 ಮತಗಳ ಹಿನ್ನಡೆ ಆಗಿತ್ತು.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸಚಿವ ಕೃಷ್ಣ ಬೈರೇಗೌಡರ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಎದುರಾಳಿ ಬಿಜೆಪಿ ಅಭ್ಯರ್ಥಿಗೆ 35,051 ಮತಗಳ ಲೀಡ್ ಸಿಕ್ಕಿತ್ತು. ಮಂಡ್ಯ ಕ್ಷೇತ್ರದಲ್ಲಿ ಸಚಿವ ಎನ್‌.ಚಲುವರಾಯಸ್ವಾಮಿ ಅವರ ನಾಗಮಂಗಲದಲ್ಲಿ ಎದುರಾಳಿ ಹೆಚ್​ಡಿಕೆಗೆ 46,511 ಮತಗಳ ಲೀಡ್ ದೊರೆತಿದೆ. ಅದೇ ರೀತಿ ಸಚಿವ ಶಿವಾನಂದ ಪಾಟೀಲ್‌ ಸ್ವ-ಕ್ಷೇತ್ರದ ಬಸವನ ಬಾಗೇವಾಡಿಯಲ್ಲಿ 17,553 ಮತಗಳ ಲೀಡ್‌ ಬಿಜೆಪಿ ಅಭ್ಯರ್ಥಿಗೆ ಲಭಿಸಿತ್ತು. ಹಾವೇರಿ ಲೋಕಸಭೆ ಕ್ಷೇತ್ರದ ಪೈಕಿ ಸಚಿವ ಹೆಚ್.ಕೆ.ಪಾಟೀಲರ ಗದಗ ಕ್ಷೇತ್ರದಲ್ಲಿ 10,509 ಮತಗಳ ಹಿನ್ನಡೆ ಉಂಟಾಗಿದೆ.

ಹೀಗೆ, ಸಚಿವರುಗಳೇ ತಮ್ಮ ಸ್ವ-ಕ್ಷೇತ್ರಗಳಲ್ಲಿ ಕಾಂಗ್ರೆಸ್​​ ಅಭ್ಯರ್ಥಿಗೆ ಮುನ್ನಡೆ ಒದಗಿಸುವಲ್ಲಿ ವಿಫಲರಾಗಿದ್ದು, ಹೈಕಮಾಂಡ್ ಕಣ್ಣು ಕೆಂಪಾಗಿಸಿದೆ.

ಇದನ್ನೂ ಓದಿ: ನೂತನ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಲ್ಹಾದ್​ ಜೋಶಿ ಮೇಲೆ ರಾಜ್ಯದ ಹತ್ತು ಹಲವು ನಿರೀಕ್ಷೆ - Karnataka Expectations on Central

Last Updated : Jun 13, 2024, 9:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.