ETV Bharat / state

ಬೆಂಗಳೂರಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ: 9 ಕಾರಿಡಾರ್‌ಗಳಲ್ಲಿ ಪ್ರತ್ಯೇಕ ಬಸ್ ಲೇನ್ ನಿರ್ಮಾಣಕ್ಕೆ ಮುಂದಾದ ಪಾಲಿಕೆ - ಬೆಂಗಳೂರು ಸಂಚಾರ ದಟ್ಟಣೆ

ಬೆಂಗಳೂರಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ತಗ್ಗಿಸಲು ಸುಮಾರು 9 ಕಾರಿಡಾರ್‌ಗಳಲ್ಲಿ ಪ್ರತ್ಯೇಕ ಬಸ್ ಲೇನ್ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದೆ.

corporation  separate bus lane  corridors  ಬಸ್ ಲೇನ್ ನಿರ್ಮಾಣ  ಸಂಚಾರ ದಟ್ಟಣೆ
ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ;
author img

By ETV Bharat Karnataka Team

Published : Feb 18, 2024, 11:47 AM IST

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿರ್ವಹಿಸಲು ಮತ್ತು ಬಿಎಂಟಿಸಿ ಬಸ್​ಗಳಿಂದ ಉಂಟಾಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಪಾಲಿಕೆ ಪ್ರತ್ಯೇಕ ಬಸ್ ಲೇನ್ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.

ಹೆಚ್ಚು ಸಂಚಾರ ದಟ್ಟಣೆ ಇರುವ ಒಂಬತ್ತು ಕಾರಿಡಾರ್‌ಗಳಲ್ಲಿ ಬಸ್ ಲೇನ್‌ಗಳನ್ನು ನಿರ್ಮಾಣ ಮಾಡಲು ಯೋಜನೆ ಸಿದ್ಧವಾಗಿದೆ. ಬಿಎಂಟಿಸಿಯ ಮನವಿ ಕೂಡ ಬಂದಿರುವ ಹಿನ್ನೆಲೆಯಲ್ಲಿ ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಕನಕಪುರ ರಸ್ತೆ ಸೇರಿದಂತೆ 9 ಕಾರಿಡಾರ್‌ಗಳಲ್ಲಿ ಪ್ರತ್ಯೇಕ ಬಸ್ ಲೇನ್ ನಿರ್ಮಾಣವಾಗಲಿದೆ.

ಒಟ್ಟು 83 ಕಿ.ಮೀ ಬಸ್ ಲೇನ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಖಾಸಗಿ ಏಜೆನ್ಸಿಯಿಂದ ಬಸ್ ಲೇನ್ ಡಿಸೈನ್ ಸಿದ್ಧವಾಗುತ್ತಿದೆ. ಪ್ರತ್ಯೇಕ ಪಥವನ್ನು ನಿರ್ಮಿಸಲು ಟೆಂಡರ್‌ ಆಹ್ವಾನಿಸಲಾಗುತ್ತಿದೆ. ಈ ಹಿಂದೆ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರ ಬಳಿಯಿರುವ ಟಿನ್ ಫ್ಯಾಕ್ಟರಿವರೆಗೆ ಪರೀಕ್ಷಾರ್ಥವಾಗಿ ಬಸ್ ಲೇನ್ ನಿರ್ಮಿಸಲಾಗಿದೆ. ಅಲ್ಲಿ ನಮ್ಮ ಮೆಟ್ರೋ ಕಾಮಗಾರಿಯಿಂದಾಗಿ ಆ ಪಥದಲ್ಲಿ ಕಾರ್ಯಾಚರಣೆಯು ಸಾಧ್ಯವಾಗಿಲ್ಲ.

ನಗರದ 9 ಕಾರಿಡಾರ್‌ಗಳಲ್ಲಿ 280 ಕೋಟಿ ವೆಚ್ಚದಲ್ಲಿ 83 ಕಿ.ಮೀ ಬಸ್ ಲೇನ್ ಮಾಡಲು ತೀರ್ಮಾನಿಸಲಾಗಿದ್ದು, ಆಯಾ ರಸ್ತೆಗಳಲ್ಲಿ 3.5 ಮೀಟರ್ ಅಗಲವನ್ನು ಮಾತ್ರ ಬಸ್‌ಗಳ ಸಂಚಾರಕ್ಕೆ ಮೀಸಲಿಡಲು ನಿರ್ಧರಿಸಲಾಗಿದೆ. ಬಿಎಂಟಿಸಿ, ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನ ಸೇರಿದಂತೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ. ಇತರ ವಾಹನಗಳು ಬರುವುದನ್ನು ತಡೆಯಲು ಬೋರ್ಡ್ ಅಳವಡಿಸಲು ನಿರ್ಧಾರ ಮಾಡಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಓದಿ: ಬೆಂಗಳೂರು: ಸಹೋದರಿಯ ಎಂಗೇಜ್ಮೆಂಟ್​ಗೆ ಬರಲಿಲ್ಲವೆಂದು ಪತ್ನಿಗೆ ಚಾಕು ಇರಿದ ಪತಿಯ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.