ETV Bharat / state

ಸೆಂಚುರಿ ದಾಟಿದರೂ ಬತ್ತದ ಉತ್ಸಾಹ: ಮತಗಟ್ಟೆಗೆ ಬಂದು ಮತದಾನದ ಹಕ್ಕು ಚಲಾಯಿಸಿದ ಹಿರಿಯ ನಾಗರಿಕರು - Lok Sabha election 2024 - LOK SABHA ELECTION 2024

ರಾಜ್ಯದ 14 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯ ಮೊದಲನೇ ಹಂತದ ಮತದಾನ ನಡೆಯುತ್ತಿದೆ. ಹಿರಿಯ ನಾಗರಿಕರು ಮತಗಟ್ಟೆಗಳಿಗೆ ಉತ್ಸಾಹದಿಂದ ಆಗಮಿಸಿ ವೋಟ್ ಹಾಕಿದರು.

VOTING BY SENIOR CITIZENS  LOK SABHA ELECTION
ಉತ್ಸಹದಿಂದ ಬಂದು ಮತದಾನದ ಹಕ್ಕು ಚಲಾಯಿಸಿದ ಹಿರಿಯ ನಾಗರಿಕರು
author img

By ETV Bharat Karnataka Team

Published : Apr 26, 2024, 2:19 PM IST

Updated : Apr 26, 2024, 5:06 PM IST

ಮತದಾನದ ಹಕ್ಕು ಚಲಾಯಿಸಿದ ಹಿರಿಯ ನಾಗರಿಕರು

ಬೆಂಗಳೂರು/ ಚಿತ್ರದುರ್ಗ: ರಾಜ್ಯದ 14 ಕ್ಷೇತ್ರಗಳಲ್ಲಿ ಇಂದು (ಶುಕ್ರವಾರ) ಲೋಕಸಭೆ ಚುನಾವಣೆಯ ಮೊದಲನೇ ಹಂತದ ಮತದಾನ ನಡೆಯುತ್ತಿದೆ. ಮತಗಟ್ಟೆಗಳಿಗೆ ವ್ಹೀಲ್​ಚೇರ್‌​ನಲ್ಲಿ ಉತ್ಸಾಹದಿಂದ ಆಗಮಿಸಿದ ಹಿರಿಯ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತದಾನಕ್ಕೆ ಹಿರಿಯ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಿದ್ದರೂ ಆ ಸೌಲಭ್ಯ ಬಿಟ್ಟು ಮತಗಟ್ಟೆಗಳಿಗೇ ಬಂದು ಮತ ಹಾಕುತ್ತಿರುವ ದೃಶ್ಯ ಕಂಡುಬರುತ್ತಿದೆ. ನಡೆಯಲು ಕಷ್ಟವಾಗುತ್ತಿದ್ದರೂ ವ್ಹೀಲ್​ಚೇರ್‌ ಬಳಸಿಕೊಂಡು ಮತ ಚಲಾಯಿಸುವ ಮೂಲಕ ಯುವ ಮತದಾರರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ.

ಸಿ.ವಿ. ರಾಮನ್ ನಗರ ನಿವಾಸಿ ಶಿವರಾಮಕೃಷ್ಣ ಶಾಸ್ತ್ರಿ ಅವರು ತಮ್ಮ 86ನೇ ವಯಸ್ಸಿನಲ್ಲೂ ಉತ್ಸಾಹದಿಂದ ಮತಗಟ್ಟೆಗೆ ಬಂದು 20ನೇ ಬಾರಿ ಮತದಾನ ಮಾಡಿದರು. ಹಿರಿಯ ನಾಗರಿಕರಿಗೆ ಮನೆಯಲ್ಲಿ‌ ಮತದಾನ ಮಾಡಲು ಅವಕಾಶವಿತ್ತು. ಆದರೆ, ಮತಗಟ್ಟೆಯಲ್ಲೇ ಮತದಾನ ಮಾಡಬೇಕೆಂದು ಶಿವರಾಮಕೃಷ್ಣ ಶಾಸ್ತ್ರಿ ಅವರು ತೀರ್ಮಾನಿಸಿದ್ದರು. ಹೀಗಾಗಿ, ಮಗ ಹಾಗೂ ಸೊಸೆ ಜೊತೆ, ಡಿಆರ್‌ಡಿಒ ಕೇಂದ್ರಿಯ ವಿದ್ಯಾಲಯದ ಮತಗಟ್ಟೆಗೆ ಬಂದು‌ ಮತ ಚಲಾವಣೆ ಮಾಡಿದರು. ಅವರನ್ನು ಪೊಲೀಸರು ವ್ಹೀಲ್​ಚೇರ್‌ನಲ್ಲಿ‌ ಮತಗಟ್ಟೆಗೆ ಕರೆದೊಯ್ದು ಮತ ಚಲಾಯಿಸಲು ಅನುಕೂಲ‌ ಮಾಡಿಕೊಟ್ಟರು.

ಮತದಾನದ ನಂತರ ಮಾತನಾಡಿದ ಶಿವರಾಮಕೃಷ್ಣ ಶಾಸ್ತ್ರಿ‌, ''ಮತದಾನ ನಮ್ಮ ಹಕ್ಕು. ಮನೆಯಲ್ಲಿ ಮತದಾನ ಮಾಡಿದರೆ ಅದರ ಮಹತ್ವ ತಿಳಿಯುವುದಿಲ್ಲ. ಜನರೂ ಭೇಟಿಯಾಗುವುದಿಲ್ಲ. ಅದಕ್ಕೆ‌ ಮತಗಟ್ಟೆಗೆ ಬಂದಿದ್ದೇನೆ. ಇಲ್ಲಿ ಎಲ್ಲರೂ‌ ಭೇಟಿಯಾಗುತ್ತಾರೆ. ಖುದ್ದು ಮತಗಟ್ಟೆಯಲ್ಲಿ‌ ಮತ ಚಲಾಯಿಸಿದರೆ ಮನಸ್ಸಿಗೆ ಖುಷಿ'' ಎಂದು ಹೇಳಿದರು.

ಬೆಂಗಳೂರು ನಗರದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪದ್ಮನಾಭ ನಗರದ ಹೊಸಕೆರೆಹಳ್ಳಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 6 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪರಿಮಳಾ ಬಾಯಿ ಎಂಬ 85 ವರ್ಷದ ಮಹಿಳೆ ತಮ್ಮ ಮಗನೊಂದಿಗೆ ಬಂದು ಮತವನ್ನು ಚಲಾವಣೆ ಮಾಡಿದರು. ಮನೆಯಿಂದ ಮತ ಹಾಕುವ ಸೌಲಭ್ಯ ಬಳಸಲು ನಿರಾಕರಿಸಿ ಮತಗಟ್ಟೆಗೆ ಬಂದು ಮತಹಾಕುವ ಆಯ್ಕೆ ಮಾಡಿಕೊಂಡಿದ್ದು ಅದರಂತೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಬೆಂಗಳೂರು ನಗರದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪದ್ಮನಾಭನಗರದ ಕಾರ್ಮಲ್ ಕನ್ನಡ ಮಾಧ್ಯಮ ಶಾಲ್ಲೆಯಲ್ಲಿ‌ ಎರಡು ಮತಗಟ್ಟೆ ಸ್ಥಾಪನೆಯಾಗಿದ್ದು, 101 ವರ್ಷದ ನಾರಾಯಣ ರಾವ್ ಹಾಗೂ ಅವರ ಪತ್ನಿ 92 ವರ್ಷದ ಲಕ್ಷ್ಮಿ ಅವರು ತಮ್ಮ ಮತವನ್ನು ಚಲಾಯಿಸಿದರು.

ಮತಗಟ್ಟೆಗಳಿಗೆ ಬರಲು ಕಷ್ಟ ಎನ್ನುವ ಕಾರಣಕ್ಕೆ ನಡೆಯಲಾಗದ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ನೀಡಿದ್ದರೂ ಬಹುತೇಕ ಹಿರಿಯ ನಾಯಕರಿರು ಮತಗಟ್ಟೆಗಳಿಗೆ ಬಂದೇ ತಮ್ಮ ಹಕ್ಕು ಚಲಾಯಿಸಿ ಖುಷಿಪಟ್ಟರು.

ಆಟೋದಲ್ಲಿ ಬಂದು ವೋಟ್​ ಮಾಡಿದ 101 ವರ್ಷದ ವೃದ್ಧೆ: ಇನ್ನು ಮೈಸೂರಿನಲ್ಲಿ 101 ವರ್ಷದ ವೃದ್ಧೆ ತಿಮ್ಮಮ್ಮ ಆಟೋದಲ್ಲಿ ಬಂದು ಮತ ಚಲಾಯಿಸಿದರು. 84 ವರ್ಷದ ನಿವೃತ್ತ ವಿಜ್ಞಾನಿ ಅಶೋಕ್ ಮಜಲಿ ವ್ಹೀಲ್​ಚೇರ್​ನಲ್ಲಿ ಆಗಮಿಸಿ ವೋಟ್​ ಮಾಡಿರುವುದು ವಿಶೇಷ ಆಗಿತ್ತು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನೆಲಮಂಗಲ ತಾಲ್ಲೂಕಿನ ನಿಜಗಲ್ಲು ಕೆಂಪೋಹಳ್ಳಿ ಮತಗಟ್ಟೆಯಲ್ಲಿ ಮಾದೇನಹಳ್ಳಿ ಗ್ರಾಮದ ಶತಾಯುಷಿ ಗಂಗಮ್ಮ (105) ಅವರು ಮತದಾನ ಮಾಡಿದರು. ಸ್ವತಂತ್ರ ಭಾರತದ ಎಲ್ಲ ಚುನಾವಣೆಗಳಲ್ಲಿಯೂ ಮತದಾನ ಮಾಡಿದ ಹೆಗ್ಗಳಿಕೆಗೆ ಗಂಗಮ್ಮ ಅವರು ಪಾತ್ರರಾಗಿದ್ದಾರೆ.

senior-citizens voting
ಹಕ್ಕು ಚಲಾಯಿಸಿದ ಹಿರಿಯ ನಾಗರಿಕರು

ಮತ್ತೊಂದೆಡೆ, ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 108ರಲ್ಲಿ ಮತದಾನ ಮಾಡಲು ಹಿರಿಯ ನಾಗರಿಕರು ಆಸಕ್ತಿ ತೋರಿಸಿದ್ದಾರೆ. ಬಿಸಿಲಿನ ಪ್ರಖರತೆ ಹೆಚ್ಚಾಗಬಹುದೆಂದು ಮತದಾರರು ವಿವಿಧ ಮತಗಟ್ಟೆ ಬಳಿ ದೌಡಾಯಿಸಿ ಬೆಳಗ್ಗೆಯಿಂದಲೇ ಮತ ಚಲಾಯಿಸುತ್ತಿದ್ದಾರೆ. ಬೆಳಗ್ಗೆಯೇ ಸಾಲಾಗಿ ನಿಂತು ಮತದಾನ ಮಾಡುತ್ತ ಆಸಕ್ತಿ ತೋರುತ್ತಿದ್ದಾರೆ. ಇದಲ್ಲದೇ ಹಿರಿಯ ನಾಗರಿಕರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಮನೆಯಿಂದಲೇ ಮತದಾನ ಮಾಡಲು ಅವಕಾಶವಿದ್ರೂ ನಗರದ 86 ವರ್ಷದ ಲೀಲಾ ಮನೋಹರ್ ಅವರು ಮತಗಟ್ಟೆಗೆ ಆಗಮಿಸಿ ಉತ್ಸಾಹದಿಂದಲೇ ಮತ ಚಲಾಯಿಸಿದರು.

ವ್ಹೀಲ್​ಚೇರ್​ನಲ್ಲಿ ಬಂದು ಮತ ಚಲಾಯಿಸಿದ ಇಬ್ಬರು ವೃದ್ಧೆಯರು: 75 ವರ್ಷದ ಸುಲೋಚನಾ ಹಾಗೂ ಲೀಲಾ ಮನೋಹರ್ ಅವರು ವ್ಹೀಲ್​ಚೇರ್​ನಲ್ಲಿ ಬಂದು ಚಿತ್ರದುರ್ಗದ ಜೆಸಿಆರ್ ಬಡಾವಣೆಯ ಮತಗಟ್ಟೆ ಸಂಖ್ಯೆ 191ರಲ್ಲಿ ಮತದಾನ ಮಾಡಿದರು. ವೃದ್ಧೆ ಸುಲೋಚನಾ ಅವರು ಊರುಗೋಲು ನೆರವಿನಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಮತದಾರರಿಗೆ ನೇರಳಿನ ವ್ಯವಸ್ಥೆ, ಮೊಬೈಲ್‌ಗೆ ನಿರ್ಬಂಧ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 2,168 ಕ್ಷೇತ್ರಗಳಿವೆ. ವಿವಿಧ ಮತಗಟ್ಟೆಗಳನ್ನು ಸಿಂಗರಿಸಲಾಗಿದೆ. ಒಂದು ವಿಧಾನಸಭಾ ಕ್ಷೇತ್ರಕ್ಕೆ ತಲಾ 5 ಸಖಿ ಮತಗಟ್ಟೆಗಳು, ತಲಾ ಒಂದರಂತೆ ವಿಶೇಷಚೇತನರ ಮತಗಟ್ಟೆ, ಯುವ ಮತಗಟ್ಟೆಗಳು ಇವೆ. ಚಿತ್ರದುರ್ಗ ನಗರದ ಸರಸ್ವತಿ ಕಾನೂನು ಕಾಲೇಜು ಮತಗಟ್ಟೆಗೆ ಕೋಟೆ ಮಾದರಿಯ ಮೆರಗನ್ನು ನೀಡಿರುವುದು ವಿಶೇಷವಾಗಿದೆ.

ಇದನ್ನೂ ಓದಿ: ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಮತ ಚಲಾಯಿಸಿದ ಸಿಎಂ ಸಿದ್ದರಾಮಯ್ಯ - CM Siddaramaiah casting his vote

Last Updated : Apr 26, 2024, 5:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.