ಶಿವಮೊಗ್ಗ: ರಾಜ್ಯದ ಪ್ರಸಿದ್ದ ಹುಲಿ ಮತ್ತು ಸಿಂಹಧಾಮಗಳಲ್ಲಿ ಒಂದಾದ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಸರ್ವೇಶ(13) ಎಂಬ ಹೆಸರಿನ ಸಿಂಹ ಮೃತಪಟ್ಟಿದೆ. ಸರ್ವೇಶ ಹುಲಿ ಸಿಂಹಧಾಮದ ಆರ್ಕಷಣೆಯ ಕೇಂದ್ರವಾಗಿದ್ದ. ಈತ ಬನ್ನೇರುಘಟ್ಟದಿಂದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಕಳೆದ 6 ವರ್ಷದ ಹಿಂದೆ ಆಗಮಿಸಿದ್ದ ಎಂಬುದು ತಿಳಿದು ಬಂದಿದೆ.
ಸರ್ವೇಶನಿಗೆ ವಯಸ್ಸಾಗಿದ್ದು ಬಿಟ್ಟರೆ, ಆರೋಗ್ಯವಾಗಿಯೇ ಇದ್ದ. ನಿನ್ನೆ ರಾತ್ರಿ ವಾಂತಿ ಮಾಡಿಕೊಂಡಿದ್ದ. ತಕ್ಷಣ ಹುಲಿ ಸಿಂಹಧಾಮದ ವೈದ್ಯರು ಸೇರಿದಂತೆ ಪಶು ವೈದ್ಯಕೀಯ ಕಾಲೇಜಿನ ವೈದ್ಯರು ಚಿಕಿತ್ಸೆ ನೀಡಿದ್ದರೂ ಇಂದು ಬೆಳಗ್ಗೆ ಸರ್ವೇಶ ಸಾವನ್ನಪ್ಪಿದ್ದಾನೆ. ಸಾಮಾನ್ಯವಾಗಿ ಸಿಂಹಗಳು ಕನಿಷ್ಠ 10-12 ವರ್ಷ ಬದುಕುತ್ತವೆ.
ಸರ್ವೆಶ್ ಸಾವಿನ ಕುರಿತು ಹುಲಿ ಮತ್ತು ಸಿಂಹಧಾಮದ ಸಿಇಒ ಮುಕುಂದ್ ಚಂದ್ ಈಟಿವಿ ಭಾರತ್ಗೆ ದೂರವಾಣಿ ಮೂಲಕ ಮಾತನಾಡಿದ್ದು, ಸರ್ವೇಶ್ ಹಿಮೋಪ್ರೊಟೊಜೋನ್ ಎಂಬ ಕಾಯಿಲೆಯಿಂದ ಬಳಲಿ ಸಾವನ್ನಪ್ಪಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ಇನ್ನು ಆತನ ಅಂಗಾಂಗಗಳನ್ನು ಬನ್ನೇರುಘಟ್ಟದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಸಿಂಹದ ಜೊತೆ ಕಾದಾಟ ನಡೆಸಿ ಗಾಯಗೊಂಡಿದ್ದ ಸಿಂಹಿಣಿ ಸಾವು!